ನನಗೆ ಸ್ವಲ್ಪ ಧಿಮಾಕು ಜಾಸ್ತಿಯೇ ಇದೆ, ಯಾರನ್ನೂ ಕೇರ್ ಮಾಡಲ್ಲ; ಬಸವರಾಜ ರಾಯರೆಡ್ಡಿ ಹೀಗೆನ್ನಲು ಕಾರಣವೇನು?

| Updated By: ಗಣಪತಿ ಶರ್ಮ

Updated on: Aug 02, 2023 | 8:19 PM

ಬಿಆರ್ ಪಾಟೀಲ್​​ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಎಂದಿದ್ದಾರೆ. ನಾನು ಕೂಡ ಯಾರಿಗೂ ಕಡಿಮೆ ಇಲ್ಲ, ನಾನು ಯಾರಿಗೂ ಕೇರ್ ಮಾಡಲ್ಲ. ಅವರಿಗಿಂತ ನನಗೆ ಸ್ವಲ್ಪ ಧಿಮಾಕು ಜಾಸ್ತಿನೇ ಇದೆ ಎಂದು ರಾಯರೆಡ್ಡಿ ಹೇಳಿದ್ದಾರೆ.

ನನಗೆ ಸ್ವಲ್ಪ ಧಿಮಾಕು ಜಾಸ್ತಿಯೇ ಇದೆ, ಯಾರನ್ನೂ ಕೇರ್ ಮಾಡಲ್ಲ; ಬಸವರಾಜ ರಾಯರೆಡ್ಡಿ ಹೀಗೆನ್ನಲು ಕಾರಣವೇನು?
ಬಸವರಾಜ ರಾಯರೆಡ್ಡಿ
Follow us on

ಕೊಪ್ಪಳ: ‘ಆಳಂದ ಶಾಸಕ ಬಿಆರ್ ಪಾಟೀಲ್​​ ಅವರು ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ ಎಂದು ಹೇಳಿದ್ದಾರೆ. ನಾನು ಕೂಡ ಯಾರಿಗೂ ಕಡಿಮೆ ಇಲ್ಲ, ಯಾರನ್ನೂ ಕೇರ್ ಮಾಡಲ್ಲ. ಅವರಿಗಿಂತ ನನಗೆ ಸ್ವಲ್ಪ ಧಿಮಾಕು ಜಾಸ್ತಿನೇ ಇದೆ’ ಎಂದು ಬಸವರಾಜ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶಾಸಕರು ನಂತರ ಕ್ಷಮೆ ಕೋರಿದ್ದಾರೆ ಎಂಬ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ಬಗ್ಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಪರಮೇಶ್ವರ್​ ಅವರನ್ನು ಪ್ರಶ್ನೆ ಮಾಡಿದ್ದು ಸತ್ಯ ಎಂದು ಹೇಳಿದ್ದಾರೆ.

ಕೆಲ ಶಾಸಕರು ಸಹಿ ಸಂಗ್ರಹಿಸಿದ್ದರು. ಅದಕ್ಕೆ ನಾನು ಸಹಿ ಹಾಕಿದ್ದೆ. ಮುಖ್ಯಮಂತ್ರಿಗಳು ಸಹ ಏನೂ ತಪ್ಪು ತಿಳಿದುಕೊಂಡಿಲ್ಲ. ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ಕರೆಯುವುದಕ್ಕೆ ನಮ್ಮ ಬೈಲಾದಲ್ಲಿ ಅವಕಾಶವಿದೆ. ಹೊಸ ಸಚಿವರ ಮಧ್ಯೆ ನಮಗೆ ಸ್ವಲ್ಪ ಸಮನ್ವಯದ ಕೊರತೆ ಇತ್ತು. ಅದಕ್ಕಾಗಿ ಸಮನ್ವಯ ಸಮಿತಿ ರಚನೆಯಾದರೆ ತಪ್ಪೇನಿಲ್ಲ. ಬಿಆರ್ ಪಾಟೀಲ್​​ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಎಂದಿದ್ದಾರೆ. ನಾನು ಕೂಡ ಯಾರಿಗೂ ಕಡಿಮೆ ಇಲ್ಲ, ನಾನು ಯಾರಿಗೂ ಕೇರ್ ಮಾಡಲ್ಲ. ಅವರಿಗಿಂತ ನನಗೆ ಸ್ವಲ್ಪ ಧಿಮಾಕು ಜಾಸ್ತಿನೇ ಇದೆ ಎಂದು ರಾಯರೆಡ್ಡಿ ಹೇಳಿದ್ದಾರೆ.

ಶಾಸಕರು ಹಾಗೂ ಸಚಿವರ ಮಧ್ಯೆ ಯಾವುದೇ ಅಸಮಾಧಾನವಿಲ್ಲ. ಯಾರಿಂದಲೂ ಈ ಸರ್ಕಾರವನ್ನು ಅಸ್ಥಿರ ಮಾಡೋಕೆ ಆಗುವುದಿಲ್ಲ. ಸರ್ಕಾರ ಬೀಳಿಸುವಷ್ಟು ಕೆಳಮಟ್ಟದ ಜನರು ನಾವಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಸರ್ಕಾರ ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ನಿಲ್ಲದ ಭಿನ್ನಮತ; ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆಂಬ ಪರಮೇಶ್ವರ ಹೇಳಿಕೆಗೆ ರಾಯರೆಡ್ಡಿ ಆಕ್ಷೇಪ

ದೆಹಲಿ ಸಭೆಗೆ ನಾನು ಹೋಗುತ್ತಿಲ್ಲ; ಬಸವರಾಜ ರಾಯರೆಡ್ಡಿ

ದೆಹಲಿಯಲ್ಲಿ ಹೈಕಮಾಂಡ್ ಕರೆದಿರುವ ಸಭೆಗೆ ನಾನು ಹೋಗುತ್ತಿಲ್ಲ ಎಂದೂ ರಾಯರೆಡ್ಡಿ ತಿಳಿಸಿದ್ದಾರೆ. ನನಗೆ ಹೈಕಮಾಂಡ್​​ನಿಂದ ಅಧಿಕೃತ ಅಹ್ವಾನ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ. ನನಗೆ ತಿಳಿದ ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ಕರೆದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Mon, 31 July 23