- Kannada News Photo gallery Yogaraj Bhat Directorial Garadi Movie's Hodirale Halagi Song Crossed 15 Lakh views
ಭಟ್ಟರು ಹೊಡೆದ ‘ಹಲಗಿ’ ಸೂಪರ್ ಹಿಟ್; ಲಕ್ಷ ಲಕ್ಷ ವೀಕ್ಷಣೆ ಪಡೆದ ನಿಶ್ವಿಕಾ ನಾಯ್ಡು ಡ್ಯಾನ್ಸ್
Hodirale Halagi Song: ‘ಹೊಡಿರೆಲೆ ಹಲಗಿ..’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 16 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಹಾಡಿಗೆ ಎಲ್ಲ ಕಡೆಗಳಿಂದ ಪ್ರಶಂಸೆ ಬರುತ್ತಿದೆ.
Updated on:Jun 23, 2023 | 10:38 AM

ನಟಿ ನಿಶ್ವಿಕಾ ನಾಯ್ಡು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ. ನಟನೆಯ ಜೊತೆಗೆ ಅವರು ಡ್ಯಾನ್ಸ್ನಲ್ಲೂ ಪಳಗಿದ್ದಾರೆ. ಅವರು ‘ಗರಡಿ’ ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇತ್ತೀಚೆಗೆ ರಿಲೀಸ್ ಆಗಿ, ಹಿಟ್ ಎನಿಸಿಕೊಂಡಿದೆ.

ಕೌರವ ಪ್ರೊಡಕ್ಷನ್ ಹೌಸ್ ಲಾಂಛನದ ಅಡಿಯಲ್ಲಿ ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ‘ಗರಡಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ಅವರು ‘ಗರಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ‘ಹೊಡಿರೆಲೆ ಹಲಗಿ..’ ಹಾಡು ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

‘ಹೊಡಿರೆಲೆ ಹಲಗಿ..’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 16 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಹಾಡಿಗೆ ಎಲ್ಲ ಕಡೆಗಳಿಂದ ಪ್ರಶಂಸೆ ಬರುತ್ತಿದೆ. ಸಖತ್ ಆಗಿ ಕುಣಿದ ನಿಶ್ವಿಕಾ ಅವರನ್ನು ಜನರು ಮೆಚ್ಚಿದ್ದಾರೆ.

ಯೋಗರಾಜ್ ಭಟ್ ಬರೆಯೋ ಹಾಡುಗಳು ಡಿಫರೆಂಟ್ ಆಗಿರುತ್ತವೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಹಾಡನ್ನು ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್ನಲ್ಲಿ ಇಡೀ ಸಾಂಗ್ನ ಚಿತ್ರೀಕರಿಸಲಾಗಿದೆ.

ಹಾಡು ಹಿಟ್ ಆಗೋದು ತುಂಬಾನೇ ಮುಖ್ಯವಾಗುತ್ತದೆ. ಸಾಂಗ್ ಯಶಸ್ಸು ಕಂಡರೆ ಸಿನಿಮಾಗೆ ಮೈಲೇಜ್ ಸಿಗುತ್ತದೆ. ಈಗ ‘ಹೊಡಿರೆಲೆ ಹಲಗಿ..’ ಹಾಡಿನಿಂದ ‘ಗರಡಿ’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
Published On - 10:37 am, Fri, 23 June 23



















