Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ದಸರಾ ಎಂದರೆ ಸಾಕು ರಜಾದಿನಗಳು, ಈ ಸಮಯದಲ್ಲಿ ಹೊರಗೆ ಟ್ರಿಪ್ ಹೋಗುವ ಎಂದು ಈಗಾಗಲೇ ಪ್ಲಾನ್ ಹಾಕಿರಬಹುದು ಆದರೆ ಎಲ್ಲಿಗೆ ಹೀಗುವ ಚಿಂತೆ ನಿಮ್ಮಲ್ಲಿದೆ, ಔಟ್ ಆಫ್ ಸ್ಟೇಟ್ ಹೋಗುವ ಬದಲು ನಮ್ಮ ರಾಜ್ಯ ಕರ್ನಾಟಕದಲ್ಲೇ ಕೆಲವೊಂದು ಪ್ರದೇಶಗಳು ಇದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2022 | 5:22 PM

ದಸರಾ ಎಂದರೆ  ಸಾಕು ರಜಾದಿನಗಳು, ಈ ಸಮಯದಲ್ಲಿ ಹೊರಗೆ ಟ್ರಿಪ್ ಹೋಗುವ ಎಂದು ಈಗಾಗಲೇ ಪ್ಲಾನ್ ಹಾಕಿರಬಹುದು ಆದರೆ ಎಲ್ಲಿಗೆ ಹೋಗುವುದು ಎಂಬ ಚಿಂತೆ ನಿಮ್ಮಲ್ಲಿದೆ, ಔಟ್ ಆಫ್ ಸ್ಟೇಟ್ ಹೋಗುವ ಬದಲು ನಮ್ಮ ರಾಜ್ಯ ಕರ್ನಾಟಕದಲ್ಲೇ ಕೆಲವೊಂದು ಪ್ರದೇಶಗಳು ಇದೆ. ಅಲ್ಲಿಯೇ ನಿಮ್ಮ ಪ್ರವಾಸ ಮಾಡಿ , ನಿಮ್ಮ ಸಮಯವು ಉಳಿಯುತ್ತದೆ. ನಮ್ಮ ಕರ್ನಾಟಕದಲ್ಲೇ ಇಂತಹ ಸೌಂದರ್ಯಯುತವಾದ ಪ್ರದೇಶಗಳಿಗೆ ಭೇಟಿ ನೀಡಿ ನಿಮ್ಮ  ಕುಟುಂಬದ ಜೊತೆಗೆ ಆನಂದ ಕ್ಷಣಗಳನ್ನು ಕಳೆಯಬಹುದು.

1 / 10
ನಾಗರಹೊಳೆ: ನಾಗರಹೊಳೆ ಇದು ಕೂಡ ಒಂದು ಸುಂದರ ತಾಣ, ಇಲ್ಲಿ ನಿಮ್ಮ ಮಕ್ಕಳ ಜೊತೆಗೆ ಬಂದರೆ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಕೆಲವೊಂದು ಪ್ರಾಣಿಗಳ ಪರಿಚಯವನ್ನು ಮಾಡಿಕೊಳ್ಳಬಹುದು. ಈ ಉದ್ಯಾನವನದಲ್ಲಿ ಹಲವು ಜಾತಿಯ   ವನ್ಯಜೀವಿಗಳು ಇವೆ. ಮಕ್ಕಳ ಮನಸ್ಸಿಗೂ ಆನಂದವನ್ನು ನೀಡುತ್ತದೆ.  ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಶ್ರೀಮಂತ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಮೇ ವರೆಗಿನ ಸಮಯ ಕೊಡಗಿನಲ್ಲಿರುವ ನಾಗರಹೊಳೆ ಅಭಯಾರಣ್ಯವನ್ನು ಭೇಟಿಗೆ ಸೂಕ್ತ ಸಮಯವಾಗಿರುತ್ತದೆ.

