Amit Shah: ರಾಜಕೀಯ ಅಂದ್ರೆ ಫಿಸಿಕ್ಸ್ ಅಲ್ಲ, ಕೆಮಿಸ್ಟ್ರಿ: ಬಿಜೆಪಿ ಚಾಣಕ್ಯ ಅಮಿತ್ ಶಾ ವಿಶ್ಲೇಷಣೆ

ಭಾರತದಲ್ಲಿ 2014ಕ್ಕೂ ಮೊದಲು ಸರ್ಕಾರದ ನೀತಿಗಳಿಗೆ ಲಕ್ವ ಹೊಡೆದಿತ್ತು. 2014ರ ನಂತರ ಈ ಪರಿಸ್ಥಿತಿ ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ

Amit Shah: ರಾಜಕೀಯ ಅಂದ್ರೆ ಫಿಸಿಕ್ಸ್ ಅಲ್ಲ, ಕೆಮಿಸ್ಟ್ರಿ: ಬಿಜೆಪಿ ಚಾಣಕ್ಯ ಅಮಿತ್ ಶಾ ವಿಶ್ಲೇಷಣೆ
ಅಮಿತ್​ ಶಾ

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಮ್ಮಿಶ್ರ ರಾಜಕೀಯದ ಬಗ್ಗೆ ಮಾತನಾಡುತ್ತಾ, ರಾಜಕೀಯವು ಫಿಸಿಕ್ಸ್ ಅಲ್ಲ , ಅದು ಕೆಮಿಸ್ಟ್ರಿ ಎಂದು ಹೇಳಿದ್ದಾರೆ. ಭಾರತದಲ್ಲಿ 2014ಕ್ಕೂ ಮೊದಲು ಸರ್ಕಾರದ ನೀತಿಗಳಿಗೆ ಲಕ್ವ ಹೊಡೆದಿತ್ತು. 2014ರ ನಂತರ ಈ ಪರಿಸ್ಥಿತಿ ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಮಾಧ್ಯಮವೊಂದರ ನಾಯಕತ್ದ ಸಮಾವೇಶದಲ್ಲಿ ಭಾಗವಹಿಸಿ ಅಮಿತ್ ಶಾ ಮಾತನಾಡಿದರು.

ಎರಡು ಪಕ್ಷಗಳು ಒಟ್ಟಾಗಿ ಸೇರಿದಾಗ ಮತ ಬ್ಯಾಂಕ್‌ಗಳು ಹೆಚ್ಚಾಗುತ್ತವೆ ಎಂದು ಊಹಿಸುವುದು ಸರಿಯಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲಲಿದೆ ಎಂದು ಹೇಳಿದ ಶಾ, ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ದೇಶವನ್ನು ಹೇಗೆ ಪರಿವರ್ತಿಸಿದೆ ಎಂದು ಹೇಳುತ್ತಾ ಕೇಂದ್ರದ ಸಾಧನೆಗಳನ್ನು ಪಟ್ಟಿ ಮಾಡಿದ್ದರು. ಸರ್ಜಿಕಲ್ ಸ್ಟ್ರೈಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ, ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಿದ್ದು ಸೇರಿದಂತೆ ಅನೇಕ ಉತ್ತಮ ಕಾರ್ಯಗಳನ್ನು ಮೋದಿ ಸರ್ಕಾರ ಮಾಡಿದೆ ಎಂದು ಅಮಿತ್ ಶಾ ಹೇಳಿದರು.

