ವಿಚಿತ್ರ ಉಡುಪು ಧರಿಸಿ ಗಮನ ಸೆಳೆದ ‘ಸ್ಪೈಡರ್ ಮ್ಯಾನ್’ ನಟಿ ಜೆಂಡೆಯಾ
Zendaya Dress: ‘ಸ್ಪೈಡರ್ ಮ್ಯಾನ್’ ಸಿನಿಮಾದ ನಾಯಕಿ ತಮ್ಮ ನಟನೆಯ ಹೊಸ ಸಿನಿಮಾ ‘ಡ್ಯೂನ್ 2’ ಪ್ರೀಮಿಯರ್ಗೆ ಧರಿಸಿದ್ದ ಉಡುಗೆ ಸಖತ್ ವೈರಲ್ ಆಗುತ್ತಿದೆ.
Updated on: Feb 16, 2024 | 9:45 PM

ಹಾಲಿವುಡ್ ನಟಿ ಜೆಂಡೆಯಾ ‘ಸ್ಪೈಡರ್ಮ್ಯಾನ್’ ಸಿನಿಮಾದಿಂದ ಖ್ಯಾತಿ ಗಳಿಸಿದವರು. ಇದೀಗ ತಮ್ಮ ವಿಚಿತ್ ಉಡುಗೆಯಿಂದ ಸಖತ್ ಸದ್ದು ಮಾಡುತ್ತಿದ್ದಾರೆ.

‘ಜೆಂಡೆಯಾ’ ಡ್ಯೂನ್ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗ ಇದೀಗ ಬಿಡುಗಡೆಗೆ ರೆಡಿಯಾಗಿದೆ.

‘ಡ್ಯೂನ್ 2’ ಸಿನಿಮಾದ ಪ್ರೀಮಿಯರ್ ಶೋ ಲಂಡನ್ನಲ್ಲಿ ಆಯೋಜಿಸಲಾಗಿತ್ತು. ಪ್ರೀಮಿಯರ್ಗೆ ಈ ರೀತಿಯ ವಿಚಿತ್ರ ಉಡುಗೆ ತೊಟ್ಟು ಬಂದಿದ್ದರು ಜೆಂಡೆಯಾ.

ಭವಿಷ್ಯ, ಭೂತಕಾಲಗಳ ವಿಚಿತ್ರ ಕತೆಯನ್ನು ‘ಡ್ಯೂನ್’ ಸಿನಿಮಾ ಒಳಗೊಂಡಿದ್ದು, ಸಿನಿಮಾದ ನಾಯಕಿಯ ಪಾತ್ರದಲ್ಲಿ ಜೆಂಡೆಯಾ ಮಿಂಚಿದ್ದಾರೆ.

ಜೆಂಡೆಯಾರ ವಿಚಿತ್ರ ಉಡುಪಿನ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೆಂಡೆಯಾರ ಉಡುಪನ್ನು ಟ್ರೋಲ್ ಮಾಡಲಾಗುತ್ತಿದೆ.

ಜೆಂಡೆಯಾ ಕಳೆದ ವರ್ಷ ಭಾರತಕ್ಕೆ ಸಹ ಬಂದಿದ್ದರು. ಜಿಯೋ ಕಲ್ಚರಲ್ ಸೆಂಟರ್ ಉದ್ಘಾಟನೆಗೆ ಸ್ಪೈಡರ್ ಮ್ಯಾನ್ ಖ್ಯಾತಿಯ ಟಾಮ್ ಹಾಲೆಂಡ್ ಜೊತೆ ಜೆಂಡೆಯಾ ಆಗಮಿಸಿದ್ದರು.

‘ಡ್ಯೂನ್ 2’ ಸಿನಿಮಾ ಪ್ರೀಮಿಯರ್ ಶೋ ಲಂಡನ್ನಲ್ಲಿ ನಡೆದಿದ್ದು ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.



















