Assembly Bypolls: 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಮತ ಎಣಿಕೆ ಆರಂಭ

ಈ ಏಳು ಕ್ಷೇತ್ರಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ 2, ಶಿವಸೇನೆ ಮತ್ತು ಆರ್​ಜೆಡಿ ತಲಾ ಒಂದು ಕ್ಷೇತ್ರಗಳನ್ನು ಹೊಂದಿತ್ತು

Assembly Bypolls: 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಮತ ಎಣಿಕೆ ಆರಂಭ
ಮತ ಎಣಿಕೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 06, 2022 | 10:02 AM

ದೆಹಲಿ: ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಜಿದ್ದಾಜಿದ್ದಿ ಪೈಪೋಟಿಗೆ ಸಾಕ್ಷಿಯಾಗಿರುವ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ (By polls) ಮತಎಣಿಕೆ ಇಂದು (ನ 6) ನಡೆಯಲಿದೆ. ಬಿಹಾರದ ಮೊಕಮಾ ಮತ್ತು ಗೋಪಾಲ್​ಗಂಜ್ ವಿಧಾನಸಭಾ ಕ್ಷೇತ್ರ, ಮಹಾರಾಷ್ಟ್ರದ ಅಂಧೇರಿ (ಪೂರ್ವ), ಹರಿಯಾಣದ ಅದಮ್​ಪುರ್, ತೆಲಂಗಾಣದ ಮುನುಗೋಡ್, ಉತ್ತರ ಪ್ರದೇಶದ ಗೋಲಾ ಗೋಕರ್ಣನಾಥ್ ಮತ್ತು ಒಡಿಶಾದ ಧಾಮ್​ನಗರ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಈ ಏಳು ಕ್ಷೇತ್ರಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ 2, ಶಿವಸೇನೆ ಮತ್ತು ಆರ್​ಜೆಡಿ ತಲಾ ಒಂದು ಕ್ಷೇತ್ರಗಳನ್ನು ಹೊಂದಿತ್ತು

ಉಪಚುನಾವಣೆಗಳ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು…

ಅಂಧೇರಿ (ಪೂರ್ವ), ಮಹಾರಾಷ್ಟ್ರ

ಬಿಜೆಪಿಯು ಈ ಕ್ಷೇತ್ರವನ್ನು ಶಿವಸೇನೆಗೆ ಬಿಟ್ಟುಕೊಟ್ಟಿದೆ. ಶಿವಸೇನೆಯ ರುತುಜಾ ಲಾಟ್​ಕೆ ಈ ಕ್ಷೇತ್ರದಿಂದ ಆರಾಮಾಗಿ ಜಯಗಳಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರನ್ನು ಕೆಳಗಿಳಿಸಿ, ಆ ಸ್ಥಾನಕ್ಕೆ ಏಕನಾಥ್ ಶಿಂಧೆ ಬಂದಿದ್ದಾರೆ. ಪ್ರಸ್ತುತ ಎರಡೂ ಬಣಗಳ ನಡುವೆ ಯಾರದು ನಿಜವಾದ ಶಿವಸೇನೆ ಎಂಬ ಹೋರಾಟ ನಡೆಯುತ್ತಿದೆ. ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಲ್ಲಿ ಸ್ಪರ್ಧಿಸಿಲ್ಲ. ಮುಂಬೈ ಮಹಾನಗರ ಪಾಲಿಕೆಯು ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಆಡಳಿತ ಸಂಸ್ಥೆಯಾಗಿದ್ದು, ಎಲ್ಲ ಪಕ್ಷಗಳೂ ಇದರ ಮೇಲೆ ನಿಯಂತ್ರಣ ಸಾಧಿಸಲು ಹಾತೊರೆಯುತ್ತಿವೆ.

