ರಾಜ್ಯದ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್​ ಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Dec 12, 2022 | 9:21 PM

ರಾಜ್ಯದ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್​ ಯಾತ್ರೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್​ ಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ನವದೆಹಲಿ: ರಾಜ್ಯ ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)​ ನಡುವೆ ಗುದ್ದಾಟ ನಡೆಯುತ್ತಿರುವುದು ಗೊತ್ತಿರುವ ವಿಷಯ. ಹೀಗಾಗಿ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ (Rahul Gandhi) ನೇತೃತ್ವದ ಭಾರತ ಜೋಡೋ ಯಾತ್ರೆ ಸಂಪೂರ್ಣವಾಗಿ ಕರ್ನಾಟಕದ ಗಡಿ ದಾಟುತ್ತಿದಂತೆ ಇಬ್ಬರು ನಾಯಕರು ಶಕ್ತಿ ಪ್ರದರ್ಶನಕ್ಕಾಗಿ ಪ್ರತ್ಯೇಕ ಬಸ್​ ಯಾತ್ರೆ (Bus Yatra) ಮಾಡಲು ಮುಂದಾಗಿದ್ದರು. ಆದರೆ ಈಗ ಕೈ ಹೈಕಮಾಂಡ್​ ಇದಕ್ಕೆ ಬ್ರೆಕ್​ ಹಾಕಿದೆ. ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್​ ಯಾತ್ರೆ ಮಾಡುತ್ತೇವೆ ಎನ್ನುವ ಮೂಲಕ ಹೈಕಮಾಂಡ್​ ಮಾತಿಗೆ ತಲೆಬಾಗಿದ್ದಾರೆ.

ಇದನ್ನೂ ಓದಿ: ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರ ಬಂಧನ: ಸಿದ್ದರಾಮಯ್ಯ ಖಂಡನೆ

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವೆಲ್ಲರೂ ಒಟ್ಟಿಗೆ ಬಸ್​ ಯಾತ್ರೆಯಲ್ಲಿ ಭಾಗಿಯಾಗುತ್ತೇವೆ. ಇದಾದ ಬಳಿಕ ನಾವು ಎರಡು ತಂಡಗಳನ್ನು ಮಾಡುತ್ತೇವೆ. ಮೊದಲ ಹಂತದ ಯಾತ್ರೆ ಬಳಿಕ, ವಿಧಾನಸಭಾ ಕ್ಷೇತ್ರದ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಎರಡು ತಂಡಗಳಲ್ಲಿ, ಒಂದು ತಂಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಹೋಗುತ್ತೆ. ಇನ್ನೊಂದು ತಂಡ ನನ್ನ (ಸಿದ್ದರಾಮಯ್ಯ) ಅಧ್ಯಕ್ಷತೆಯಲ್ಲಿ ಇರುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದು-ಡಿಕೆಶಿ ಪ್ರತ್ಯೇಕ ಬಸ್​ ಯಾತ್ರಗೆ ಬ್ರೇಕ್, ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್

ನಮ್ಮಿಬ್ಬರ ತಂಡದಲ್ಲಿ ಸಹ ಬೇರೆ ಬೇರೆ ನಾಯಕರು ಇರುತ್ತಾರೆ. ನಾವಿಬ್ಬರೂ ರಾಜ್ಯದ ಮೂಲೆ ಮೂಲೆಗು ಹೋಗುತ್ತೇವೆ. ಮೊದಲ ಹಂತದಲ್ಲಿ ದಕ್ಷಿಣ ಭಾಗವನ್ನು ಕವರ್ ಮಾಡುತ್ತೇವೆ. ನಂತರ ಉಳಿದ ಬಾಗ ಕವರ್ ಮಾಡುತ್ತೇವೆ. ನಾವು ಕ್ಲಾಸ್ ಸಮಾವೇಶ ಮಾಡುತ್ತೇವೆ, ಕ್ಯಾಸ್ಟ್ ಸಮಾವೇಶ ಮಾಡಲ್ಲಾ. ಬಿಜೆಪಿಯವರು SC-ST ಸಮಾವೇಶ ಮಾಡಿದರೇ ಅದು ಜಾತಿ ಅಲ್ವಾ? ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.