ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡ್ಬೇಡಿ; ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅಲ್ಲ, ಅವರು ಮುನ್ಸಿಪಾಲ್ಟಿ ನಾಯಕ: ಹೆಚ್.ವಿಶ್ವನಾಥ್

ಬಿಜೆಪಿಯನ್ನು ಕಟ್ಟಿದ್ದು ಬಿ.ಎಸ್.ಯಡಿಯೂರಪ್ಪ ಅಲ್ಲ. ಅವರು ಮುನಿಸಿಪಾಲಿಟಿ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದು ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಶಂಕರಮೂರ್ತಿ, ಈಶ್ವರಪ್ಪ, ವಿ.ಎಸ್.ಆಚಾರ್ಯ, ಅನಂತಕುಮಾರ್. ಇವರೆಲ್ಲಾ ಸೇರಿ ಪಕ್ಷ ಕಟ್ಟಿದ ನಂತರ ಯಡಿಯೂರಪ್ಪ ಅಧಿಕಾರ ಅನುಭವಿಸಿದರು ಅಷ್ಟೇ: ವಿಶ್ವನಾಥ್

ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡ್ಬೇಡಿ; ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅಲ್ಲ, ಅವರು ಮುನ್ಸಿಪಾಲ್ಟಿ ನಾಯಕ: ಹೆಚ್.ವಿಶ್ವನಾಥ್
ಹೆಚ್.ವಿಶ್ವನಾಥ್
Follow us
TV9 Web
| Updated By: Skanda

Updated on: Jul 21, 2021 | 2:14 PM

ಮೈಸೂರು: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿರುವ ಬಿಜೆಪಿ ಎಂಎಲ್​ಸಿ ಹೆಚ್​.ವಿಶ್ವನಾಥ್ (BJP MLC H.Vishwanath) , ಬಾಂಬೆ ಟೀಂ ಬಗ್ಗೆ ಧ್ವನಿ ಎತ್ತಿದ್ದು ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ (Minister) ಮಾಡಬೇಡಿ. ಬದಲಾವಣೆಗಾಗಿ ಎಲ್ಲರೂ ಬೆಂಬಲ ನೀಡಿದ್ದರು. ಆದರೆ, ಅಧಿಕಾರ ಸಿಕ್ಕ ಮೇಲೆ ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ (BY Vijayendra) ರೀತಿಯಾದರು. ಕೊಡಿ‌ ಕೊಡಿ ಅನ್ನೋದಕ್ಕೆ ಶುರು ಮಾಡಿದ್ದ ಅವರಿಗೆಲ್ಲಾ ಯಡಿಯೂರಪ್ಪ ಸಿಎಂ (BS Yediyurappa) ಆಗಿರಲಿಲ್ಲ. ವಿಜಯೇಂದ್ರ ಸಿಎಂ ಆಗಿದ್ದರು. ಹೀಗಾಗಿ 17 ಜನಕ್ಕೆ ಅಧಿಕಾರ ನೀಡದಿದ್ದರೂ ಪರವಾಗಿಲ್ಲ, ಅವರು ಎಲ್ಲಿಗೂ ಹೋಗುವುದಿಲ್ಲ. ಒಂದುವೇಳೆ ಹೋದರೆ ಹೋಗಲಿ. ರಾಜ್ಯದಲ್ಲಿ ಮತ್ತೆ ಚುನಾವಣೆ (Election) ನಡೆಯಲಿ ಎಂದಿದ್ದಾರೆ.

ಬಿಜೆಪಿಯನ್ನು ಕಟ್ಟಿದ್ದು ಬಿ.ಎಸ್.ಯಡಿಯೂರಪ್ಪ ಅಲ್ಲ. ಅವರು ಮುನಿಸಿಪಾಲಿಟಿ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದು ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಶಂಕರಮೂರ್ತಿ, ಈಶ್ವರಪ್ಪ, ವಿ.ಎಸ್.ಆಚಾರ್ಯ, ಅನಂತಕುಮಾರ್. ಇವರೆಲ್ಲಾ ಸೇರಿ ಪಕ್ಷ ಕಟ್ಟಿದ ನಂತರ ಯಡಿಯೂರಪ್ಪ ಅಧಿಕಾರ ಅನುಭವಿಸಿದರು ಅಷ್ಟೇ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಸದ್ದು ಮಾಡಿದ್ದಾರೆ.