ಅದಮ್​ಪುರ್, ಹರಿಯಾಣ

ಕಳೆದ ಆಗಸ್ಟ್​ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಭಜನ್​ಲಾಲ್​ರ ಕಿರಿಯ ಮಗ ಕುಲ್​ದೀಪ್ ಬಿಷ್ಣೋಯ್ ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅದಮ್​ಪುರ್ ಉಪ ಚುನಾವಣೆ ನಡೆಯುತ್ತಿದೆ. ಬಿಷ್ಣೋಯ್ ಅವರ ಮಗ ಭವ್ಯ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 1968ರಿಂದಲೂ ಅಮ್​ಪುರ್ ಕ್ಷೇತ್ರವು ಭಜನ್​ಲಾಲ್ ಕುಟುಂಬದ ಸುಪರ್ದಿಯಲ್ಲಿಯೇ ಇದೆ. ದಿವಂಗತ ಮಾಜಿ ಮುಖ್ಯಮಂತ್ರಿಯು ಒಟ್ಟು 9 ಬಾರಿ ಇಲ್ಲಿಂದ ಸ್ಪರ್ಧಿಸಿದ್ದರು. ಅವರ ಪತ್ನಿ ಜಸ್ಮಾ ದೇವಿ ಒಮ್ಮೆ ಮತ್ತು ಕುಲದೀಪ್ ನಾಲ್ಕು ಬಾರಿ ಜಯಗಳಿಸಿದ್ದರು.

ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಜೈ ಪ್ರಕಾಶ್ ಅವರನ್ನು ಕಣಕ್ಕಿಳಿಸಿದೆ. ಅವರು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರಿಗೆ ತೀರಾ ಹತ್ತಿರದವರು. ಹಲವು ದಶಕಗಳಿಂದ ಚಾಲ್ತಿಯಲ್ಲಿದ್ದ ಭಜನ್ ಲಾಲ್ ಮತ್ತು ಹೂಡಾ ಕುಟುಂಬಗಳ ಹೊಯ್ದಾಟಕ್ಕೆ ಈ ಉಪಚುನಾವಣೆಯು ಮತ್ತೊಮ್ಮೆ ವೇದಿಕೆ ಒದಗಿಸಿದೆ.

ಮುನುಗೋಡ್, ತೆಲಂಗಾಣ

ಕಳೆದ ಆಗಸ್ಟ್ ತಿಂಗಳಲ್ಲಿ ಕೊಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಅನಿವಾರ್ಯವಾಯಿತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಕೆಸಿಆರ್ ಅವರ ಟಿಆರ್​ಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ಆದರೆ ಬಿಜೆಪಿ ಮತ್ತು ಟಿಆರ್​ಎಸ್ ನಡುವೆ ನೇರ ಹಣಾಹಣಿ ಇದ್ದಂತೆ ಕಾಣುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು 2024ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಭಾಗವಾಗಿ ಟಿಆರ್​ಎಸ್​ ಪಕ್ಷವನ್ನು ಬಿಆರ್​ಎಸ್​ ಎಂದು ಬದಲಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಸ್ಥಾಪನೆಯ ಕನಸು ಕಾಣುತ್ತಿದೆ. ಕಳೆದ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದೇ ಒಂದು ಸ್ಥಾನ ಪಡೆದುಕೊಂಡಿತ್ತು.

ಮೊಕಮಾ ಮತ್ತು ಗೋಪಾಲ್​ಗಂಜ್, ಬಿಹಾರ

ಆಡಳಿತಾರೂಢ ಜೆಡಿಯು ಪಕ್ಷವು ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡು, ಆರ್​ಜೆಡಿ ಜೊತೆಗೆ ಕೈಜೋಡಿಸಿದ ನಂತರ ನಡೆಯುತ್ತಿರುವ ಉಪ ಚುನಾವಣೆ ಇದು. ಕಾಂಗ್ರೆಸ್ ಮತ್ತು ಇತರ ಪಕ್ಷಗಳೂ ಇದೀಗ ಮೈತ್ರಿಕೂಟ ರಚಿಸಿಕೊಂಡು ಜೆಡಿಯುಗೆ ಬೆಂಬಲ ನೀಡಿವೆ.

ಅಪರಾಧ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾದ ಹಿನ್ನೆಲೆಯಲ್ಲಿ ಆರ್​ಜೆಡಿಯ ಅನಂತ್ ಸಿಂಗ್ ತಮ್ಮ ಕ್ಷೇತ್ರವನ್ನು ತೆರವು ಮಾಡಬೇಕಾಯಿತು. ಅವರು ಈಗ ಜೈಲಿನಲ್ಲಿದ್ದಾರೆ. ಮಹಾಮೈತ್ರಿಕೂಟವು ಇದೀಗ ಅವರ ಪತ್ನಿಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಶಾಸಕ ಸುಭಾಷ್ ಸಿಂಗ್ ಸಾವಿನ ಹಿನ್ನೆಲೆಯಲ್ಲಿ ಗೋಪಾಲ್ ಕ್ಷೇತ್ರವು ತೆರವಾಗಿತ್ತು. ಅವರ ಪತ್ನಿ ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಗೋಲಾ ಗೋಕರ್ಣನಾಥ್, ಉತ್ತರ ಪ್ರದೇಶ

