CM B.S.Yediyurappa: ಯಡಿಯೂರಪ್ಪನವರೇ ಸಿಎಂ ಹುದ್ದೆಯಲ್ಲಿ ಮುಂದುವರಿಯಲಿ ಎಂದು ಬೂಕನಕೆರೆಯಲ್ಲಿ ಪೂಜೆ ಸಲ್ಲಿಸಿದ ಅಭಿಮಾನಿಗಳು
ರಾಜಕೀಯವ ವಲಯದಲ್ಲೂ ಸಹ ಕೆಲವರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಹೇಳುತ್ತಿದ್ದರೂ, ಅನೇಕರು ಮೌನ ವಹಿಸಿಬಿಟ್ಟಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂಬ ವಿಚಾರ ಹೊರಬಿದ್ದಾಗಿನಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಯಡಿಯೂರಪ್ಪನವರೇ ರಾಜ್ಯದ ನಾಯಕರಾಗಿ ಮುಂದುವರಿಯಬೇಕು ಎಂದು ದೇವರಿಗೆ ಪೂಜೆ ಮಾಡುವವರೂ ಹೆಚ್ಚುತ್ತಿದ್ದಾರೆ. ಹಾಗೇ ಮೈಸೂರಿನಲ್ಲೂ ಸಹ ಬಿ.ಎಸ್.ಯಡಿಯೂರಪ್ಪನವರ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯದ ಬೂಕನಕೆರೆ ಗ್ರಾಮದ ಗೋಗಲಮ್ಮನಿಗೆ ಇಂದು ಪೂಜೆ ಸಲ್ಲಿಸಿ, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಬೇಡಿಕೊಂಡರು.
ಇನ್ನು ರಾಜಕೀಯವ ವಲಯದಲ್ಲೂ ಸಹ ಕೆಲವರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಹೇಳುತ್ತಿದ್ದರೂ, ಅನೇಕರು ಮೌನ ವಹಿಸಿಬಿಟ್ಟಿದ್ದಾರೆ. ಯಾರನ್ನೇ ಕೇಳಿದರೂ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ನುಣುಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರನ್ನು ಯಾವ ಕಾರಣಕ್ಕೂ ಸಿಎಂ ಹುದ್ದೆಯಿಂದ ಕೆಳಗೆ ಇಳಿಸಬೇಡಿ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: Team India: ಇಂಗ್ಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ: ಇಬ್ಬರು ಆಟಗಾರರು ಔಟ್..!
Followers worshiped God In Mandya for B.S.Yediyurappa conitue as Chief Minister of Karnataka