AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Session: ಕಮಿಷನ್ ಪಡೆಯಲು ಮೂರನೇ ವ್ಯಕ್ತಿ ನೇಮಕ ಆರೋಪ: ವಿದ್ಯುತ್​ ಗುತ್ತಿಗೆದಾರರಿಂದ ಪ್ರತಿಭಟನೆ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಹಾಗಾಗಿ ಹತ್ತು ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಸುವರ್ಣ ಗಾರ್ಡ್​ನಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಮೂರನೇ ವ್ಯಕ್ತಿ ರೇಟ್ ಪಿಕ್ಸ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದು, ಕೆ.ಜೆ ಜಾರ್ಜ್ ಬಂದರೆ ಮೂರನೇ ವ್ಯಕ್ತಿ ಹೆಸರು ಹೇಳುವುದಾಗಿ ಪಟ್ಟು ಹಿಡಿದಿದ್ದಾರೆ.

Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 08, 2023 | 2:47 PM

Share

ಬೆಳಗಾವಿ, ಡಿಸೆಂಬರ್​ 08: ಹತ್ತು ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (Electricity Contractors Association) ದಿಂದ ನಗರದ ಸುವರ್ಣಗಾರ್ಡನ್​ ಬಳಿ ಪ್ರತಿಭಟನೆ ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಧಿಕ್ಕಾರ ಕೂಗಿ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರನೇ ವ್ಯಕ್ತಿ ರೇಟ್ ಪಿಕ್ಸ್ ಮಾಡುತ್ತಿದ್ದಾನೆ ಸರ್ಕಾರ ಇಲಾಖೆಯನ್ನ ಮಾರಿಕೊಂಡಿದೆ ಎಂದು ಆರೋಪಿಸಿದ್ದು, ಸಚಿವರು ಬಂದರೆ ಮೂರನೇ ವ್ಯಕ್ತಿ ಹೆಸರು ರಿವೀಲ್​ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ.

ಬೇಡಿಕೆಗಳೇನು?

  • 300 ಕೋಟಿ ರೂ. ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಬರಬೇಕಿದೆ.
  • 1200 ಕೋಟಿ ರೂ. ಕಾಮಗಾರಿ ಆದೇಶ ಆದರೂ ಕಾಮಗಾರಿ ಮಾಡಲು ಬಿಡುತ್ತಿಲ್ಲ.
  • ಅನಧಿಕೃತ ವಿದ್ಯುತ್ ಪಂಪಸೆಟ್ ಸ್ಥಗಿತ ಮಾಡಿದ್ದು, ಮಾಡಿರುವ ಕಾಮಗಾರಿಗಳಿಗೆ ಬಜೆಟ್ ನೀಡದೇ ಇರುವುದು.
  • ವಿದ್ಯುತ್ ಗುತ್ತಿಗೆದಾರರ ಬಿಲ್​ಗಳು ಕಚೇರಿಯಲ್ಲಿ ವಿಳಂಬವಾಗುತ್ತಿರುವುದು.
  • ಗುತ್ತಿಗೆದಾರರ ಮತ್ತು ಗ್ರಾಹಕರ ಹೆಸ್ಕಾಂ ಇತರೆ ಕಾಮಗಾರಿ ವಿಳಂಬ.
  • ಹೆಸ್ಕಾಂ ಆನ್ ಲೈನ್ ಸೇವೆ ಕುಂಠಿತವಾಗಿರುವ ಕಾರಣ ಹೊಸ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿರುವುದು.

ಇದನ್ನೂ ಓದಿ: ನನ್ನ ಸುಳ್ಳುಗಾರ ಅನ್ನೋ ಬದಲು ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆಗೆ ನಡೆಸಲಿ: ಬಸನಗೌಡ ಪಾಟೀಲ್ ಯತ್ನಾಳ್

ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಿದ್ದು, ಇಲಾಖೆಯಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪ, ಕಮಿಷನ್ ದಂಧೆ ಕುರಿತು ಗುತ್ತಿಗೆದಾರರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದಿದ್ದು, ಸಚಿವರ ಮನವೊಲಿಕೆಗೆ ಜಗ್ಗದೇ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ವೇಳೆ ಜಾರ್ಜ್ ಅವರನ್ನ ಕಳುಹಿಸುದಾಗಿ ಸಚಿವ ಮಧು ಬಂಗಾರಪ್ಪ ತೆರಳಿದ್ದಾರೆ.

ಇಂದು ಒಂದೇ ದಿನ 14 ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಸುವರ್ಣ ಸೌಧ ಹೊರಗೆ ಇಂದು ಒಂದೇ ದಿನ 14 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಕರ್ನಾಟಕ ಪ್ರದೇಶ ಮಾದಿಗರ ಸಂಘದಿಂದ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ, ಮಾರಣಹೊಳ ಗ್ರಾಮದ ರೈತರ 1400 ಇನಾಮ ಜಮೀನು ರಕ್ಷಣೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ, ಕಲಿಕಾ ಲೈಸೆನ್ಸ್ ಸೇರಿ ವಿವಿಧ ಬೇಡಿಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮೋಟಾರ್ ವಾಹನ ಚಾಲನಾ ತರಬೇತಿ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಇದನ್ನೂ ಓದಿ: ನಿತಿನ್ ಗಡ್ಕರಿ ಜೊತೆ ಪೋಟೋ ತೆಗಿಸಿಕೊಂಡಾಕ್ಷಣ ತನ್ವೀರ್ ಪೀರಾ ಪಾಪಮುಕ್ತನಾಗಲಾರ: ಬಸನಗೌಡ ಪಾಟೀಲ್ ಯತ್ನಾಳ್

ಜಾತಿಗಣತಿಯನ್ನ ಬಹಿರಂಗ ಪಡಿಸಲು ಭೀಮ ಆರ್ಮಿ‌ ಸಂಘಟನೆಯಿಂದ ಹೋರಾಟ. ಕಲಾವಿದರ ಮಾಶಾಸನ ಹೆಚ್ಚಳ, ಕಲಾವಿದರ ಅಕಾಡೆಮಿ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಬೀದಿ ನಾಟಕಗಳ ಒಕ್ಕೂಟದಿಂದ ಹೋರಾಟ. ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆಯಿಂದ ದೇವದಾಸಿಯರಿಗೆ ಪ್ರತಿ ತಿಂಗಳು 5 ಸಾವಿರ ಗೌರವಧನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದಿಂದ ಹೋರಾಟ. ಕಿತ್ತೂರು ಕೋಟೆ ಮರು ನಿರ್ಮಾಣಕ್ಕೆ ಒತ್ತಾಯಿಸಿ ರಾಣಿ ಚೆನ್ನಮ್ಮ ನವಭಾರತ ಸೇನೆಯಿಂದ ಮನವಿ ಸಲ್ಲಿಕೆ. ಕಡು ಬಡವರಿಗೆ ಆಶ್ರಯ ಮನೆ ಒದಿಸಲು ಒತ್ತಾಯಿಸಿ‌ ಕರ್ನಾಟಕ ಬಡವರ ಹಿತರಕ್ಷಣಾ ವೇದಿಕೆಯಿಂದ ಮನವಿ‌‌ ಸಲ್ಲಿಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:46 pm, Fri, 8 December 23