ಯಡಿಯೂರಪ್ಪಗೆ ಕೆಲವು ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿರುವ ಹೆಚ್​.ವಿಶ್ವನಾಥ್, ಮೋದಿಯವರ ವಿಚಾರ ಒಮ್ಮೆಯಾದರೂ ಹೇಳಿದಿರಾ? ಎಲ್ಲಿಯಾದರೂ‌ ಒಂದು ಸಾರಿ ಅವರ ಬಗ್ಗೆ ಮಾತನಾಡಿದಿರಾ? ಎಂದು ಕೇಳಿದ್ದಾರೆ. ಮೋದಿ, ಭಾರತ ಭಾರತೀಯರ ಅಸ್ಮಿತೆ ಆಗಿದ್ದಾರೆ. ಅವರಂತೆ ಎಲ್ಲರ ವಿಶ್ವಾಸ ಸಹಕಾರ ಪಡೆದು‌ ಕೆಲಸ ಮಾಡಬೇಕು. ತನ್ನದೇ ಆದ ಒಂದು ತಂಡ ಇಟ್ಟುಕೊಂಡು‌ ಕೆಲಸ ಮಾಡಬೇಕು. ಜನರು, ರೈತರು, ಬಡವರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಮುಂದೆ ಬರುವವವರಿಗೆ ಕಿವಿ ಮಾತು ಹೇಳಿದ್ದಾರೆ.

ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಅಂತ ಹೇಳಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್​ ಅವರು ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಎಂ.ಬಿ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಎಲ್ಲರೂ ಶಿಕ್ಷಣದ ವ್ಯಾಪಾರಿಗಳು. ಬಡವ ಲಿಂಗಾಯತನಿಗೆ ಎಂ.ಬಿ.ಬಿ.ಎಸ್ ಸೀಟು ಕೊಟ್ಟಿದ್ದೀರಾ? ಸೈನಿಕ ಸಿ.ಪಿ.ಯೋಗೇಶ್ವರ್ ಮೂರು ಪಕ್ಷದ ಸರ್ಕಾರ ಅಂತ ಹೇಳಿದ್ದು ಸರಿಯಾಗಿಯೇ ಇದೆ. ಅವರು ಯಾವ ಪಾರ್ಟಿ ಅಂತಾನೆ ಅವರಿಬ್ಬರಿಗೂ ಗೊತ್ತಿಲ್ಲ ಎಂದಿದ್ದಾರೆ.

ಇತ್ತ ಮಾಧ್ಯಮಗಳಲ್ಲಿ ಇನ್ನೂ 500 ಸಿಡಿ ಇವೆ ಎಂಬ ವರದಿ ಬರುತ್ತಿದೆ. ಇದೊಂದು ಸಿಡಿ ಸರ್ಕಾರ. ಇದರಲ್ಲಿ ಯಾವುದೇ ಪಕ್ಷದವರು ಇದ್ದರೂ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಕರ್ನಾಟಕಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತನಿಖೆ ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

(BJP MLC H Vishwanath slams BS Yediyurappa and Karnataka Government)

ಇದನ್ನೂ ಓದಿ: ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ 

ಮಲೆನಾಡು ಅಭಿವೃದ್ಧಿಗೋಸ್ಕರ ಯಡಿಯೂರಪ್ಪ ಸಿಎಂ ಆಗಿ ಉಳಿಬೇಕು; ಆದರೆ, ರಾಜೀನಾಮೆ ಪಕ್ಕಾ ಅನ್ನಿಸ್ತಿದೆ – ಬೇಳೂರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