32 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯ ರಾಮಮಂದಿರಕ್ಕೆ ಬಂದು ಸಂಕಲ್ಪ ಮಾಡಿದ್ದರು ಮೋದಿ

|

Updated on: Jan 14, 2024 | 3:35 PM

32 ವರ್ಷಗಳ ಹಿಂದೆ 1991 ಡಿಸೆಂಬರ್ 11 ರಂದು ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಮತ್ತು ಯುವಕ ನರೇಂದ್ರ ಮೋದಿ ಸಂಘಟಿಸಿದ  ಯಾತ್ರೆಯಾಗಿತ್ತು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಏಕತಾ ಯಾತ್ರೆ. ಇದು ಕೇವಲ ಪ್ರಯಾಣವಾಗಿರಲಿಲ್ಲ.ಇದು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಗುರುತಿಸಲ್ಪಟ್ಟ ಅವಧಿಯಲ್ಲಿ ಏಕತೆ ಮತ್ತು ಪ್ರತಿಭಟನೆಯ ಪ್ರಬಲ ಸಂಕೇತವಾಗಿತ್ತು

32 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯ ರಾಮಮಂದಿರಕ್ಕೆ ಬಂದು ಸಂಕಲ್ಪ ಮಾಡಿದ್ದರು ಮೋದಿ
32 ವರ್ಷಗಳ ಹಿಂಂದೆ ಏಕತಾ ಯಾತ್ರೆಯಲ್ಲಿ ಮೋದಿ
Follow us on

ಅಯೋಧ್ಯೆ ಜನವರಿ14: ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದ (Ram mandir) ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜನವರಿ 22 ಪ್ರಪಂಚದಾದ್ಯಂತದ ರಾಮ ಭಕ್ತರಿಗೆ ವಿಶೇಷ ದಿನವಾಗಿದೆ. ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ದೇಶದ ಜನರು ಉತ್ಸುಕರಾಗಿದ್ದಾರೆ. ದೇಶ ಮತ್ತು ಪ್ರಪಂಚದಾದ್ಯಂತ ಜನರು ಈ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಾಲಿಗೆ ಜನವರಿ 14ಕೂ ಕೂಡಾ ಬಹಳ ವಿಶೇಷ ದಿನವಾಗಿದೆ. ಯಾಕೆಂದರೆ ಜನವರಿ 14ಕ್ಕೂ ಇದೆ ರಾಮಮಂದಿರದ ನಂಟು.

ರಾಮಮಂದಿರ ನಿರ್ಮಾಣದ ಕನಸು ಕಂಡಿದ್ದರು ಮೋದಿ. ಅದು ನನಸಾಗಲು ಇನ್ನು ಕೆಲವೇ ದಿನಗಳು ಉಳಿದಿದೆ. 32 ವರ್ಷಗಳ ಹಿಂದೆ ಕೈಗೊಂಡಿದ್ದ  ಪ್ರಧಾನಿ ಮೋದಿಯವರ  ದೃಢ ನಿಶ್ಚಯ  ಫಲ ನೀಡುತ್ತಿದೆ  . ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಸರಿಯಾಗಿ 32 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮಮಂದಿರಕ್ಕೆ ಬಂದಿದ್ದರು.


ಏಕತೆಯ ಸಂದೇಶವನ್ನು ಸಾರಲು ಮೋದಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕತಾ ಯಾತ್ರೆಯಲ್ಲಿದ್ದರು. ಆ ಹೊತ್ತಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳ ನಡುವೆ, ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣವಾದಾಗ ಮಾತ್ರ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿದರು.
ಕಾಶ್ಮೀರವನ್ನು ಭಾರತದೊಂದಿಗೆ ಏಕೀಕರಿಸುವುದು ಸ್ವಾತಂತ್ರ್ಯಾ ನಂತರ ಜನಸಂಘ ಮತ್ತು ಬಿಜೆಪಿ ದೇಶವನ್ನು ಏಕೀಕರಣಗೊಳಿಸಲು ಮಾಡಿದ ಸಂಕಲ್ಪ ಆಗಿತ್ತು. ಅಸಂಖ್ಯಾತ ಹಿಂದೂಗಳ ಶತಮಾನಗಳ ಪರಿಶ್ರಮದ ನಂತರ, ಭಗವಾನ್ ಶ್ರೀರಾಮನನ್ನು ಅವರ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯ ಎದ್ದು ನಿಲ್ಲಲಿದೆ. ವರ್ಷಗಳ ಹಿಂದೆ ಮಾಡಿದ ಈ ಪ್ರಧಾನಿ ಅವರ ಸಂಕಲ್ಪ ಜನವರಿ 22 ರಂದು ನೆರವೇರಲಿದೆ.

