AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತರು ಬಿಜೆಪಿ ಸ್ವತ್ತಲ್ಲ; ಡಿ ಕೆ ಶಿವಕುಮಾರ್ ಕೆಲ ದಿನಗಳ ಹಿಂದೆ ಈ ಮಾತು ಹೇಳಿದ್ದು ನೆನಪಿದೆಯೇ?

Karnataka Politics: ಯಡಿಯೂರಪ್ಪ ಅವರ ರಾಜೀನಾಮೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ವ್ಯಾಪಿಸಲು ಕಾಂಗ್ರೆಸ್​ಗೆ ಪೂರಕವಾಗಲಿದೆ. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ನಡೆದ ಸಭೆಯಲ್ಲಿ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಮೈಸೂರು ಭಾಗದಲ್ಲಿ ಬಿಟ್ಟಿರುವ ಕಾಂಗ್ರೆಸ್​ನ ಆಳದ ಬೇರುಗಳನ್ನು ಒಳಗೊಳಗೇ ಉತ್ತರ ಕರ್ನಾಟಕಕ್ಕೆ ಹರಿಸುವ ಉಪಾಯ ಅವರದು. 

ಲಿಂಗಾಯತರು ಬಿಜೆಪಿ ಸ್ವತ್ತಲ್ಲ; ಡಿ ಕೆ ಶಿವಕುಮಾರ್ ಕೆಲ ದಿನಗಳ ಹಿಂದೆ ಈ ಮಾತು ಹೇಳಿದ್ದು ನೆನಪಿದೆಯೇ?
ಪ್ರಾತಿನಿಧಿಕ ಚಿತ್ರ
Guruganesh Bhat
| Updated By: guruganesh bhat|

Updated on:Jul 22, 2021 | 10:36 PM

Share

ಬಿಜೆಪಿ ಪಾಳಯದಲ್ಲಿ ಕ್ಷಣಕ್ಷಣಕ್ಕೂ ಗೊಂದಲ, ತಳಮಳ. ಪ್ರಬಲ ನಾಯಕ, ರೈತ ಹೋರಾಟದಲ್ಲಿ ಹಿನ್ನೆಲೆಯ ಮತ್ತು ಸದ್ಯದ ಏಕಮಾತ್ರ ಪ್ರಬಲ ವೀರಶೈವ ಲಿಂಗಾಯತ ನಾಯಕ ಎಂದು ವ್ಯಾಖ್ಯಾನದಡಿ ಗುರುತಿಸಿಕೊಳ್ಳುವ ಬಿ.ಎಸ್. ಯಡಿಯೂರಪ್ಪ (BS Yediyurappa) ರಾಜೀನಾಮೆ ಪ್ರಸಂಗದ ಪಾತ್ರಧಾರಿಗಳ ಹೇಳಿಕೆ ಆಧರಿಸಿ ಅನೆಕಾನೇಕ ವಿಶ್ಲೇಷಣೆಗಳು ಹುಟ್ಟುತ್ತಲೇ ಇವೆ. ಉತ್ತರ ಕರ್ನಾಟಕದಲ್ಲಿ ಹಬ್ಬಿರುವ ಲಿಂಗಾಯತ ವೀರಶೈವ ಮತಗಳ ಜೇನುಗೂಡಿನ ಸಿಹಿ ಉಂಡಿರುವ ಬಿಎಸ್​ವೈ ರಾಜೀನಾಮೆ ನೀಡಿದರೆ ಆ ಜೇನಿನ ಸಿಹಿ ಉಣ್ಣಲು ಕಾಂಗ್ರೆಸ್​ಗೆ (Congress) ಒಳಗೊಳಗೇ ಖುಷಿಯಿದೆ. ಒಮ್ಮೆ ಯಡಿಯೂರಪ್ಪ ಅವರಿಂದ ಲಿಂಗಾಯತ ಮತಗಳು ಕೈತಪ್ಪಿದರೆ ಅದರ ಫಲಶ್ರುತಿಯನ್ನು ಉಣ್ಣುವ ಯೋಚನೆ ಕೈ ನಾಯಕರದು. ಅದೇ ಕಾರಣಕ್ಕೆ ಬಹಿರಂಗವಾಗಿ ಯಡಿಯೂರಪ್ಪ ಇನ್ನೆರಡು ವರ್ಷ ಅಧಿಕಾರ ನಡೆಸಿ ಅವಧಿ ಮುಗಿಸಲು ಅವಕಾಶ ನೀಡಬೇಕು ಎಂಬ ಮನೋಭಾವ ಇರುವಂತೆ ತೋರಿಸಿಕೊಳ್ಳುತ್ತಲೇ ಒಳಗೊಳಗೆ ಕಾಂಗ್ರೆಸ್ ನಾಯಕರು ಹೊಸ ಉಪಾಯ ಹೂಡಿದಿದ್ದಾರೆ ಎಂಬ ‘ಒಳಗಿನ ಮಾತು’ಗಳು ಕೇಳಿಬರುತ್ತಿವೆ.

