ಟಿಪ್ಪು ಸುಲ್ತಾನ್ನ ಮೂಲ ಹೆಸರು ತಿಪ್ಪೇಸ್ವಾಮಿ: ಇದು ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಎಂದ ಕಾಂಗ್ರೆಸ್ ನಾಯಕ
ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಅಂತೆ ಹೀಗಂತ ಕಾಂಗ್ರೆಸ್ ರಾಜ್ಯಸಭಾ ಸದಸ್ಯರೊಬ್ಬರು ಹೇಳಿದ್ದಾರೆ.
ಬೆಂಗಳೂರು: ನಾವೆಲ್ಲ ಚಿಕ್ಕವರಿದ್ದಾಗ ಶಾಲಾ ಪಠ್ಯ ಪುಸ್ತಕಗಳಲ್ಲಿ ಈ ನಾಡಿನ ಮಹಾಪುರುಷರ ಸಾಲಿನಲ್ಲಿ ಟಿಪ್ಪು ಸುಲ್ತಾನ್ ಇದ್ದರು. ಹಾಗಾಗಿ ನಾವೆಲ್ಲರೂ ಈ ಹಿಂದೆ ಟಿಪ್ಪು ಸುಲ್ತಾನ್ನ ಜೀವನ ಚರಿತ್ರೆ, ಇತಿಹಾಸವನ್ನು ಓದಿದ್ದೇವೆ. ಆದ್ರೆ, ಟಿಪ್ಪು ಸುಲ್ತಾನ್ (Tipu Sultan)ಬಗ್ಗೆ ಇತ್ತೀಚೆಗೆ ವಿವಾದ ಹುಟ್ಟಿಕೊಂಡಿದ್ದು, ಇದರಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರವಲ್ಲದೇ ಮತ್ತೇನೂ ಇಲ್ಲ. ಅಂತೆಯೇ ಬಾಬ್ರಿ ಮಸೀದಿ, ರಾಮ ಮಂದಿರದಂತೆ ಟಿಪ್ಪು ಕೂಡ ಈಗ ವಿವಾದದ ಕೇಂದ್ರಬಿಂದು ಆಗಿದ್ದು, ಟಿಪ್ಪುವಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಮಟ್ಟದ ಯುದ್ಧವೇ ನಡೆದಿದೆ. ಅಲ್ಲದೇ ಟಿಪ್ಪುವಿನ ಪರ-ವಿರೋಧಕ್ಕಾಗಿ ಪ್ರತಿಭಟನೆಗಳು, ಜಗಳ ಆಗಿವೆ. ಅಲ್ಲದೇ ಕೊನೆಗೆ ಟಿಪ್ಪು ಜಯಂತಿ ಆಚರಣೆ ವಿಚಾರಕ್ಕೆ ಸಾವುಗಳು ಸಹ ಸಂಭವಿಸಿವೆ. ಆದ್ರೆ, ಟಿಪ್ಪು ಯಾರು, ಏನು, ಆತನ ಸಾಧನೆಗಳು ಏನು? ಮುಲ ಹೆಸರೇನು ಎನ್ನುವುದು ಎಲ್ಲೂ ನಿಖರವಾಗಿ ದಾಖಲೆಗಳಲ್ಲಿ ಇಲ್ಲ. ಇದೀಗ ಟಿಪ್ಪು ಸುಲ್ತಾನ್ನ ಮೂಲ ಹೆಸರು ಏನು ಎನ್ನುವುದನ್ನು ಕರ್ನಾಟಕ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ಪ್ರತಿದಿನ ಪ್ರತಿಯೊಬ್ಬರು ಒಂದೂವರೆ ಗಂಟೆ ಮೊಬೈಲ್ ಆಫ್ ಮಾಡ್ಬೇಕು, ಏನಿದು ಲಾಜಿಕ್..?
ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಎಂದು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ ಎಂದು ಜಿ.ಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಎಂದು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ pic.twitter.com/3jpJzqCVnv
— GC ChandraShekhar (@GCC_MP) September 27, 2022
ಈಗಾಗಲೇ ಟಿಪ್ಪು ವಿಚಾರಕ್ಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈಗಾಲೂ ಅದು ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಇದೀಗ ಜಿ.ಸಿ ಚಂದ್ರಶೇಖರ್ ಈ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮುಂದಿನ ದಿನಗಳಲ್ಲಿ ಯಾವ ರೀತಿ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 27 September 22