‘ಸಿಎಂ BSY ಪುತ್ರ ವಿಜಯೇಂದ್ರ ಮಾರಿಷಸ್ಗೆ ಹೋಗಿದ್ರು, Why?.. ಇದು ರಾಜ್ಯದ ಜನರಿಗೆ ಗೊತ್ತಾಗಬೇಕು’
ಬಿಜೆಪಿ ಶಾಸಕರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 21 ಜನರ ಕುಟುಂಬ ಮಾರಿಷಸ್ಗೆ ಹೋಗಿತ್ತು. ಸಿಎಂ BSY ಪುತ್ರ ವಿಜಯೇಂದ್ರ ಕುಟುಂಬ ಮಾರಿಷಸ್ಗೆ ಹೋಗಿತ್ತು. ಬಿ.ವೈ.ವಿಜಯೇಂದ್ರ ಮಾರಿಷಸ್ಗೆ ಹೋಗಿದ್ದು ಯಾಕೆ? ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಶಾಸಕ ಯತ್ನಾಳ್ ಹೇಳಿದರು.
ಬೆಂಗಳೂರು: ಬಿಜೆಪಿ ಶಾಸಕರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 21 ಜನರ ಕುಟುಂಬ ಮಾರಿಷಸ್ಗೆ ಹೋಗಿತ್ತು. ಸಿಎಂ BSY ಪುತ್ರ ವಿಜಯೇಂದ್ರ ಕುಟುಂಬ ಮಾರಿಷಸ್ಗೆ ಹೋಗಿತ್ತು. ಬಿ.ವೈ.ವಿಜಯೇಂದ್ರ ಮಾರಿಷಸ್ಗೆ ಹೋಗಿದ್ದು ಯಾಕೆ? ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಶಾಸಕ ಯತ್ನಾಳ್ ಹೇಳಿದರು.
ಶಿವಮೊಗ್ಗಕ್ಕೆ ಹೆಲಿಕಾಪ್ಟರ್ನಲ್ಲಿ ಓಡಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲ ಇಲ್ಲೇ ಸಾಕ್ಷಿ ಇದೆ ನೋಡಿ ಎಂದು ತೋರಿಸಿದೆ. ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಸಿಜೆ ಪ್ರಶ್ನಿಸಿದ್ದಾರೆ. 2 ಪ್ರಕರಣದಲ್ಲಿ ಸಿಎಂಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಂಧಿಸದಂತೆ ಸುಪ್ರೀಂಕೋರ್ಟ್ನಿಂದ ತಡೆ ತಂದಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
‘ನಿಮ್ಮ ಅಳಿಯ,ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ’ ಬೆಂಗಳೂರಿನ ಶಿವರಾಮ ಕಾರಂತ್ ಬಡಾವಣೆ ಪ್ರಕರಣ, ಗಂಗೇನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಇದೆ. ಈ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ. ವ್ಯಾಪಕ ಭ್ರಷ್ಟಾಚಾರದ ನಾನು ಉಲ್ಲೇಖ ಮಾಡಿದ್ದೇನೆ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ಹಾಗಾದರೆ ರಾಜ್ಯದಲ್ಲಿ ನಡೆಯುತ್ತಿರುವುದು ಏನು? BSY ಯಾವಾಗ ಇಳಿಯುತ್ತಾರೆಂದು ಶಾಸಕರೇ ಹೇಳ್ತಿದ್ದಾರೆ. ಸಿಎಂ BSY ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ. ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಮತ್ತೆ ಹರಿಹಾಯ್ದರು.
‘ಬಿಜೆಪಿ, ಕಾಂಗ್ರೆಸ್ನಲ್ಲಿ ಸಿಡಿ ತಯಾರು ಮಾಡುವ ಗುಂಪಿದೆ’ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಯುವತಿಯ ತಂದೆ, ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಒಬ್ಬರದ್ದೇ ಅಲ್ಲ ಸಿಡಿ ಇರುವುದು. ಸಿಡಿ ತಯಾರು ಮಾಡುವು ಗುಂಪು ಅವರಲ್ಲಿದೆ. ಬಿಜೆಪಿ, ಕಾಂಗ್ರೆಸ್ನಲ್ಲಿ ಸಿಡಿ ತಯಾರು ಮಾಡುವ ಗುಂಪಿದೆ. 1 ಕೋಟಿ, 2 ಕೋಟಿ ಹಣ ನೀಡಿ ಸಿಡಿ ಖರೀದಿ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರು, ಇವರದ್ದು ಜಾಯಿಂಟ್ ವೆಂಚರ್ ಇದೆ. ರಮೇಶ್ ಜಾರಕಿಹೊಳಿ ಪರಿಸ್ಥಿತಿ ಅಯೋಮಯವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
‘ನನ್ನನ್ನು ಬಿಜೆಪಿಯಿಂದ ಹೊರಹಾಕೋ ತಾಕತ್ತು ಯಾರಿಗೂ ಇಲ್ಲ’ ನನ್ನನ್ನು ಬಿಜೆಪಿಯಿಂದ ಹೊರಹಾಕೋ ತಾಕತ್ತು ಯಾರಿಗೂ ಇಲ್ಲ. ಬಿಜೆಪಿ ಪುನರುತ್ಥಾನಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಬೆಂಗಳೂರಿನ ಸಿಸಿಬಿ ಎಲ್ಲಿ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವರಾಜ್, ವಿಜಯೇಂದ್ರ ಜೊತೆ ಇದ್ದ ಫೋಟೋ ಎಲ್ಲಿದೆ? ರಾಧಿಕಾ ಕುಮಾರಸ್ವಾಮಿ ಜೊತೆಯಿದ್ದವರು ಮಂತ್ರಿಯಾಗಿಲ್ಲವೇ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
‘ನಿಜವಾದ ಕಳ್ಳರು ಎಲ್ಲಿದ್ದಾರೆ ಅಂದರೆ ರಾಜಕಾರಣದಲ್ಲಿದ್ದಾರೆ’ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲೂ ನ್ಯೂನತೆಯಿದೆ. ನ್ಯಾಯಾಂಗದಲ್ಲೂ ಕೆಲವರು ಉತ್ತಮ ನ್ಯಾಯ ಕೊಡುತ್ತಾರೆ. ಕೆಲವರು ದೊಡ್ಡ ಗಂಟು ಪಡೆದು ಸುಮ್ಮನಾಗ್ತಾರೆ ಎಂದು ಶಾಸಕರು ಹೇಳಿದರು.
ರಾಜಕಾರಣಿಗಳು ಸಾವಿರಾರು ಎಕರೆ ಭೂಮಿ ಇಟ್ಕೊಂಡಿದ್ದಾರೆ. ನಿಜವಾದ ಕಳ್ಳರು ಎಲ್ಲಿದ್ದಾರೆ ಅಂದರೆ ರಾಜಕಾರಣದಲ್ಲಿದ್ದಾರೆ. ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ಮಾಡುತ್ತಾರೆ. ರಾತ್ರಿ ಆದ್ಮೇಲೆ ಖೇಣಿ ಮನೆಯಲ್ಲೇ ಇರ್ತಾರೆ ಎಂದು ನೈಸ್ ಕಂಪನಿ ವಿಚಾರದಲ್ಲಿ ಶಾಸಕ ಯತ್ನಾಳ್ ಹೇಳಿದರು.
Published On - 7:19 pm, Wed, 17 March 21