2 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ಗೋಕರ್ಣ: ಕಡಲತೀರ ಎಂದರೆ ಖಂಡಿತ ನಿಮ್ಮ ಮಕ್ಕಳು ಇಷ್ಟಪಡುತ್ತಾರೆ. ಅವರಿಗೆ ನೀರು ಎಂದರೆ ತುಂಬಾ ಇಷ್ಟ, ಈ ಕಾರಣಕ್ಕೆ ಕಡಲ ತೀರದ ಗೋಕರ್ಣಕ್ಕೆ ಹೋಗುವುದು ಸೂಕ್ತ, ಇದರ ಜೊತೆಗೆ ಅಲ್ಲಿ ಧಾರ್ಮಿಕ ಕ್ಷೇತ್ರಗಳು ಕೂಡ ನಿಮಗೆ ಕಾಣ ಸಿಗುತ್ತದೆ. ಕರ್ನಾಟಕದ ಅತ್ಯುತ್ತಮ ಬೀಚ್ ಪಟ್ಟಣಗಳಲ್ಲಿ ಗೋಕರ್ಣ ಕೂಡಾ ಒಂದಾಗಿದೆ. ಈ ಸ್ಥಳವು ಶಿವದೇವರ ಆವಾಸಸ್ಥಾನವಾಗಿದ್ದು (ಮಹಾಬಲೇಶ್ವರ ದೇವಾಲಯ) ಇದು ನಿಮಗೆ ಆಧ್ಯಾತ್ಮಿಕ ಸ್ಪರ್ಶವನ್ನು ನೀಡುತ್ತದೆ.

3 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ದುಬಾರೆ: ಎಲಿಫೆಂಟ್ ಕ್ಯಾಂಪ್ (ಆನೆ ಶಿಬಿರ) ದುಬಾರೆ ಆನೆ ಶಿಬಿರಕ್ಕೆ ಒಂದು ಬಾರಿ ಭೇಟಿ ನೀಡದರೆ ಖಂಡಿತ ಮತ್ತೆ ಮತ್ತೆ ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. ಈ ದಸರಾ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿ ನಿಮ್ಮ ಸುಂದರ ಕ್ಷಣಗಳನ್ನು ಕಳೆಯಬಹುದು, ಇದರ ಜೊತೆಗೆ ಮಕ್ಕಳಿಗೆ ಆನೆ ಎಂದರೆ ಖಂಡಿತ ಇಷ್ಟಪಡುತ್ತಾರೆ. ದುಬಾರೆ ಎಲಿಫೆಂಟ್ ಕ್ಯಾಂಪ್ ನಲ್ಲಿ ಕೇವಲ ಆನೆಗಳ ಜೊತೆ ಆಟವಾಡುವುದು ಮಾತ್ರವಲ್ಲದೆ, ಅವುಗಳ ಬೆಳವಣಿಗೆ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.