ಉತ್ತರ ಪ್ರದೇಶದ ಗೋಲಾ ಗೋಕರ್ಣನಾತ್ ಮತ್ತು ಒಡಿಶಾದ ಧಾಮ್​ನಗರ್​ ಕ್ಷೇತ್ರಗಳಲ್ಲಿ ಬಿಜೆಪಿಯು ತನ್ನ ಅಧೀನದಲ್ಲಿದ್ದ ಕ್ಷೇತ್ರವನ್ನು ಮತ್ತೆ ಜಯಿಸುವ ವಿಶ್ವಾಸದಲ್ಲಿದೆ. ಎರಡೂ ಕ್ಷೇತ್ರಗಳಲ್ಲಿ ದಿವಂಗತ ಶಾಸಕರ ಮಕ್ಕಳನ್ನೇ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಶಾಸಕ ಅರವಿಂದ್ ಗಿರಿ ಅವರು ಕಳೆದ ಸೆ 6ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಗೋಲಾ ಗೋಕರ್ಣನಾಥ್ ಕ್ಷೇತ್ರದಲ್ಲಿ ಚುನಾವಣೆ ಅನಿವಾರ್ಯ ಅಯಿತು. ಬಿಎಸ್​ಪಿ ಮತ್ತು ಕಾಂಗ್ರೆಸ್​ ಪಕ್ಷಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿಲ್ಲ. ಬಿಜೆಪಿಯ ಅಮನ್ ಗಿರಿ ಅವರ ಎದುರು ಸಮಾಜವಾದಿ ಪಕ್ಷದ ವಿನಯ್ ತಿವಾರಿ ಸ್ಪರ್ಧಿಸಿದ್ದಾರೆ. ವಿನಯ್ ತಿವಾರಿ ಇದೇ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ.

ಧಾಮ್​ನಗರ್, ಒಡಿಶಾ

ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷವು ಅದಂತಿ ದಾಸ್ ಅವರನ್ನು ಕಣಕ್ಕಿಳಿದಿದೆ. ಧಾಮ್​ನಗರ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಐವರು ಅಭ್ಯರ್ಥಿಗಳ ಪೈಕಿ ಏಕೈಕ ಮಹಿಳಾ ಅಭ್ಯರ್ಥಿ ಇವರು. ಬಿಜೆಪಿ ಶಾಸಕ ಬಿಷ್ಣು ಚರಣ್ ಸೇಥಿ ಅವರ ಸಾವಿನಿಂದಾಗಿ ಇಲ್ಲಿ ಉಪ-ಚುನಾವಣೆ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೇಸರಿ ಪಕ್ಷವು ಸೇಥಿ ಅವರ ಮಗ ಸೂರ್ಯಬಂಶಿ ಸೂರಜ್ ಅವರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಈ ಕ್ಷೇತ್ರದ ಫಲಿತಾಂಶವು ವಾಸ್ತವಕ್ಕೆ ಕನ್ನಡಿ ಹಿಡಿಯಲಿದೆ.

ಆಡಳಿತಾರೂಢ ಬಿಜೆಪಿ ಪಕ್ಷವು 2019ರ ಒಡಿಶಾ ವಿಧಾನಸಭಾ ಚುನಾವಣೆಗಳಲ್ಲಿ ಮತಗಳಿಕೆ ಕುಗ್ಗಿಸಿಕೊಂಡಿತ್ತು. ಆದರೆ ಪಂಚಾಯಿತಿ ಚುನಾವಣೆಗಳಲ್ಲಿ ಹಳೆಯ ಸಾಧನೆ ಮರುಕಳಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 21 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಜಯಗಳಿಸಿತ್ತು. ಕಳೆದ ಮೂರು ವರ್ಷಗಳಲ್ಲಿ ಕಳೆದುಕೊಂಡಿದ್ದ ಪ್ರಭಾವವನ್ನು ಇತ್ತೀಚೆಗೆ ಬಿಜೆಪಿ ಮತ್ತೆ ಪಡೆದುಕೊಂಡಿರುವಂತೆ ಭಾಸವಾಗುತ್ತಿದೆ. ಈ ಚುನಾವಣೆ ಕುತೂಹಲ ಕೆರಳಿಸಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್