ವಿಟಮಿನ್ ಬಿ-1, ಪ್ರೋಟೀನ್, ತಾಮ್ರ, ಮ್ಯಾಂಗನೀಸ್, ಒಮೆಗಾ-3 ಆಮ್ಲ, ಲಿಗ್ನಾನ್ಸ್ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೈಬರ್ ಮತ್ತು ಒಮೆಗಾ-3 ಆಮ್ಲಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಮಲಗುವ ವೇಳೆಗೆ ಒಂದು ಟೀ ಚಮಚ ಅಗಸೆ ಬೀಜವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ.