Soybean side effects: ಸೋಯಾಬೀನ್ ಅನ್ನು ಹೆಚ್ಚು ಸೇವಿಸುತ್ತಿದ್ದೀರಾ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಸೋಯಾಬೀನ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಒಳ್ಳೆಯದು. ನೀವು ಇದನ್ನು ಅತಿಯಾಗಿ ಸೇವಿಸಿದರೆ, ದೇಹವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಆರೋಗ್ಯಕ್ಕೆ ಆಗುವ ದುಷ್ಪರಿಣಾಮಗಳು ಇಲ್ಲಿದೆ ನೋಡಿ.
Updated on: Feb 27, 2022 | 7:03 AM

ಹೃದ್ರೋಗ: ತಜ್ಞರ ಪ್ರಕಾರ, ಸೋಯಾಬೀನ್ನಲ್ಲಿ ಟ್ರಾನ್ಸ್ ಕೊಬ್ಬು ಕಂಡುಬರುತ್ತದೆ. ಇದು ಅಧಿಕವಾಗಿ ದೇಹಕ್ಕೆ ಹೋದರೆ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೋಯಾಬೀನ್ ಅನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ಸ್ಥೂಲಕಾಯತೆ: ನೀವು ಸೋಯಾಬೀನ್ನಿಂದ ಮಾಡಿದ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ನಿಮ್ಮನ್ನು ಸ್ಥೂಲಕಾಯಕ್ಕೆ ಬಲಿಪಶು ಮಾಡಬಹುದು. ತಜ್ಞರ ಪ್ರಕಾರ, ಸೋಯಾಬೀನ್ನಿಂದ ಮಾಡಿದ ವಸ್ತುಗಳು ತುಂಬಾ ರುಚಿಯಾಗಿರುತ್ತವೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಅಲರ್ಜಿ: ಕೆಲವೊಮ್ಮೆ ಸೋಯಾಬೀನ್ಗಳು ಸಹ ಅಲರ್ಜಿಯನ್ನು ಉಂಟುಮಾಡಬಹುದು. ಸೋಯಾಬೀನ್ ತಿಂದ ನಂತರ ನೀವು ಆಗಾಗ್ಗೆ ದದ್ದು, ಉರಿ ಅಥವಾ ಚರ್ಮದ ಮೇಲೆ ನೋವು ಅನುಭವಿಸುತ್ತಿದ್ದರೆ, ಇಂದಿನಿಂದಲೇ ಅದನ್ನು ಸೇವಿಸುವುದನ್ನು ನಿಲ್ಲಿಸಿ.

ಗರ್ಭಿಣಿ: ಗರ್ಭಿಣಿಯರು ಸೋಯಾಬೀನ್ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಕೆಲವೊಮ್ಮೆ ಇದು ಗರ್ಭಿಣಿಯರಿಗೆ ವಾಂತಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ಇದನ್ನು ಕಡಿಮೆ ಸೇವಿಸುವುದು ಉತ್ತಮ.

ಮಧುಮೇಹ: ಸೋಯಾಬೀನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಒಮ್ಮೊಮ್ಮೆ ಈ ಕಾರಣದಿಂದಾಗಿ ನೀವು ಮಧುಮೇಹದ ಕಾಯಿಲೆಗೆ ಗುರಿಯಾಗಬಹುದು.




