ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸ್ಫೋಟಕ ಟ್ವಿಸ್ಟ್: ಕಣದಿಂದ ಗೆಹ್ಲೋಟ್​ ಔಟ್​?

| Updated By: Digi Tech Desk

Updated on: Sep 26, 2022 | 7:47 PM

AICC ಅಧ್ಯಕ್ಷ ಚುನಾವಣೆ ರಾಜಸ್ಥಾನ ಕಾಂಗ್ರೆಸ್​ನಲ್ಲಿ ದೊಡ್ಡ ಬೆಳವಣಿಗೆಗಳಿಗೆ ಕಾರಣವಾಗಿದ್ದು, ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸ್ಫೋಟಕ ಟ್ವಿಸ್ಟ್: ಕಣದಿಂದ ಗೆಹ್ಲೋಟ್​ ಔಟ್​?
ಅಶೋಕ್ ಗೆಹ್ಲೋಟ್- ಸೋನಿಯಾ ಗಾಂಧಿ
Follow us on

ಜೈಪುರ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರ ರೇಸ್‌ಗೆ ಇಳಿದ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್​ನಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲದೇ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡಿದ್ದು, ಅಸಮಾಧಾನವನ್ನು ಶಮನ ಮಾಡುವ ಕಸರತ್ತು ನಡೆಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿ ನೇಮಕ ವಿಚಾರವಾಗಿ ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಎಐಸಿಸಿ ಅಧ್ಯಕ್ಷೀಯ ಸ್ಥಾನದ (Congress President Election)ರೇಸ್ ನಿಂದ ಅಶೋಕ್ ಗೆಹ್ಲೋಟ್ ಅವರನ್ನು ಹೊರಗಿಟ್ಟು, ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ.

ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ಗೆಹ್ಲೋಟ್ ಗುಂಪಿನ ಶಾಸಕರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಗೆಹ್ಲೋಟ್ ವಿರುದ್ಧ ಪಕ್ಷದ ಮುಖ್ಯಸ್ಥರಲ್ಲಿ ದೂರು ಸಲ್ಲಿಸಿದ್ದಾರೆ. ಅವರಲ್ಲಿ ನಂಬಿಕೆ ಇಡುವುದು ಮತ್ತು ಪಕ್ಷದ ಹೊಣೆಗಾರಿಕೆ ನೀಡುವುದು ಉತ್ತಮವಲ್ಲ, ಪಕ್ಷದ ಉನ್ನತ ನಾಯಕರು ಗೆಹ್ಲೋಟ್ ಸ್ಪರ್ಧೆಯನ್ನು ಮರು ಪರಿಗಣಿಸಬೇಕು, ಗಾಂಧಿ ಕುಟುಂಬಕ್ಕೆ ನಿಷ್ಠರಾದ ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು; ಅಶೋಕ್ ಗೆಹ್ಲೋಟ್ ಬಣದ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ 3 ಬೇಡಿಕೆಗಳೇನು?

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ ಅಶೋಕ್ ಗೆಹ್ಲೋಟ್ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದು ಅನುಮಾನ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮತ್ತು ರಾಜಸ್ಥಾನದಲ್ಲಿ ಸರ್ಕಾರದ ನಾಯಕತ್ವ ಬದಲಾವಣೆಯ ನಡುವೆ ಉದ್ಭವಿಸಿದ ಪರಿಸ್ಥಿತಿಯ ನಂತರ, ಈಗ ರಾಜಕೀಯ ಸಮೀಕರಣಗಳು ಬದಲಾಗಲಾರಂಭಿಸಿವೆ.

ಮಕೇನ್‌ಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಾಧ್ಯತೆ
ಯೆಸ್….ಅಶೋಕ್ ಗೆಹ್ಲೋಟ್ ಬಣದ ಶಾಸಕರು ರಾಜೀನಾಮೆಗೆ ಮುಂದಾದ ಹಿನ್ನೆಲೆಯಲ್ಲಿ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದ ಡ್ರಾಮ್​ ಮಾಡಿ ಪರ್ಯಾಯ ನಾಯಕನಿಗೆ ಅವಕಾಶ ನೀಡಲು ಹೈಕಮಾಂಡ್ ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಕೇನ್‌ ಕೆ.ಸಿ.ವೇಣುಗೋಪಾಲ್‌ ಸಹ ಎಐಸಿಸಿ ರೇಸ್‌ನಲ್ಲಿದ್ದಾರೆ. ಆದ್ರೆ, ಮೂಲಗಳ ಪ್ರಕಾರ ಅಜಯ್ ಮಕೇನ್​ಗೆ ಎಐಸಿಸಿ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಗೆಹ್ಲೋಟ್ ಬಣ ಸಿಡಿದೆದ್ದಿದ್ದೇಕೆ?
ಎಐಸಿಸಿ ಅಧ್ಯಕ್ಷ ಸ್ಥಾನನ್ಜು ಅಶೋಕ್ ಗೆಹ್ಲೋಟ್​ಗೆ ವಹಿಸಿ, ರಾಜಸ್ಥಾನ ಸಿಎಂ ಪಟ್ಟವನ್ನು ಸಚಿನ್ ಪೈಲಟ್​ಗೆ ಕಟ್ಟಲು ಹೈಕಮಾಂಡ್ ಮುಂದಾಗಿದೆ. ಆದ್ರೆ, ಇದಕ್ಕೆ ಗೆಹ್ಲೋಟ್ ಬಣ ವಿರೋಧಿಸುತ್ತಿದೆ. ಯಾವುದೇ ಕಾರಣಕ್ಕೂ

ಪೈಲಟ್‌ ಮುಖ್ಯಮಂತ್ರಿಯಾಗಲು ನಾವು ಒಪ್ಪುವುದಿಲ್ಲ ಎನ್ನುವುದು ಗೆಹ್ಲೋಟ್ ಬಣದ ಶಾಸಕರ ಮಾತು. ಅಷ್ಟೇ ಅಲ್ಲದೇ ಪೈಲಟ್​ಗೆ ಸಿಎಂ ಸ್ಥಾನ ನೀಡುವುದನ್ನು ವಿರೋಧಿ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಅವರನ್ನು ಭೇಟಿಯಾಗಿದ್ದರು. ಇದು ಮತ್ತೊಂದು ಹಂತಕ್ಕೆ ಹೋಗುವುದಕ್ಕೂ ಮೊದಲ ಕಾಂಗ್ರೆಸ್ ವೀಕ್ಷಕರ ತಂಡ ರಾಜಸ್ಥಾನಕ್ಕೆ ಭೇಟಿ ನೀಡಿ ಬಿಕ್ಕಟ್ಟ ಪರಿಹಾರಕ್ಕೆ ಮುಂದಾಗಿತ್ತು. ಆದ್ರೆ, ಅದು ಸಾಧ್ಯವಾಗಿಲ್ಲ. ಇದರಿಂದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಅಂತಿಮವಾಗಿ ಹೈಕಮಾಂಡ್ ಗೆಹ್ಲೋಟ್ ಅವರನ್ನೇ ಸಿಎಂ ಆಗಿ ಮುಂದುವರಿಸುವ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

Published On - 7:40 pm, Mon, 26 September 22