ಏಕತಾ ಯಾತ್ರೆ

32 ವರ್ಷಗಳ ಹಿಂದೆ 1991 ಡಿಸೆಂಬರ್ 11 ರಂದು ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಮತ್ತು ಯುವಕ ನರೇಂದ್ರ ಮೋದಿ ಸಂಘಟಿಸಿದ  ಯಾತ್ರೆಯಾಗಿತ್ತು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಏಕತಾ ಯಾತ್ರೆ. ಇದು ಕೇವಲ ಪ್ರಯಾಣವಾಗಿರಲಿಲ್ಲ.ಇದು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಗುರುತಿಸಲ್ಪಟ್ಟ ಅವಧಿಯಲ್ಲಿ ಏಕತೆ ಮತ್ತು ಪ್ರತಿಭಟನೆಯ ಪ್ರಬಲ ಸಂಕೇತವಾಗಿತ್ತು.

ಗುಜರಾತ್‌ನ ಬಿಜೆಪಿ ನಾಯಕ ಜಗದೀಶ್ ದ್ವಿವೇದಿ ಅವರು ನೆನಪಿಸಿಕೊಳ್ಳುವಂತೆ, “ಇದು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿದ್ದ ಸಮಯ, ಆಗ ಯಾತ್ರೆಯನ್ನು ಪರಿಕಲ್ಪನೆ ಮಾಡಿ ಮತ್ತು ಸಂಘಟಿಸಿದವರು ಮೋದಿ.”

ಯಾತ್ರೆಯ ಸದಸ್ಯರಾದ ದೀಪಕ್ ಶಾ ಅವರು ಯಾತ್ರೆಯ ಸಮಯದಲ್ಲಿ ಜನರು ಎದುರಿಸುತ್ತಿರುವ ಗಂಭೀರ ಭದ್ರತಾ ಬೆದರಿಕೆಯನ್ನು ನೆನಪಿಸಿಕೊಳ್ಳುತ್ತಾರೆ. “ಒಂದೆಡೆ ಕಾಶ್ಮೀರದಲ್ಲಿ ಭಯೋತ್ಪಾದಕರು ಯಾತ್ರೆಯ ಮೇಲೆ ದಾಳಿ ನಡೆಸುತ್ತಿದ್ದರು ಮತ್ತು ಮುಂದೆ ಸಾಗದಂತೆ ಬೆದರಿಕೆ ಹಾಕುತ್ತಿದ್ದರು. ಮತ್ತೊಂದೆಡೆ, ಪಂಜಾಬ್‌ನಲ್ಲಿ ಭಯೋತ್ಪಾದಕರು ಯಾತ್ರೆಯನ್ನು ವಿಫಲಗೊಳಿಸಲು ದಾಳಿ ಮಾಡಿದರು. ಆದರೂ, ನರೇಂದ್ರ ಮೋದಿ ಅವರು ಮುಂದೆ ನಿಂತು ನೇತೃತ್ವ ವಹಿಸಿದ್ದರು. ತ್ರಿವರ್ಣ ಧ್ವಜವನ್ನು ಹಾರಿಸಲು ಕಾಶ್ಮೀರದ ಲಾಲ್ ಚೌಕ್‌ಗೆ ‘ರಥಗಳು’ ತಲುಪುವಂತೆ ನೋಡಿಕೊಂಡರು ಅಂತಾರೆ.

ಇದನ್ನೂ ಓದಿ: ಯುಪಿಎಗಿಂತ ಶೇಕಡಾ 242 ರಷ್ಟು ಹೆಚ್ಚು ಅನುದಾನ ರಾಜ್ಯಕ್ಕೆ ಮೋದಿ ಕೊಟ್ಟಿದ್ದಾರೆ: ಸಿಟಿ ರವಿ

ಏಕತಾ ಯಾತ್ರೆ  ಭಾರತವು ವಿಭಜನೆ ಮತ್ತು ಭಯೋತ್ಪಾದನೆಯ ಶಕ್ತಿಗಳ ವಿರುದ್ಧ ದೃಢವಾಗಿ ಮತ್ತು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂಬ ಸ್ಪಷ್ಟ ಸಂದೇಶವನ್ನು  ದೇಶ ಮತ್ತು ಜಗತ್ತಿಗೆ ಕಳುಹಿಸಿತು. 14 ರಾಜ್ಯಗಳನ್ನು ವ್ಯಾಪಿಸಿದ ಈ ಪ್ರಯಾಣವು ಜನವರಿ 26, 1992 ರಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಲ್ಲಿ ಕೊನೆಗೊಂಡಿತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