ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆನಂದ್ ಸಿಂಗ್ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದ್ದು, ರಾಜೀನಾಮೆ ನೀಡುವ ಬಗ್ಗೆ ನಾನು ಎಂದೂ ಹೇಳಿಲ್ಲ. ಖಾತೆ ಬದಲಾವಣೆಗಾಗಿ ನಾನು ಮನವಿ ಮಾಡಿದ್ದು ನಿಜ. ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವರಿಷ್ಠರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಸಿಎಂ ಭರವಸೆಯನ್ನು ಸ್ವೀಕರಿಸಿದ್ದೇನೆ, ಸಹಕರಿಸುತ್ತೇನೆ. ಸಹಕಾರ ತತ್ವದಡಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪರಿಸತರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Singh) ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಖಾತೆ ಬದಲಾವಣೆಗೆ ಆನಂದ್ ಸಿಂಗ್ ಒತ್ತಾಯಿಸಿದ್ದು ನಿಜ. ಆದರೆ ನಾವು ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮಾತುಕತೆ ವೇಳೆ ಅವರಿಗೆ ಮನವರಿಕೆ ಮಾಡಿದ್ದೇನೆ. ವರಿಷ್ಠರ ಗಮನಕ್ಕೆ ತಂದು ಬಗೆಹರಿಸುತ್ತೇವೆ. ಆನಂದ್ ಸಿಂಗ್ ಅಸಮಾಧಾನ ವಿಚಾರ ಸದ್ಯಕ್ಕೆ ಸುಖಾಂತ್ಯವಾಗಿದೆ. ನಾವೆಲ್ಲರೂ ಒಗ್ಗೂಡಿ ಪಕ್ಷ ಬಲವರ್ಧನೆಗೆ ಶ್ರಮಿಸುತ್ತೇವೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಸಂಧಾನ ಸಭೆಯ ನಂತರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ವಿಜಯನಗರದಲ್ಲಿ ಸಚಿವ ಆನಂದ್ ಸಿಂಗ್ ಅವರೇ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಹ ಅವರು ತಿಳಿಸಿದರು.
ಇದನ್ನೂ ಓದಿ:
ಬ್ಲಾಕ್‌ಮೇಲ್ ತಂತ್ರ ಮಾಡುವುದಿಲ್ಲ, ನೇರವಾಗಿ ಕೇಳುತ್ತೇನೆ: ಸಚಿವ ಆನಂದ್ ಸಿಂಗ್
ವಿಮಾ ಮಸೂದೆ ಚರ್ಚೆಗೆ ಒತ್ತಾಯಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ: ಶರದ್ ಪವಾರ್
(CM Basavaraj Bommai clarifies meeting with tourism minister Anand Singh is success no more unsatisfaction)
Published On - 9:19 pm, Wed, 11 August 21