‘2014ರ ನಂತರ ಭಾರತವು ಸ್ಥಿರ ಸರ್ಕಾರಕ್ಕೆ ಸಾಕ್ಷಿಯಾಗಿದೆ. 2014ರ ಮೊದಲು ಭಾರತವು ನೀತಿಗಳಿಗೆ ಲಕ್ವ ಹೊಡೆದ ಸ್ಥಿತಿಯಲ್ಲಿತ್ತು. ಭಾರತದ ಘನತೆಗೆ ಧಕ್ಕೆಯಾಗಿತ್ತು. ಪ್ರತಿಯೊಬ್ಬ ಮಂತ್ರಿಯೂ ತಾನು ಪ್ರಧಾನ ಮಂತ್ರಿ ಎಂದು ಭಾವಿಸಿದ್ದರು. ಪ್ರಧಾನಿ ಮೋದಿ ಅವರು ತಾಳ್ಮೆ ಮತ್ತು ಯೋಜನೆಯೊಂದಿಗೆ ಅನೇಕ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಾರೆ ಎಂದು ಅವರು ಹೇಳಿದರು. 2014ರ ಮೊದಲು ಭಾರತದ ಘನತೆಗೆ ಧಕ್ಕೆ ಆಗಿತ್ತು ಎಂದು ಪ್ರಸ್ತಾಪಿಸಿದ ಅವರು ಪ್ರತಿಯೊಬ್ಬ ಸಚಿವರು ತಮ್ಮನ್ನು ಪ್ರಧಾನಿ ಎಂದು ಭಾವಿಸಿದ್ದರು. ಜನರು ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಪ್ರಶ್ನಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಇದಕ್ಕೆ ಮುಖ್ಯ ಕಾರಣವೆಂದರೆ ಯಾವುದೇ ಸಮಸ್ಯೆಗೆ ಪರಿಹಾರ ಸಿಗುತ್ತಿರಲಿಲ್ಲ. ಪ್ರಧಾನಿ ಮೋದಿ ತಾಳ್ಮೆ ಮತ್ತು ಯೋಜನೆಯೊಂದಿಗೆ ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಾರೆ.

ಹಲವಾರು ಇತರ ಅಭಿವೃದ್ಧಿ ಕ್ರಮಗಳನ್ನು ಅಮಿತ್ ಶಾ ವಿವರಿಸಿದರು. ನಾನು ಹೇಳುತ್ತಾ ಹೋದರೆ ಇದು ಮಹಾಭಾರತ ಅಥವಾ ರಾಮಾಯಣದ ಕಥೆ ಎಂದು ನೀವು ಭಾವಿಸುತ್ತೀರಿ. ಮೋದಿ ಸರ್ಕಾರದ ಹಲವಾರು ಕ್ರಮಗಳಿಂದಾಗಿ ವಿದೇಶಿ ವಿನಿಮಯವು 473 ಬಿಲಿಯನ್ ಡಾಲರ್​ನಿಂದ ಈಗ 640 ಬಿಲಿಯನ್ ಡಾಲರ್ ರೂಪಾಯಿಗೆ ಏರಿದೆ. ಪ್ರಧಾನಿ ಮೋದಿ ಅವರು ದೇಶದ ಪ್ರಗತಿಯಲ್ಲಿ ಎಂದಿಗೂ ಭಾಗವಾಗದ 80 ಕೋಟಿ ಜನರನ್ನು ಒಳಗೊಳ್ಳುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು. ನೇರ ಲಾಭ ವರ್ಗಾವಣೆ (ಡಿಬಿಟಿ), ಬಡತನ ನಿರ್ಮೂಲನೆ, ಗ್ರಾಮೀಣ ವಿದ್ಯುದೀಕರಣ ಮತ್ತು ಸರ್ಕಾರವು ಪ್ರಾರಂಭಿಸಿದ ಇತರ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು. ಮೋದಿ ಸರ್ಕಾರವು ಹಣಕಾಸು ವಲಯದಲ್ಲಿನ ಸಮಸ್ಯೆಗಳನ್ನು ಶಿಸ್ತಿನಿಂದ ಪರಿಹರಿಸಿದೆ ಮತ್ತು ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಪಾಲನ್ನು ಅಲ್ಪ ಮೊತ್ತಕ್ಕೆ ಇಳಿಸಿದೆ ಎಂದು ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ದೆಹಲಿಯಲ್ಲಿ ಹೇಳಿದರು.

ಇದನ್ನೂ ಓದಿ: Fact Check ಸಂವಿಧಾನದ ಪೀಠಿಕೆಯ ಹಿಂಭಾಗದ ಖಾಲಿ ಪುಟ ಓದುತ್ತಿರುವ ಅಮಿತ್ ಶಾ; ವೈರಲ್ ಚಿತ್ರದ ಸತ್ಯಾಸತ್ಯತೆ ಏನು? ಇದನ್ನೂ ಓದಿ: ದಕ್ಷಿಣ ಭಾರತದ ಕೊಡುಗೆಯಿಲ್ಲದೆ ಭಾರತದ ಪ್ರಗತಿಯನ್ನು ಯೋಚಿಸಲೂ ಸಾಧ್ಯವಿಲ್ಲ: ಅಮಿತ್ ಶಾ

Published On - 5:44 pm, Sat, 4 December 21

Click on your DTH Provider to Add TV9 Kannada