Belagavi session: ಬಿಜೆಪಿ ಕಾಂಗ್ರೆಸ್​ಗೆ ರೆಬೆಲ್ ಸ್ಟಾರ್​ಗಳ ತಲೆನೋವು: ಸ್ವಪಕ್ಷದ ವಿರುದ್ಧವೇ ಈ ನಾಯಕರ ಆಕ್ರೋಶ!

ಬೆಳಗಾವಿ ಅಧಿವೇಶನ 2023: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಎರಡನೇ ದಿನ ಕೂಡ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅವುಗಳದ್ದೇ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಬಿಕೆ ಹರಿಪ್ರಸಾದ್ ಹಾಗೂ ಬಸವರಾಜ ರಾಯರೆಡ್ಡಿ ತಲೆನೋವಾಗಿ ಪರಿಣಮಿಸಿದರು.

Belagavi session: ಬಿಜೆಪಿ ಕಾಂಗ್ರೆಸ್​ಗೆ ರೆಬೆಲ್ ಸ್ಟಾರ್​ಗಳ ತಲೆನೋವು: ಸ್ವಪಕ್ಷದ ವಿರುದ್ಧವೇ ಈ ನಾಯಕರ ಆಕ್ರೋಶ!
ರಾಯರೆಡ್ಡಿ, ಹರಿಪ್ರಸಾದ್ ಹಾಗೂ ಯತ್ನಾಳ್
Follow us
TV9 Web
| Updated By: Ganapathi Sharma

Updated on: Dec 05, 2023 | 7:21 PM

ಬೆಳಗಾವಿ, ಡಿಸೆಂಬರ್ 5: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ (Winter Session) ಕೆಲವು ವಿಶೇಷ ಘಟನೆಗಳಿಗೆ ನಾಂದಿ ಹಾಡುತ್ತಿದೆ. ಈಗಾಗಲೇ ಬಿಜೆಪಿ (BJP) ನಾಯಕರ ವಿರುದ್ಧ ರೆಬೆಲ್ ಆಗಿರೋ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಕಡೆಯಾದರೆ, ಕಲಾಪ ಆರಂಭದ ದಿನವಾದ ನಿನ್ನೆಯಿಂದ ಕಾಂಗ್ರೆಸ್ (Congress) ಶಾಸಕ ಬಸವರಾಜ ರಾಯರೆಡ್ಡಿ ಸರ್ಕಾರದ ವಿರುದ್ಧವೇ ವಿಪಕ್ಷ ಸದಸ್ಯನ ಪಾತ್ರ ವಹಿಸಿದ್ದಾರೆ. ಇತ್ತ ವಿಧಾನಪರಿಷತ್​ನಲ್ಲಿ ಸ್ವಪಕ್ಷದ ವಿರುದ್ಧವೇ ಬಿಕೆ ಹರಿಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಹೂಡಲು ಭರ್ಜರಿ ಸಿದ್ಧತೆ ಮಾಡಿಕೊಡಿದ್ದರೆ, ಇತ್ತ ಸರ್ಕಾರ ಕೂಡಾ ಕೌಂಟರ್ ಕೊಡಲು ಸಚಿವರನ್ನು ಸಜ್ಜುಗೊಳಿಸಿದೆ. ವಿಪಕ್ಷಗಳಿಂದ ಬರುವ ಯಾವುದೇ ಆರೋಪಗಳ ಬಾಣವನ್ನು ಎದುರಿಸಲು ಕಾಂಗ್ರೆಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ನಿನ್ನೆಯಿಂದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ವಿಪಕ್ಷ ಸದಸ್ಯರೇನೋ ಎನ್ನುವಂತೆ ವರ್ತಿಸ್ತಿದ್ದಾರೆ. ನಿನ್ನೆಯಷ್ಟೇ ಆರ್. ಅಶೋಕ್​ರನ್ನು ಸದನಕ್ಕೆ ಪರಿಚಯಿಸಬೇಕು ಅಂತಾ ಪಟ್ಟು ಹಿಡಿದಿದ್ದ ರಾಯರೆಡ್ಡಿ, ಇಂದು ಕೂಡಾ ಸಿಡಿಮಿಡಿಗೊಂಡಿದ್ದಾರೆ.

ಸಭಾತ್ಯಾಗ ಮಾಡಿದ ರಾಯರೆಡ್ಡಿ

ಸದನದ ನಿಯಮಾವಳಿ ಬಗ್ಗೆ ಬಸವರಾಜ ರಾಯರೆಡ್ಡಿ ಮಾತನಾಡಲು ಮುಂದಾಗ್ತಿದ್ದಂತೆ, ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ನೀವು ಬಂದಿದ್ದೇ 12 ಗಂಟೆಗೆ ಕುಳಿತುಕೊಳ್ಳಿ ಎಂದ್ರು. ಇದ್ರಿಂದ ಅಸಮಾಧಾನಗೊಂಡ ರಾಯರೆಡ್ಡಿ ಸ್ಪೀಕರ್​ಗೆ ಸದಸ್ಯರ ಮಾತು ಕೇಳುವ ತಾಳ್ಮೆ ಇರಬೇಕು ಅಂತಾ ಸ್ಪೀಕರ್ ಜೊತೆ ವಾಗ್ವಾದ ನಡೆಸಿದ್ರು. ಮಾತಾಡಲು ಅವಕಾಶ ಸಿಗದಿದ್ದರೆ ಹೊರನಡೆಯುತ್ತೇನೆ ಅಂತಾ ಹೇಳಿ ಸಭಾತ್ಯಾಗ ಮಾಡಿದ್ದಾರೆ.

ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದ್ದಾರೆ: ಹರಿಪ್ರಸಾದ್

ಮತ್ತೊಂದೆಡೆ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ವಿಪಕ್ಷ ನಾಯಕರ ಪರ ಬ್ಯಾಟ್ ಬೀಸಿದ್ದಾರೆ. ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ. ಇಡಿ, ಐಟಿ ಮೂಲಕ ಯಾವತ್ತೂ ವಿಪಕ್ಷಗಳು ತೊಂದರೆ ನೀಡಿಲ್ಲ. ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ: ಬಿಕೆ ಹರಿಪ್ರಸಾದ್

ಯತ್ನಾಳ್ ಸಿಡಿಮಿಡಿ

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೆ ಸಿಡಿಮಿಡಿಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ದಾಳಿ ಸಂಬಂಧ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಭ್ರಷ್ಟಾಚಾರವನ್ನು ಯಾವ ಪಕ್ಷದವರೂ ಮಾಡಿದ್ರೂ, ಅವರ ಅವರ ವಿರುದ್ಧ ಕ್ರಮ ಆಗ್ಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಹೇಗೆ ಅಂತಾ ಪ್ರಶ್ನಿಸಿದರು.

ಕಾಂಗ್ರೆಸ್, ಬಿಜೆಪಿಯ ಈ ಮೂವರು ನಾಯಕರು ಕಲಾಪದ ವೇಳೆಯೂ ಪಕ್ಷದ ನಾಯಕರಿಗೆ ತಲೆನೋವಾಗಿಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