ಒಂದಾನುವೇಳೆ ಯಡಿಯೂರಪ್ಪರಿಂದ ರಾಜೀನಾಮೆ ಪಡೆದರೆ ಕಾಂಗ್ರೆಸ್​ನ ವ್ಯೂಹ ಹೊಸ ಆಯಾಮ ಪಡೆಯಲಿದೆ. ಯಡಿಯೂರಪ್ಪನಂತಹ ಅತ್ಯುತ್ತಮ ಲಿಂಗಾಯತ ನಾಯಕ ಇದ್ದರೂ ಬಿಜೆಪಿ ಸಂಪೂರ್ಣ ಅವಧಿಗೆ ಅಧಿಕಾರ ನಡೆಸಲು ಅವಕಾಶ ನೀಡಲಿಲ್ಲ. ಅವರನ್ನು ತನಗೆ ಅಗತ್ಯ ಬಿದ್ದ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಬಳಸಿಕೊಂಡು ಅಗತ್ಯ ಇಲ್ಲದಾಗ ಕಸದ ಬುಟ್ಟಿಗೆ ಎಸೆಯಿತು ಎಂದು ನೇರಾನೇರವಾಗಿ ಬಿಂಬಿಸುವ ಯೋಚನೆ ಕಾಂಗ್ರೆಸ್ ತಲೆಯಲ್ಲಿದೆ. ಹೀಗಾಗಿ ಯಡಿಯೂರಪ್ಪ ಇಲ್ಲದ ಬಿಜೆಪಿಗೆ ವೀರಶೈವ ಲಿಂಗಾಯತರು (Veerashaiva Lingayat) ಮತ ಹಾಕದಂತೆ ಕಾಂಗ್ರೆಸ್​ ಚಾಣಾಕ್ಷ ತಂತ್ರ ಹೂಡಲಿದೆ.

ಬಿಜೆಪಿಯ ದೆಹಲಿ ಕೈಗಳು ಯಡಿಯೂರಪ್ಪ ಅವರಿಂದ ರಾಜೀನಾಮೆಯನ್ನು ಪಡೆದದ್ದೇ ಹೌದಾದಲ್ಲಿ ಕಾಂಗ್ರೆಸ್ ಅತ್ಯಂತ ಬಹಿರಂಗವಾಗಿಯೇ ವೀರಶೈವ ಲಿಂಗಾಯತ ಮತಬುಟ್ಟಿಗೆ ಕೈಹಾಕಲಿದೆ. ಕೆಲ ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಲಿಂಗಾಯತರು ಯಾರ ಸ್ವತ್ತೂ ಅಲ್ಲ’ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಬಹುಶಃ ಈಗ ನಡೆಯುತ್ತಿರುವ ಯಡಿಯೂರಪ್ಪ ರಾಜೀನಾಮೆ ಪ್ರಸಂಗದ ಸುಳಿವು ಕಾಂಗ್ರೆಸ್​ಗೆ ಮುಂಚಿತವಾಗಿಯೇ ದೊರೆತಿರಬೇಕು. ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹ ಲಿಂಗಾಯತ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್​ಗೆ ಕರೆತರುವುದಾಗಿ ಹೇಳಿದ್ದಾರೆ.

1989ರ ನಂತರ ಯಾವ ಲಿಂಗಾಯತ ನಾಯಕರೂ ಸಂಪೂರ್ಣ 5 ವರ್ಷ ಆಡಳಿತ ನಡೆಸಿಲ್ಲ. ಆದರೆ ಇತರ ಸಮುದಾಯದ ನಾಯಕರು ಈ ಸಾಧನೆ ಮಾಡಿದ್ದಾರೆ. ಕುರುಬ ಸಮುದಾಯದ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದ ಎಸ್. ಎಂ. ಕೃಷ್ಣ 5 ವರ್ಷಗಳ ಕಾಲ ಸಂಪೂರ್ಣ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆದರೆ ಇವರಿಗೆಲ್ಲ ದೊರೆತ ಅವಕಾಶ ಲಿಂಗಾಯತ ಸಮುದಾಯ ಯಡಿಯೂರಪ್ಪಗೆ ಏಕಿಲ್ಲ? ಈ ಪ್ರಶ್ನೆಯ ಬೆನ್ನಟ್ಟಿರುವ ಸಮುದಾಯ ಸ್ವಾಮೀಜಿಗಳಿಗೆ ಸಹಜವಾಗಿಯೇ ಬೇಸರವಾಗಿದೆ. ಹೀಗಾಗಿಯೇ ಅವರುಗಳೆಲ್ಲ ಯಡಿಯೂರಪ್ಪಗೆ ಪಕ್ಕಾಪಕ್ಕಾ ಬೆಂಬಲ ಘೋಷಿಸಿರುವುದು. ಮತ್ತು ಇದೇ ಪ್ರಶ್ನೆಯ ಬಾಣವನ್ನು ಕಾಂಗ್ರೆಸ್ ಹೂಡಲಿದೆ.

