ಮೂರ್ಖ ಸರ್ಕಾರವೆಂದ ಯಡಿಯೂರಪ್ಪ, ನಾವು ಮೂರ್ಖರೇ ಎಂದ ಡಿಕೆ ಶಿವಕುಮಾರ್
ಕಾವೇರಿ ನೀರಿಗಾಗಿ ವಿಪಕ್ಷ ಬಿಜೆಪಿ ಹೋರಾಟ ಆರಂಬಿಸಿದ್ದು, ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೂರ್ಖ ಸರ್ಕಾರ ಎಂದು ಜರಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವು ಮೂರ್ಖರೇ, ನಾವು ರಾಜ್ಯದ ರೈತರ ಹಿತ ಕಾಯಲು ನಿಂತಿದ್ದೇವೆ ಎಂದಿದ್ದಾರೆ.
ಬೆಂಗಳೂರು, ಸೆ.23: ಕಾವೇರಿ ನೀರಿಗಾಗಿ ವಿಪಕ್ಷ ಬಿಜೆಪಿ ಹೋರಾಟ ಆರಂಬಿಸಿದ್ದು, ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಮೂರ್ಖ ಸರ್ಕಾರ ಎಂದು ಜರಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ನಾವು ಮೂರ್ಖರೇ, ನಾವು ರಾಜ್ಯದ ರೈತರ ಹಿತ ಕಾಯಲು ನಿಂತಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಬಂದ್ ಮಾಡುವುದು ಬೇಡ, ಯಾವ ಲಾಭಕ್ಕಾಗಿ ಮಾಡುತ್ತಾರೆ? ಬೆಂಗಳೂರು ಬಂದ್ ಮಾಡುವುದರಿಂದ ಯಾವುದೇ ಅನುಕೂಲ ಆಗಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬೆಂಗಳೂರು ಮರ್ಯಾದೆ ಹಾಳು ಮಾಡಿದರೆ ನೀವೇ ಚುಚ್ಚಿಕೊಂಡಂತೆ. ಬೆಂಗಳೂರಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯಗಳ ಜನ ವಾಸವಾಗಿದ್ದಾರೆ ಎಂದರು.
ಇದನ್ನೂ ಓದಿ: ಸೋಮವಾರ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ: ವಾಟಾಳ್ ನಾಗರಾಜ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅವರವರ ಹೋರಾಟ ಅವರು ಮಾಡುತ್ತಾರೆ. ಒಳಗಡೆ ಬಂದಾಗ ರಾಜ್ಯದ ಹಿತ, ಹೊರಗಡೆ ಹೋದಾಗ ರಾಜಕಾರಣ ಇದು ನಡೆಯುತ್ತದೆ. ನಾವು ರಾಜ್ಯದ ಹಿತ ಕಾಪಾಡುತ್ತಿದ್ದೇವೆ. ಹೊಸ ಹುರುಪು ಪ್ರತಿಭಟನೆ ಮಾಡುತ್ತಾ ಇದ್ದಾರೆ. ನೀರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅಂಕಿ ಅಂಶ ಹೇಳಿದರೆ ರಾಜ್ಯದ ಹಿತಕ್ಕೆ ಧಕ್ಕೆ ಆಗುತ್ತದೆ ಎಂದರು.
ದೇವೇಗೌಡರು ಹಿರಿಯ ಮುಖಂಡರು. ಅವರು ಹಿಂದೆ ಕೊಟ್ಟ ಒಂದು ಇಂಟರ್ ವ್ಯೂ ತೆಗೆದು ನೋಡಲಿ ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರೇನೋ ಮಾತಾಡಿದ್ದಾರೆ ಅಮಿತ್ ಶಾ ಜೊತೆ ಅಂದಿದ್ದಾರೆ. ಸೂಕ್ಷ್ಮ ವಾಗಿ ಮಾತಾಡಿದ್ದೇವೆ ಅಂತ ಹೇಳಿದ್ದಾರಲಾ, ಅದೇನೇನು ನುಡಿಮುತ್ತು ಆಡಿದಾರೆ ಏನು ಅಂತ ಹೇಳಲಿ ಎಂದರು.
ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಲಿ ಅಂತ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಸಿದಿ ಡಿಸಿಎಂ, ಸಿಟಿ ರವಿಯವರಿಗೆ ಸದ್ಯಕ್ಕೆ ಎಲ್ಲೂ ಜಾಗವಿಲ್ಲ. ಹಾಗಾಗಿ ಮಂಡ್ಯಕ್ಕೆ ಹೋಗಿದ್ದಾರೆ. ಪ್ರಧಾನಿ ಮಧ್ಯಪ್ರವೇಶ ಮಾಡಲಿ ಅಂತ ದೇವೇಗೌಡರೇ ಹೇಳಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