Updated on: Sep 23, 2022 | 4:51 PM
ನಟಿ ಸಾರಾ ಅಣ್ಣಯ್ಯ ಅವರು ವೆಕೇಶನ್ಮೂಡ್ನಲ್ಲಿದ್ದಾರೆ. ಧಾರಾವಾಹಿ ಕೆಲಸಗಳಿಂದ ಬ್ರೇಕ್ ಪಡೆದುಕೊಂಡು ಟ್ರಿಪ್ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಾರಾ ಅಣ್ಣಯ್ಯ ಅವರು ಮೊದಲು ಲಡಾಖ್ಗೆ ತೆರಳಿದ್ದರು. ಈಗ ಅವರು ತಾಜ್ಮಹಲ್ಗೆ ಭೇಟಿ ನೀಡಿದ್ದಾರೆ. ಪ್ರೀತಿಯ ಸಂಕೇತವಾದ ಕೆಂಪು ಬಣ್ಣದ ಉಡುಗೆ ತೊಟ್ಟು ಈ ಮಹಲಿನ ಎದುರು ಪೋಸ್ ನೀಡಿದ್ದಾರೆ.
ಸಾರಾ ಅಣ್ಣಯ್ಯ ಅವರ ಫೋಟೋಗಳನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರು ಧರಿಸಿರುವ ಕೆಂಪು ಬಣ್ಣದ ಉಡುಗೆ ಎಲ್ಲರ ಕಣ್ಣು ಕುಕ್ಕಿದೆ.
ಸಾರಾ ‘ಕನ್ನಡತಿ’ ಧಾರಾವಾಹಿ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ವರುಧಿನಿ ಎಂದೇ ಫೇಮಸ್ ಆದರು. ಅವರ ಪಾತ್ರ ನೆಗೆಟಿವ್ ಶೇಡ್ನಲ್ಲಿದೆ.
ಸಾರಾ