ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಬೇಟಿಯಾಗುತ್ತಿರುವ ವಿಚಾರ ಗೊತ್ತಿಲ್ಲ: ಬಿಎಸ್ ಯಡಿಯೂರಪ್ಪ

ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಬೇಟಿಯಾಗುತ್ತಿರುವ ವಿಚಾರ ಗೊತ್ತಿಲ್ಲ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 21, 2023 | 5:56 PM

ವಿರೋಧ ಪಕ್ಷಗಳು ಹೋರಾಟ ಮಾಡಿದರೆ, ಪಾದಯಾತ್ರೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ, ಸುಪ್ರೀಮ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತಜ್ಞರ ಸಮಿತಿಯೊಂದನ್ನು ಕರ್ನಾಟಕಕ್ಕೆ ಕಳಿಸಿ ವಾಸ್ತವಾಂಶ ತಿಳಿದುಕೊಳ್ಳಲು ಮನವಿ ಮಾಡುವುದು ಮೊದಲು ಆಗಬೇಕಿದೆ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖಗೊಳ್ಳಬೇಕಿದೆ ಎಂದು ಯಡಿಯೂರಪ್ಪ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಎದ್ದಿರುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅತ್ಯಂತ ವಿವೇಚನೆಯಿಂದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳು ಹೋರಾಟ ಮಾಡಿದರೆ, ಪಾದಯಾತ್ರೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ, ಸುಪ್ರೀಮ್ ಕೋರ್ಟ್ ಗೆ ಮೇಲ್ಮನವಿ (appeal) ಸಲ್ಲಿಸಿ ತಜ್ಞರ ಸಮಿತಿಯೊಂದನ್ನು ಕರ್ನಾಟಕಕ್ಕೆ ಕಳಿಸಿ ವಾಸ್ತವಾಂಶ ತಿಳಿದುಕೊಳ್ಳಲು ಮನವಿ ಮಾಡುವುದು ಮೊದಲು ಆಗಬೇಕಿದೆ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖಗೊಳ್ಳಬೇಕಿದೆ ಎಂದು ಯಡಿಯೂರಪ್ಪ ಹೇಳಿದರು. ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಉದ್ದೇಶದಿಂದ ಅಮಿತ್ ಶಾ (Amit Shah) ಹಾಗೂ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇಂದು ದೆಹಲಿಗೆ ತೆರಳಿರುವ ಬಗ್ಗೆ ಕೇಳಿದಾಗ ಯಡಿಯೂರಪ್ಪ ನೀಡುವ ಉತ್ತರ ಆಶ್ಚರ್ಯ ಹುಟ್ಟಿಸುತ್ತದೆ. ಕುಮಾರಸ್ವಾಮಿ ದೆಹಲಿಗೆ ಹೋಗಿರೋದು ಮತ್ತು ಬಿಜೆಪಿ ನಾಯಕರನ್ನು ಭೇಟಿಯಾಗಲಿರುವ ಸಂಗತಿ ತಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮೊದಲಿಗೆ ಪ್ರಸ್ತಾಪ ಮಾಡಿದ್ದೇ ಯಡಿಯೂರಪ್ಪನವರು ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