4 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ದಾಂಡೇಲಿ: ಕರ್ನಾಟಕದ ಎರಡನೇ ಅತ್ಯಂತ ದೊಡ್ಡ ವನ್ಯ ಜೀವಿ ಅಭಯಾರಣ್ಯ ದಾಂಡೇಲಿ. ಇದೊಂದು ಅದ್ಬುತವಾದ ಪ್ರವಾಸಿ ತಾಣವಾಗಿದ್ದು ಕಾಳಿ ನದಿಯ ದಡದಲ್ಲಿರುವ ಈ ಸ್ಥಳಕ್ಕೆ ಕುಟುಂಬದವರ ಜೊತೆ ಪ್ರವಾಸ ಮಾಡುವುದು ಒಂದು ಅದ್ಬುತ ಕ್ಷಣವಾಗಿರುತ್ತದೆ. ದಾಂಡೇಲಿಗೆ ನಿಮ್ಮ ಮಕ್ಕಳ ಜೊತೆಗೆ ಹೋದರೆ ಇನ್ನೂ ಒಳ್ಳೆಯ ಅನುಭವ ಸಿಗುತ್ತದೆ. ದಾಂಡೇಲಿಯು ಸುಂದರ ಪ್ರಕೃತಿಯಿಂದ ಕೂಡಿದೆ. ಅಕ್ಟೋಬರ್ ತಿಂಗಳು ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತವಾದ ಸಮಯ. ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಜೊತೆಗೆ, ನೀವು ಸುಪಾ ಅಣೆಕಟ್ಟು, ಅಂಶಿ ರಾಷ್ಟ್ರೀಯ ಉದ್ಯಾನವನ, ಕವಲ ಗುಹೆಗಳು, ದಾಂಡೆಲ್ಲಾಪ ದೇವಾಲಯ, ಶಿರೋಲಿ ಶಿಖರ ಮತ್ತು ಶ್ರೀ ತುಳಜಾ ಭವಾನಿ ದೇವಾಲಯವನ್ನು ಸಹ ಭೇಟಿ ಮಾಡಬಹುದು. ಈ ಪ್ರತಿಯೊಂದು ಪ್ರದೇಶಕ್ಕೂ ಒಂದೊಂದು ಹಿನ್ನಲೆ ಇದೆ, ಇಲ್ಲಿ ಜಂಗಲ್ ಸಫಾರಿಗಳನ್ನು ಮಾಡಬಹುದು.

5 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ಮೈಸೂರು: ಮೈಸೂರು ಎಂದರೆ ಎಲ್ಲರೂ ಇಷ್ಟಪಡುವ ಸ್ಥಳ ಅದರಲ್ಲೂ ದಸರಾ ಸಮಯದಲ್ಲಿ ಇನ್ನೂ ಹೆಚ್ಚು ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ ಮೈಸೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಮೈಸೂರಿನಲ್ಲಿ ದಸರಾ ಸಮಯದಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ಕಲೆ ಇರುತ್ತದೆ. ಮೈಸೂರು ಮೃಗಾಲಯ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್, ಬೃಂದಾವನ ಉದ್ಯಾನವನ ಮುಂತಾದ ಪ್ರದೇಶಗಳನ್ನು ನಿಮ್ಮ ಮಕ್ಕಳು ಖಂಡಿತವಾಗಿಯೂ ಇಷ್ಟಪಡುತ್ತಾರೆ.

6 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ಸಿರಿಮನೆ ಜಲಪಾತ: ದಸರಾ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಖಂಡಿತ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಪರಿಸರದ ಜೊತೆಗೆ ಕಾಲ ಕಳೆದಾಗ ನಿಮ್ಮ ಮನಸ್ಸು ಇನ್ನೂ ಹಕ್ಕಿಯಂತೆ ಹಾರುತ್ತದೆ. ಜಲಪಾತಗಳನ್ನು ದೂರದಿಂದಲೇ ನೋಡುವುದು ಒಂದು ಮೋಜಿನ ವಿಷಯವಾದರೂ ಕೂಡಾ ಅದರಲ್ಲಿ ಆಟವಾಡುವುದು ಇನ್ನೂ ಖುಷಿ ನೀಡುತ್ತದೆ. ಈ ಪ್ರವಾಸದಲ್ಲಿ ನೀವು ಶೃಂಗೇರಿ (12 ಕಿಮೀ) ಮತ್ತು ಹೊರನಾಡು (52 ಕಿಮೀ) ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

