ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ: ಸಿಎಂ ಇಬ್ರಾಹಿಂ
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಆದರೆ, ಮೈತ್ರಿಯಿಂದಾಗಿ ಕೆರಳಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ ಅವರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು, ಡಿ.8: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಜೆಡಿಎಸ್ ಪಕ್ಷದ ಮೇಲೆ ಮುನಿಸಿಕೊಂಡಿರುವ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ (CM Ibrahim), ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಅವರಿಗೆ ಎಚ್ಚರಿಕೆ ನೀಡಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಬ್ರಾಹಿಂ, ಡಿಸೆಂಬರ್ 11ರ ಬಳಿಕ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ನಮಗೆ ಮೂರನೇ ಶಕ್ತಿಯಾಗಿ ಬೆಳೆಯಲು ಅವಕಾಶವಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೋಡಿ ಬೇಸರವಾಯ್ತು. ಕುಮಾರಸ್ವಾಮಿ ಅವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ದೇವೇಗೌಡ ಅವರು ಒತ್ತಡಕ್ಕೆ ಒಳಗಾಗಿದ್ದಾರೆ, ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲಾ ಶಾಸಕರು ಜಾತ್ಯತೀತ ಸಿದ್ಧಾಂತದಲ್ಲೇ ಗೆದ್ದು ಬಂದಿರುವುದು. ಈಗಾಗಲೇ ಜೆಡಿಎಸ್‌ನ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದು ದೇವೇಗೌಡ, ಕುಮಾರಸ್ವಾಮಿ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಸಮಾಧಾನದಿಂದ ಅವರಿಗೆ ಸಂದೇಶ ಮುಟ್ಟಿಸುತ್ತಿದ್ದೇನೆ ಎಂದರು.
ಇದನ್ನೂ ಓದಿ: ಹೆಚ್ಡಿ ದೇವೇಗೌಡರೇ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ಇರುವುದು ಅನುಮಾನ: ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ
ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸುತ್ತಾರೆ ಅನ್ನೋ ಸುದ್ದಿ ಇದೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸುವುದನ್ನು ಸ್ವಾಗತಿಸ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಯತ್ನಾಳ್ ಕುಟುಂಬ ಈಗಲೂ ದರ್ಗಾಕ್ಕೆ ಹೋಗುತ್ತದೆ: ಸಿಎಂ ಇಬ್ರಾಹಿಂ
ಮೌಲ್ವಿ ತನ್ವೀರ್ ಹಾಶ್ಮಿಗೆ ಐಸಿಸ್ ಉಗ್ರರ ನಂಟು ಇದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಇಬ್ರಾಹಿಂ, ಧಾರ್ಮಿಕ ಗುರುಗಳಿಗೆ ಸೂಫಿ ಸಂತರು ಅವರು. ಯತ್ನಾಳ್ ಕುಟುಂಬ ಈಗಲೂ ದರ್ಗಾಕ್ಕೆ ಹೋಗುತ್ತದೆ. ಕೇವಲ ಓಟಿನ ರಾಜಕಾರಣಕ್ಕೆ ಧರ್ಮವನ್ನ ಟಾಗ್ರೆಟ್ ಮಾಡುತ್ತಿದ್ದಾರೆ ಎಂದರು. ಯತ್ನಾಳ್ ಅವರೇ.. ಜನರ ಸಮಸ್ಯೆ ಬಗ್ಗೆ, ಶೈಕ್ಷಣಿಕ, ಆರೋಗ್ಯದ ಬಗ್ಗೆ ಮಾತಾಡಲು ವಿಷಯಗಳಿವೆ. ನೀವು ನಿಮ್ಮ ಪಾಡಿಗೆ ಕೆಲಸ ಮಾಡಿ. ನಾವು ನಮ್ಮ ಕೆಲಸ ಮಾಡುತ್ತಾ ಹೋಗುತ್ತೇವೆ ಎಂದರು.
ಪಕ್ಷದಿಂದ ಉಚ್ಚಾಟನೆ ಮಾಡುವವರು ಯಾರು? ಅವರಿಗೆ ಜನವೇ ಇಲ್ಲ. ನಾನು ಮೂರು ವರ್ಷದ ಅಧ್ಯಕ್ಷ. ಜನತಾದಳದ ಮತದಾರರು ಆರಿಸಿ ಬಂದು ಅವರು ಡಿಕ್ಲರ್ ಮಾಡಿರುವ ಸರ್ಟಿಫಿಕೇಟ್ ಇದೆ. ಇವತ್ತು ಡಿಸಾಲ್ವ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಡಿ.9 ರಂದು ಸಭೆ ಕರೆದಿದ್ದಾರೆ. 12 ಶಾಸಕರನ್ನ ಕೂರಿಸಿ ಜನವರಿಯಲ್ಲಿ ಮಾತಾಡಿಸುತ್ತೇನೆ. ಯಾರ ಸಭೆಗೆ ಎಷ್ಟು ಮಂದಿ ಬರುತ್ತಾರೆ ಎಂದು ನೋಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