Updated on: Sep 14, 2021 | 2:40 PM
ಮೊಟ್ಟೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಎರಡು ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಅದಾಗ್ಯೂ ಕೆಲವರು ಬೇಯಿಸಿದ ಮೊಟ್ಟೆಗಳನ್ನು ತಡವಾಗಿ ತಿನ್ನುತ್ತಾರೆ. ಆದರೆ ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಗಂಟೆಗಳಲ್ಲಿ ತಿನ್ನಬೇಕು? ಮತ್ತು ಅದನ್ನು ಹೇಗೆ ಸಂಗ್ರಹಿಸಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಮೊಟ್ಟೆಗಳನ್ನು ಸಾಮಾನ್ಯವಾಗಿ ಹೆಚ್ಚು ದಿನಗಳವರೆಗೆ ಸಂಗ್ರಹಿಸಬಹುದು. ಬೇಯಿಸಿದ ಮೊಟ್ಟೆಗಳನ್ನು ತಣ್ಣಗಾದ ತಕ್ಷಣ ಫ್ರಿಡ್ಜ್ ಅಲ್ಲಿ ಇಡಬಹುದು. ಹಾಗೆಯೇ ಬೇಯಿಸಿದ ಮೊಟ್ಟೆಗಳನ್ನು 5 ರಿಂದ 7 ದಿನಗಳವರೆಗೆ ಸಂಗ್ರಹಿಸಬಹುದು.
ನೀವು ತಕ್ಷಣ ಬೇಯಿಸಿದ ಮೊಟ್ಟೆಗಳನ್ನು ತಿನ್ನದಿದ್ದರೆ, ಅವುಗಳನ್ನು ಸಿಪ್ಪೆ ತೆಗೆಯಬೇಡಿ. ಹೀಗೆ ಮಾಡುವುದರಿಂದ ಯಾವುದೇ ಬ್ಯಾಕ್ಟೀರಿಯಾ ಸೋಂಕು ತಗಲುವುದಿಲ್ಲ. ನೀವು ಮೊಟ್ಟೆಗಳನ್ನು ಬೇಯಿಸುತ್ತಿದ್ದಾಗ ಒಡೆದು ಹೋದರೆ ಅಂತಹ ಮೊಟ್ಟೆಗಳನ್ನು ತಕ್ಷಣ ತಿನ್ನಿರಿ. ಅದರಂತೆ ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಗಳನ್ನು 2 ಗಂಟೆಗಳ ಕಾಲ ಹೊರಗೆ ಗಾಳಿ ಆಡಲು ಬಿಟ್ಟರೆ ಜಾಸ್ತಿ ದಿನ ಇಡಬೇಡಿ.
ಮೊಟ್ಟೆಗಳು ಪ್ರೋಟೀನ್, ಕಬ್ಬಿಣ, ರಂಜಕ, ವಿಟಮಿನ್ ಎ, ಬಿ 6, ಬಿ 12, ಫೋಲೇಟ್, ಅಮೈನೋ ಆಮ್ಲಗಳು, ಲಿನೋಲಿಕ್ ಮತ್ತು ಒಲೀಕ್ ಆಮ್ಲ ಹೊಂದಿದೆ. ಅಲ್ಲದೆ ಬೇಯಿಸಿದ ಮೊಟ್ಟೆಗಳು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದೆ.
ಸಂಗ್ರಹ ಚಿತ್ರ