7 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣವು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ದಸರಾ ಸಮಯದಲ್ಲಿ ಈ ಪ್ರದೇಶಕ್ಕೆ ನಿಮ್ಮ ಕುಟುಂಬದ ಜೊತೆಗೆ ಭೇಟಿ ನೀಡಿ. ಇಲ್ಲಿ ನಿಮ್ಮ ಅದ್ಭುತ ಕ್ಷಣಗಳನ್ನು ಕಳೆಯಬುಹುದು. ಇಲ್ಲಿ ರಂಗನಾಥಸ್ವಾಮಿ ದೇವಾಲಯ ಮತ್ತು ಶ್ರಿರಂಗಪಟ್ಟಣ ಕೋಟೆಗಳು, ರಂಗನತಿಟ್ಟು ಪಕ್ಷಿಧಾಮವು ಇದೆ. ಬಣ್ಣದ ಕೊಕ್ಕರೆ, ಸ್ಪಾಟ್-ಬಿಲ್ಡ್ ಪೆಲಿಕಾನ್, ಬೆಳ್ಳಕ್ಕಿ, ಕೊಕ್ಕರೆ -ಕೊಕ್ಕಿನ ಮಿಂಚುಳ್ಳಿ, ಸಾಮಾನ್ಯ ಸ್ಪೂನ್‌ಬಿಲ್ ಸೇರಿದಂತೆ ಹಲವಾರು ಇತರ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿವೆ.

8 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ಮುಂಡಗೋಡ್: ಒಂದು ಸಣ್ಣ ಪಟ್ಟಣ ಮುಂಡಗೋಡ್. ಇದು ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿದೆ. ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಇದು ಸ್ವಲ್ಪ ಶಾಂತಯುತವಾದ ಸ್ಥಳ, ಇಲ್ಲಿ ನಿಮ್ಮ ಆಯಸವನ್ನು ಕೂಡ ಕಳೆಯಬಹುದು. ಮುಂಡಗೋಡ್ ಬಚನಕಿ ಅಣೆಕಟ್ಟು ಮತ್ತು ಪ್ರಶಾಂತ ಬೌದ್ಧ ಮಠ ಇದೆ. ಮುಂಡಗೋಡದಿಂದ ಸುಮಾರು 15 ಕಿಮೀ ದೂರದಲ್ಲಿರುವ ಅತ್ತಿವೇರಿ ಪಕ್ಷಿಧಾಮವು ಅತ್ಯಂತ ಪ್ರಸಿದ್ಧವಾದ ಆಕರ್ಷಣೆಯಾಗಿದ್ದು, ಈ ಅಭಯಾರಣ್ಯದಲ್ಲಿ ಯುರೇಷಿಯನ್ ಸ್ಪೂನ್‌ಬಿಲ್, ಬಿಳಿ-ಕಂಠದ ಮಿಂಚುಳ್ಳಿಗಳು, ಭಾರತೀಯ ಬೂದು ಹಾರ್ನ್‌ಬಿಲ್, ಇತ್ಯಾದಿಗಳು ಇವೆ.

9 / 10
Dasara Holidays: ದಸರಾ ರಜೆಗೆ ಕರ್ನಾಟಕದ ಈ ಸ್ಥಳಗಳಿಗೆ ನೀವು ಭೇಟಿ ನೀಡಬಹುದು, ಮಕ್ಕಳು ಕೂಡ ಎಂಜಾಯ್ ಮಾಡ್ತಾರೆ

ರಾಮನಗರ: ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿದೆ. ರೇಷ್ಮೇ ಉದ್ಯಮವು ಪ್ರಮುಖವಾಗಿರುವ ಈ ನಗರವನ್ನು ರೇಷ್ಮೇ ನಗರವೆಂದೂ ಕರೆಯಲಾಗುತ್ತದೆ. ರಾಮನಗರವು ತನ್ನ ಬೃಹತ್ ಗ್ರಾನೈಟ್ ಸ್ಥಳಗಳಿಗೆ ಹೆಸರುವಾಸಿಯಾಗಿದೆ ಮತ್ತು ಆದ್ದರಿಂದ, ಅಡ್ರಿನಾಲಿನ್ ಹವ್ಯಾಸಿಗಳಿಗೆ ಜನಪ್ರಿಯ ರಾಕ್ ಕ್ಲೈಂಬಿಂಗ್ ಮತ್ತು ಟ್ರೆಕ್ಕಿಂಗ್ ತಾಣವಾಗಿದೆ.

10 / 10

Published On - 4:49 pm, Fri, 23 September 22

Follow us
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