ಅಮಿತ್ ಶಾರನ್ನು ಕರೆಸಿ ದೊಡ್ಡ ಸಮಾವೇಶ: ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಎಸ್ವೈ ಸ್ಪಷ್ಟನೆ
ಬಿ.ವೈ.ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸಿ, ಒಂದು ಲಕ್ಷ ಜನರನ್ನು ಸೇರಿಸಿ ದೊಡ್ಡ ಸಮಾವೇಶ ಮಾಡುವ ಚಿಂತನೆ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರು ನ.15: ಬಿ.ವೈ.ವಿಜಯೇಂದ್ರ (BY Vijayendra) ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ (Amith Shah) ಶಾರ ಅವರನ್ನು ಕರೆಸಿ, ಒಂದು ಲಕ್ಷ ಜನರನ್ನು ಸೇರಿಸಿ ದೊಡ್ಡ ಸಮಾವೇಶ ಮಾಡುವ ಚಿಂತನೆ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಬಿ.ವೈ.ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಆದೇಶದಂತೆ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬಿವೈ ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದೆ. ಎಲ್ಲಾ ನಾಯಕರು ಬಿವೈ ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಕ್ಕೆ ಸಂತೋಷ. ಅಮಿತ್ ಷಾ ಅವರನ್ನು ಬೆಂಗಳೂರಿಗೆ ಕರೆಸಿ ಒಂದು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುವ ಅಪೇಕ್ಷೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬಿವೈ ವಿಜಯೇಂದ್ರ ಒಬ್ಬ ಅತ್ಯುತ್ತಮ ಸಂಘಟಕ: ನಳಿನ್ ಕುಮಾರ್ ಕಟೀಲು
ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನಿಯುಕ್ತಿ ಮಾಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆಗಳು. ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ 28 ಲೋಕಸಭಾ ಸ್ಥಾನ ಗೆಲ್ಲಲು ಒಟ್ಟಾಗಿ ಹೋರಾಟ ಮಾಡುತ್ತೇವೆ. ನಾಲ್ಕು ವರ್ಷಗಳ ಹಿಂದೆ ಕಿರಿಯನಾಗಿ ರಾಜ್ಯಾಧ್ಯಕ್ಷನಾದಾಗ ನನಗೆ ಭಯ ಇತ್ತು. ಎಲ್ಲಾ ಹಿರಿಯರ ಅಶೀರ್ವಾದದೊಂದಿಗೆ ನಾಲ್ಕು ವರ್ಷ ಮೂರು ತಿಂಗಳು ಕೆಲಸ ಮಾಡಿದ್ದೇನೆ. ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರು ಸಿಎಂ ಆಗಿದ್ದಾಗ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನಗೆ ಯಾವ ರೀತಿ ಸಹಕಾರ, ಹಿರಿಯರು ಮಾರ್ಗದರ್ಶನ ಕೊಟ್ಟ ರೀತಿಯಲ್ಲೇ ಬಿವೈ ವಿಜಯೇಂದ್ರ ಅವರಿಗೆ ಕೊಡುತ್ತೀರಿ ಎಂಬ ನಿರೀಕ್ಷೆ ಇದೆ ಎಂದು ಪಕ್ಷದ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ಇದನ್ನೂ ಓದಿ: ಪದಗ್ರಹಣಕ್ಕಾಗಿ ತೆರಳುವ ಮೊದಲು ಕಾರ್ಯಕರ್ತರು ಮತ್ತು ಮಾಧ್ಯಮಗಳ ನೆರವು ಕೋರಿದ ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ ಒಬ್ಬ ಅತ್ಯುತ್ತಮ ಸಂಘಟಕ. ಅವರಿಗೆ ಪಕ್ಷ ಕಟ್ಟುವ ಕೆಲಸದಲ್ಲಿ ಬೆಂಗಾವಲಾಗಿ ಇರುತ್ತೇವೆ. ನನ್ನ ಅವಧಿಯಲ್ಲಿ ರಾಜ್ಯಾಧ್ಯಕ್ಷನಾಗಿ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದ್ದೇನೆ. ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಅಭಿನಂದನೆ. ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರ ಅವರಿಗೂ ಕೊಡಬೇಕು. ರಾಜ್ಯಾಧ್ಯಕ್ಷರಾದ ವಿಜಯೇಂದ್ರಗೆ ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ. 28 ಲೋಕಸಭಾ ಸ್ಥಾನ ಗೆಲ್ಲಲು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಹೊಸತನ ಬರಬೇಕು, ಇದ್ದವರು ಮಾರ್ಗದರ್ಶನ ಕೊಡಲಿ: ಡಿವಿ ಸದಾನಂದಗೌಡ
ಕಳೆದುಕೊಂಡಿದ್ದನ್ನು ಕಳೆದುಕೊಂಡ ಜಾಗದಲ್ಲೇ ಮತ್ತೆ ಪಡೆಯಬೇಕು. ಯಾವಾಗಲೂ ಹೊಸತನ ಬರಬೇಕು, ಇದ್ದವರು ಮಾರ್ಗದರ್ಶನ ಕೊಡಲಿ. ಬಿಎಸ್ವೈ ಸುಪುತ್ರರಾಗಿ ವಿಜಯೇಂದ್ರಗೆ ರಕ್ತದಲ್ಲಿ ಶಕ್ತಿ ಹರಿದು ಬಂದಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.
ವಿಜಯೇಂದ್ರ ಸಾರಥ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ: ಬೊಮ್ಮಾಯಿ
ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ವಿಜಯೇಂದ್ರಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಗೆ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಟ್ಟಾಗಿ ನಡೆದರೆ ಲೋಕಸಭೆಯಲ್ಲಿ ಯಶಸ್ಸು ಸಿಗುತ್ತದೆ. ವಿಜಯೇಂದ್ರ ಸಾರಥ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯೇಂದ್ರಗೆ ಸಹಕಾರ, ಮಾರ್ಗದರ್ಶನ ಮಾಡೋಣ: ಕಾರಜೋಳ
ನಮ್ಮ ರಾಜಕೀಯ ಲೆಕ್ಕಾಚಾರ ತಪ್ಪಿರಬಹುದು, ಹಾಗಾಗಿ ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತಿರಬಹುದು. ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ನಾವು ಸೇರಿದ್ದೇವೆ. ನಾವೆಲ್ಲರೂ ವಿಜಯೇಂದ್ರ ಜೊತೆಯಲ್ಲಿದ್ದು ಸಹಕಾರ, ಮಾರ್ಗದರ್ಶನ ಮಾಡೋಣ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Wed, 15 November 23