ಹಿಂದೂ ಧರ್ಮವನ್ನ ಯಾರು ಹುಟ್ಟಿಸಿದರೆಂದು ಪ್ರಶ್ನಿಸಿದ ಪರಮೇಶ್ವರ್​ಗೆ ಅಜ್ಜ, ಮುತ್ತಜ್ಜನ ಹೆಸರೇಳುವಂತೆ ಈಶ್ವರಪ್ಪ ಸವಾಲ್

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ ವಿರುದ್ಧ ಕಿಚ್ಚು ಹೊತ್ತಿಕೊಂಡಿದೆ. ಇದರ ಗೃಹ ಸಚಿವ ಪರಮೇಶ್ವರ್ ಅವರು ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದ್ದಾರೆ ಎಂದು ಪ್ರಶ್ನಸಿದ್ದು, ಇದೀಗ ಗೃಹ ಸಚಿವರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರು ಪ್ರತಿಕ್ರಿಯಿಸಿ ನಿಮ್ಮ ಅಜ್ಜ, ಮುತ್ತಜ್ಜನ ಹೆಸರುಗಳನ್ನು ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಹಿಂದೂ ಧರ್ಮವನ್ನ ಯಾರು ಹುಟ್ಟಿಸಿದರೆಂದು ಪ್ರಶ್ನಿಸಿದ ಪರಮೇಶ್ವರ್​ಗೆ ಅಜ್ಜ, ಮುತ್ತಜ್ಜನ ಹೆಸರೇಳುವಂತೆ ಈಶ್ವರಪ್ಪ ಸವಾಲ್
ಪರಮೇಶ್ವರ, ಈಶ್ವರಪ್ಪ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ

Updated on:Sep 06, 2023 | 12:43 PM

ಬಾಗಲಕೋಟೆ, (ಸೆಪ್ಟೆಂಬರ್ 06): ಸನಾತನ ಧರ್ಮದ (sanatana dharma) ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ನೀಡಿದ್ದ ಹೇಳಿಕೆಯ ವಿವಾದ ಇನ್ನೂ ತಣ್ಣಗಾಗಿಲ್ಲ. ಈ ಬಗ್ಗೆ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಇದರ ಮಧ್ಯೆ ಹಿಂದೂ (Hindu) ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (Dr G Parameshwara) ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಇದೀಗ ಬಿಜೆಪಿ ನಾಯಕ ಕೆಎಸ್​ ಈಶ್ವರಪ್ಪ (KS EshwarappaP ಪ್ರತಿಕ್ರಿಯಿಸಿ, ಹಿಂದೂ ಧರ್ಮದ ಬಗ್ಗೆ ಪ್ರಶ್ನೆ‌ಕೇಳುವಂತಹ ಅವಕಾಶ ಪರಮೇಶ್ವರ ಅವರಂತಹ ಹಿರಿಯರಿಗೆ ಬರಬಾರದು. ಮೇಲಾಗಿ ಅವರು ಡಾಕ್ಟರ್, ರಾಜ್ಯದ‌ ಗೃಹ ಮಂತ್ರಿ ಬೇರೆ. ಯಾರೇ ಏನೇ ಮಾತಾಡಿದರೂ ಹಿಂದೂ ಸಮಾಜ ಶಾಂತವಾಗಿದೆ. ಎಲ್ಲಿ ಖಂಡನೆ ಮಾಡಬೇಕೋ ಅಲ್ಲಿ ಖಂಡನೆ ಮಾಡಿ ಕೂತಿದೆ. ಪತ್ರಿಕೆಯಲ್ಲಿ ಹೆಸರು ಬರಬೇಕೆಂಬ ಖಾಯಿಲೆ ಶುರುವಾಗಿದೆ. ಪರಮೇಶ್ಚರ್ ಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಹಿಂದೂ ಧರ್ಮದ ಬಗ್ಗೆ ಮಾತಾಡಲು ನಿಮಗೆ ಅಧಿಕಾರ ಇಲ್ಲ. ದಯವಿಟ್ಟು ಹಿಂದೂ ಸಮಾಜದ ಕ್ಷಮೆ ಕೇಳಿಬಿಡಿ. ಇಲ್ಲವೇ ನಿಮ್ಮ ಅಜ್ಜ, ಮುತ್ತಜ್ಜನ ಹೆಸರುಗಳ ಪಟ್ಟಿ ತೆಗಯಿರಿ ಎಂದು ಸವಾಲ್ ಹಾಕಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಪರಮೇಶ್ವರ ಬಗ್ಗೆ ನನಗೆ ಬಹಳ ಗೌರವವಿದೆ. ಆವರ ಬಾಯಲ್ಲಿ ಯಾಕೆ ಈ ರೀತಿಯ ಮಾತು ಬಂತೋ ಗೊತ್ತಿಲ್ಲ. ಪರಮೇಶ್ವರ ಅವರ ಅಪ್ಪನ ಹೆಸರು ಗಂಗಾಧರಪ್ಪ, ಅವರ ಅಜ್ಜನ ಹೆಸರು ಮರಿಯಪ್ಪ. ಅವರ ಮುತ್ತಜ್ಜ ಯಾರು ಅಂತಾ ಹೇಳಲಿ ನೋಡೋಣ. ನಿಮ್ಮ ವಂಶದಲ್ಲಿರುವ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ. ನೂರಾರು ವರ್ಷ ಇತಿಹಾಸವಿರುವ ಹಿಂದೂ ಧರ್ಮದ ಬಗ್ಗೆ ಮಾತಾಡುವಷ್ಟು ದೊಡ್ಡವನಾಗಿ ಬಿಟ್ಟಿಯಾ? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ; ಸಚಿವ ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ

