ಕೆ.ಆರ್. ಪೇಟೆಯಲ್ಲಿ ಬಿಜೆಪಿ ಸಮಾವೇಶ, 140 ಸ್ಥಾನ ಗುರಿಯೊಂದಿಗೆ ರಾಜ್ಯ ಪ್ರವಾಸ ಆರಂಭ- ಬಿ.ಎಸ್.ಯಡಿಯೂರಪ್ಪ ಘೋಷಣೆ

BS Yediyurappa: ಮೋದಿ ಕಾರ್ಯಕ್ರಮಗಳು ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮತದಾರರು ನಮ್ಮ ಜೊತೆ ಇದ್ದಾರೆ. ಇದೆಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕೆ.ಆರ್. ಪೇಟೆಯಲ್ಲಿ ಬಿಜೆಪಿ ಸಮಾವೇಶ, 140 ಸ್ಥಾನ ಗುರಿಯೊಂದಿಗೆ ರಾಜ್ಯ ಪ್ರವಾಸ ಆರಂಭ- ಬಿ.ಎಸ್.ಯಡಿಯೂರಪ್ಪ ಘೋಷಣೆ
ಕೆ.ಆರ್. ಪೇಟೆಯಲ್ಲಿ ಸಮಾವೇಶ, 140 ಸ್ಥಾನ ಗುರಿಯೊಂದಿಗೆ ರಾಜ್ಯ ಪ್ರವಾಸ ಆರಂಭ- ಬಿ.ಎಸ್.ಯಡಿಯೂರಪ್ಪ
Edited By: ಸಾಧು ಶ್ರೀನಾಥ್​

Updated on: Jul 18, 2022 | 3:07 PM

ಬೆಂಗಳೂರು: ಜುಲೈ 21ರಂದು (ಗುರುವಾರ) ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ (KR Pet) ಬಿಜೆಪಿ (BJP) ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ ಬೃಹತ್​ ಸಮಾವೇಶದ ಬಳಿಕ ರಾಜ್ಯ ಪ್ರವಾಸ ಆರಂಭ ಮಾಡುತ್ತೇನೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಸಂಕಲ್ಪ ಹೊಂದಿದ್ದೇವೆ. ಖಂಡಿತವಾಗಿಯೂ 140 ಸ್ಥಾನ ಗೆಲ್ಲುವ ಗುರಿ ತಲುಪುವ ವಿಶ್ವಾಸವಿದೆ. ಮೋದಿ ಕಾರ್ಯಕ್ರಮಗಳು ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮತದಾರರು ನಮ್ಮ ಜೊತೆ ಇದ್ದಾರೆ. ಇದೆಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಯಾರೂ ಚಿಂತೆ ಪಡಬೇಕಿಲ್ಲ:

ಬಿಜೆಪಿ ಚಿಂತನ ಮಂಥನ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಯಾರನ್ನು ಎಲ್ಲಿ ನಿಲ್ಲಿಸಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಲಿದೆ. ಚುನಾವಣೆಯಲ್ಲಿ 150 ಸೀಟ್ ಗೆಲ್ಲುವ ವಿಚಾರ ಚರ್ಚೆಯಾಗಿದೆ. ಅಕ್ಕಪಕ್ಕದ ಕ್ಷೇತ್ರ ಗೆಲ್ಲಿಸಿಕೊಂಡು ಬರುವ ಬಗ್ಗೆಯೂ ಚರ್ಚೆ ನಡೆದಿದೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಯಾರೂ ಚಿಂತೆ ಪಡಬೇಕಿಲ್ಲ. ಚುನಾವಣೆಗೆ 8 ತಿಂಗಳಿದೆ, ಕಾಂಗ್ರೆಸ್​ನವರು ಈಗಲೇ ಓಡಾಡ್ತಿದ್ದಾರೆ. ಮುಂದಿನ ಸಿಎಂ ನಾನೇ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಬಿಜೆಪಿಯಿಂದ ಪ್ರತಿ ದಿನವೂ ಉತ್ಸವ ನಡೆಸಲಾಗುತ್ತಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯ ಸಂಪುಟ ಸಭೆ
ಜುಲೈ 22ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಂಪುಟ ಸಭೆ ನಡೆಯಲಿದೆ.

Published On - 2:28 pm, Mon, 18 July 22

TV9 Web

TV9 Kannada

Read More
Loading...
Unable to load recommendations.
Follow Us