AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಬದಲಾವಣೆ ಬೆಂಕಿಗೆ ತುಪ್ಪ ಸುರಿದ ಸಚಿವ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?

ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುುನಿಯಪ್ಪ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಂಚಿಕೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಅಧಿಕಾರ ಬದಲಾವಣೆ ಬೆಂಕಿಗೆ ಮುನಿಯಪ್ಪ ತುಪ್ಪ ಸುರಿದಿದ್ದಾರೆ. ಆದ್ರೆ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಅಧಿಕಾರ ಬದಲಾವಣೆ ಬೆಂಕಿಗೆ ತುಪ್ಪ ಸುರಿದ ಸಚಿವ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?
ಸಿದ್ದರಾಂಯ್ಯ, ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on: Aug 16, 2023 | 8:59 AM

Share

ಬೆಂಗಳೂರು, (ಆಗಸ್ಟ್ 16): ಕೆಸರಿನಲ್ಲಿ ಹೂತಿರುವ ಕಂಬ ಆಗಾಗ ಅಲುಗಾಡುತ್ತಲೇ ಇರುತ್ತದೆ ಎನ್ನುವಂತೆ ತಳಪಾಯ ಗಟ್ಟಿ ಆಗುವ ಮೊದಲೇ ಕಾಂಗ್ರೆಸ್ (Congress) ಪಾಳಯದಲ್ಲಿ ಖುರ್ಚಿ ಅಲುಗಾಡುತ್ತಿರುವ ಮಾತುಗಳು ಪದೇ ಪದೇ ಪ್ರಸ್ತಾಪ ಆಗುತ್ತಿದೆ. ಈ ಬಾರಿ ಕಂಪಿಸುವ ಧ್ವನಿ ಹೊರ ಬಂದಿದ್ದು ಹಿರಿಯ ಸಚಿವ ಕೆ ಎಚ್ ಮುನಿಯಪ್ಪರಿಂದ. ಎರಡೂವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ. ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುುನಿಯಪ್ಪ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಂಚಿಕೆ ಚರ್ಚೆ ಮುನ್ನೆಲೆಗೆ ಬಂದಿದೆ.

ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?

ಅಧಿಕಾರ ಹಂಚಿಕೆ ಕಾಂಗ್ರೆಸ್ ಸರ್ಕಾರ ರಚನೆ ವೇಳೆ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಮಾತು. ಸಿದ್ದರಾಮಯ್ಯ ಸಿಎಂ ಎಂದು ಘೋಷಣೆಯಾದ ಬಳಿಕವೂ ಇದು ಕೇವಲ ಎರಡೂವರೆ ವರ್ಷ ಮಾತ್ರ. ಅಧಿಕಾರ ಹಂಚಿಕೆ ಸೂತ್ರಕ್ಕೆ ಬದ್ದರಾಗಿಯೇ ಸರ್ಕಾರ ರಚನೆಯಾಗಿದೆ ಎನ್ನುವ ಮಾತು ಜೋರಾಗಿತ್ತು. ಇದೀಗ ಪಕ್ಷದೊಳಗೆ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮೊನ್ನೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಾಯಕ, ಸಚಿವ ಮುನಿಯಪ್ಪ ಸಿಎಂ, ಡಿಸಿಎಂ ಎದುರೇ ಹಿರಿಯ ಸಚಿವರು ಅಧಿಕಾರ ಬಿಟ್ಟುಕೊಡುವ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.‌

ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲಿ MLC ನಾಮ ನಿರ್ದೇಶನದ ಚೆಂಡು, ಬಂಡಾಯಕ್ಕೆ ದಾರಿ ಮಾಡುತ್ತಾ ಸಿಎಂ ನಿರ್ಧಾರ?

ಮುನಿಯಪ್ಪರಿಂದ ಬಂದ ಈ ಪ್ರಸ್ತಾಪ ಕೇವಲ ಸಚಿವರದ್ದಾ ಅಥವಾ ಸಿಎಂ, ಡಿಸಿಎಂ ಸ್ಥಾನದ ಬದಲಾವಣೆಯ ಪ್ರಸ್ತಾಪವೂ ಮುನಿಯಪ್ಪ ಮಾತಿನ ಹಿಂದೆ ಅಡಗಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಚಿವ ಮುನಿಯಪ್ಪ, ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ಎನ್ನುವ ವಿಚಾರವನ್ನೂ ಹೇಳಿದ್ದಾರೆ.

ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ‌ಎನ್ನುವ ಮೂಲಕ ಮುನಿಯಪ್ಪ, ಪರೋಕ್ಷವಾಗಿ ಹೈಕಮಾಂಡ್ ಮುಂದೆ ಬೇರೆ ಯಾರ ಸ್ಟ್ರಾಟಜಿ ಕೂಡ ನಡೆಯಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಕೇವಲ ನಾಲ್ಕು ಗೋಡೆಗಳ ನಡುವೆ ಹೈಕಮಾಂಡ್ ಸಮ್ಮುಖದಲ್ಲಿ ಆಗಿದೆ ಎನ್ನಲಾದ ಮಾತುಕತೆಗೆ ಇದೀಗ ಹಿರಿಯ ಸಚಿವರ ಹೇಳಿಕೆಗಳು ಅಧಿಕಾರ ಹಂಚಿಕೆಯಾಗುವುದು ಸತ್ಯ ಎನ್ನುವ ಮಾತಿಗೆ ರೆಕ್ಕೆ ಪುಕ್ಕಗಳು ಬರುವಂತೆ ಮಾಡಿವೆ‌.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