ನಿಮ್ಮ ಅಜ್ಜ, ಮುತ್ತಜ್ಜನ ಹೆಸರುಗಳ‌ಪಟ್ಟಿ ತೆಗೆಯಲು ಹೆಳವರ ಕಡೆಗೆ ಹೋಗಬೇಕು. ನಿಮ್ಮ ಅಜ್ಜ, ಮುತ್ತಜ್ಜನ ಬಗ್ಗೆಯೇ ನಿಮಗೆ ಗೊತ್ತಿಲ್ಲ. ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಕೇಳ್ತೀರಾ? ಸನಾತನ ಧರ್ಮವನ್ನ ಹಿಂದೂ ಧರ್ಮ ಅಂತಾ ಕರೆಯುವುದೇ ಅದಕ್ಕೆ. ಸಾಧು ಸಂತರು, ತಪಸ್ವಿಗಳು ಈ ಧರ್ಮವನ್ನ ಉಳಿಸಿ. ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಕರೆದ ಹಿಂದೂ ಧರ್ಮ. ಇದರ ಉದ್ದೇಶ, ಸರ್ವೇಜನ ಸುಖಿನೋ ಭವಂತು, ಸರ್ವ ದೇವಾ ನಮಸ್ಕಾರ, ಕೇಶವಂ ಪ್ರತಿಗಜ್ಜತಿ ಎಂದು ಹೇಳುವದೇ ಹಿಂದೂ ಧರ್ಮ. ಅಂತಹ ಹಿಂದೂ ಧರ್ಮದ ಬಗ್ಗೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ‌ ಮಾತಾನಾಡೋದು ಸರಿಯಾ? ಎಂದು ಪ್ರಶ್ನಿಸಿದರು.

ಪರಮೇಶ್ವರ ಹಿಂದೂ ಧರ್ಮದ ಬಗ್ಗೆ ಮಾತಾಡಿದ್ದು ನನಗೆ ಆಶ್ವರ್ಯ, ಮತ್ತು ನೋವುವಾಗಿದೆ. ನಿಮ್ಮ ಬಗ್ಗೆ ನಮಗೆ ಗೌರವ ಇದೆ, ಇಡೀ ರಾಜ್ಯದಲ್ಲಿ ನಿಮಗೆ ತುಂಬಾನೇ ಗೌರವಿಸುತ್ತಾರೆ. ಹಿಂದೂ ಧರ್ಮದ ಬಗ್ಗೆ ಯಾವಾಗ ಹುಟ್ಟಿತ್ತು ಎಂದು ನೀವು ಕೇಳಬಾರದು. ಹಾಗಾಗಿ ರಾಜ್ಯದ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:21 pm, Wed, 6 September 23