‘ನಿಮ್ಮ ಸಮುದಾಯದವರೇ ಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ  ಒಂದೇ ಒಂದು ಬಾರಿಯೂ ಅವರಿಗೆ ಅಧಿಕಾರವನ್ನು ಸಂಪೂರ್ಣವಾಗಿ ಅನುಭವಿಸಲು ನಿಮ್ಮ ಪ್ರೀತಿಯ ಪಕ್ಷ ಬಿಡುತ್ತಿಲ್ಲ’ ಎಂಬ ಕಾಂಗ್ರೆಸ್​ನ ಒಂದು ಮಾತು ಸಾಕು, ಅಪಾರ ಪ್ರಮಾಣದ ವೀರಶೈವ ಲಿಂಗಾಯತ ಮತಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು. ಕರ್ನಾಟಕದ ಇಷ್ಟು ಪ್ರಬಲ ಸಮುದಾಯವಾಗಿರುವ ನಿಮಗೆ ಬಿಜೆಪಿ ಹಸಿ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದರೆ ಲಿಂಗಾಯತ ಸಮುದಾಯಕ್ಕೂ ಹೌದೆನಿಸದಿರದು. ಏಕೆಂದರೆ ಕಾಂಗ್ರೆಸ್ ಇದ್ದಕ್ಕೆ ಕೊಡುವ ಕಾರಣಗಳೂ ಪ್ರಬಲವಾಗಿದೆ.

ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಅನಾಯಾಸವಾಗಿ ಪಡೆಯಲು ಇದಕ್ಕಿಂದ ಉತ್ತಮ ಅವಕಾಶ ಬೇರೊಂದಿಲ್ಲ ಎಂದೇ ಕಾಂಗ್ರೆಸ್​ ನಿರ್ಧರಿಸಿದಂತಿದೆ. ಇದಕ್ಕೆ ತಾಜಾ ತಾಜಾ ಉದಾಹರಣೆ ಇಂದು ಸಂಜೆಯಷ್ಟೇ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಸಿಎಂ ಯಡಿಯೂರಪ್ಪ ಬದಲಾವಣೆ ಕಾಂಗ್ರೆಸ್​ಗೆ ಪೂರಕ ಎಂಬ ಮಾತುಗಳೇ ಚರ್ಚೆಯಾಗಿವೆ. ಯಡಿಯೂರಪ್ಪ ಅವರ ರಾಜೀನಾಮೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ವ್ಯಾಪಿಸಲು ಕಾಂಗ್ರೆಸ್​ಗೆ ಪೂರಕವಾಗಲಿದೆ. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ನಡೆದ ಸಭೆಯಲ್ಲಿ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಮೈಸೂರು ಭಾಗದಲ್ಲಿ ಬಿಟ್ಟಿರುವ ಕಾಂಗ್ರೆಸ್​ನ ಆಳದ ಬೇರುಗಳನ್ನು ಒಳಗೊಳಗೇ ಉತ್ತರ ಕರ್ನಾಟಕಕ್ಕೆ ಹರಿಸುವ ಉಪಾಯ ಅವರದು.  ವಿರೋಧ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ತಾನು ಲಾಭ ಪಡೆಯುವ ಕಾಂಗ್ರೆಸ್​ನ ಯೋಚನೆ ರಾಜಕಾರಣದಲ್ಲಿ ಸಹಜ. ಅದಕ್ಕೆ ಬಿಜೆಪಿಯೊಳಗಿನ ವಿದ್ಯಮಾನಗಳೂ ಪ್ರತಿಸ್ಪಂದಿಸುತ್ತಿವೆ.

ಇದನ್ನೂ ಓದಿ: 

ಲಿಂಗಾಯತ ಸಮುದಾಯದ ನಾಯಕತ್ವ ತಮ್ಮ ಕುಟುಂಬದ ಆಚೆಗೆ ಹೋಗದಿರಲು ಹೈಕಮಾಂಡ್​ಗೆ ಷರತ್ತು ವಿಧಿಸಿದರೆ ಯಡಿಯೂರಪ್ಪ?

B.S.Yediyurappa: ಬಿಎಸ್​ವೈ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೂ ಹೊಸ ಪಕ್ಷ ಕಟ್ಟುವ ಯೋಚನೆ ಮಾಡಲ್ಲ-ಏಕೆ?

(CM BS Yediyurappa resignation development Lingayats are not anyones property Why did DK Shivakumar say this a few days ago)

Published On - 8:17 pm, Thu, 22 July 21

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