ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ಮುಕ್ತಾಯ: 8 ಸಾವಿರ ಕೋಟಿ ವೆಚ್ಚದಲ್ಲಿ 2 ವರ್ಷದಲ್ಲಿ ಒಟ್ಟು 5 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ

ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮನೆ ನಿರ್ಮಾಣ, ನಗರ ಪ್ರದೇಶದಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ಮುಕ್ತಾಯ: 8 ಸಾವಿರ ಕೋಟಿ ವೆಚ್ಚದಲ್ಲಿ 2 ವರ್ಷದಲ್ಲಿ ಒಟ್ಟು 5 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ
ಬಿ ಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ನಿರ್ಧಾರದಂತೆ ನಡೆಯಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮನೆ ನಿರ್ಮಾಣ, ನಗರ ಪ್ರದೇಶದಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುಮಾರು 8 ಸಾವಿರ ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುತ್ತೇವೆ. ಪ್ರತಿಯೊಂದು ಗ್ರಾಮ ಪಂಚಾಯತ್ ಸಭೆ ಮೂಲಕ ಮನೆ ನಿರ್ಮಿಸುತ್ತೇವೆ. ನಗರ ಪ್ರದೇಶದಲ್ಲಿ ಆಸರೆ ಸಮಿತಿ ಮೂಲಕ ಮನೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 2 ವರ್ಷದಲ್ಲಿ ಒಟ್ಟು 5 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಕೃಷಿ ವಿವಿಗಳಲ್ಲಿ ಸೆಂಟರ್ ಫಾರ್ ಇನೊವೆಷನ್ ಸ್ಮಾರ್ಟ್ ಅಗ್ರಿಕಲ್ಚರಲ್ ಸಾಫ್ಟವೇರ್ ಎಕ್ಸಾಗಾನ್ ಮ್ಯಾನಿಫ್ಯಾಕ್ಚರಿಂದ ಕಂಪನಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯಡಿ ಪ್ರತಿ ಯುನಿವರ್ಸಿಟಿಗೆ 8ಕೋಟಿ ವೆಚ್ಚವಾಗಲಿದೆ. 7 ವಿಶ್ವ ವಿದ್ಯಾಲಯಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಗ್ಯಾನಿಕ್ ಫಾರ್ಮ್​ ಮಾಡಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. 5 ವರ್ಷಕ್ಕೆ 75 ಕೋಟಿ ವೆಚ್ಚ ಪ್ರತಿ ರೈತನಿಗೆ ಒಂದು ಹೆಕ್ಟೇರ್ ಗೆ 3000 ರೂ ನೀಡಲು ತೀರ್ಮಾನ ಕೈಗೊಳ್ಳಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ 8 ಲಕ್ಷಕ್ಕಿಂತ ಆದಾಯಕ್ಕಿಂತ ಕಡಿಮೆ ಆದಾಯ ಇರುವ ಎಲ್ಲ ಕುಟುಂಬಗಳು ಇದರ ವ್ಯಾಪ್ತಿಗೆ ಬರುತ್ತವೆ. ಕೇಂದ್ರದ ಸಿವಿಲ್ ಸರ್ವುಸ್ ಮತ್ತು ಶಿಕ್ಷಣಕ್ಕೆ ಅನ್ವಯವಾಗಲಿದೆ. ತಹಸೀಲ್ದಾರ್​ಗಳನ್ನು ಬೇರೆ ಇಲಾಖೆಯಿಂದ ತಹಸೀಲ್ದಾರಗಳಾಗಿರುವವರನ್ನು ನೇಮಿಸದಂತೆ ತೀರ್ಮಾನ ಕೈಗೊಳ್ಳಲಾಗಿದೆ. 43 ಜನ ತಹಸೀಲ್ದಾರ್ ಆಗಿರುವವರನ್ನು ವಾಪಸ್ ಮಾತೃ ಇಲಾಖೆಗೆ ಕಳಿಸಲು ತೀರ್ಮಾನಿಸಲಾಗಿದೆ.

ಸರ್ಕಾರಿ ನೌಕರರಿಗೆ ಕುಟುಂಬದವರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯವಾಗಲಿದೆ. ಹಣಕಾಸು ಇಲಾಖೆಯವರು ಆರ್ ಡಿ ಪಿಆರ್ ಮತ್ತು ಯುಡಿ ಡಿಪಾರ್ಟ್ ಮೆಂಟ್ ಆಡಿಟ್ ಮಾತ್ರ ಮಾಡಲು ತೀರ್ಮಾನಿಸಲಾಗಿದೆ. ಧರ್ಮಪುರಿ ಹಿರಿಯೂರು ತಾಲುಕಿನ ವೇದಾವತಿ ಕುಡಿಯುವ ನೀರಿನ ಯೋಜನೆಯಡಿ 7 ಕೆರೆ ತುಂಬಿಸಲು 90 ಕೋಟಿ ಒದಗಿಸಲಾಗಿದೆ.

ಸಚಿವ ಸಭೆಯ ನಂತರ ನಡೆದ ಮಾತನಾಡಿದ ಡಿಸಿಎಂ ಅಶ್ವತ್ಥ್‌ ನಾರಾಯಣ, ಸಂಪುಟ ಸಭೆ ಮುಂದಿದ್ದ ಎಲ್ಲದಕ್ಕೂ ಕ್ಲಿಯರ್ ನೀಡಲಾಗಿದೆ ಎಂದು ತಿಳಿಸಿದರು.ಸಿಎಂ ರಾಜೀನಾಮೆ ಬಗ್ಗೆ ಸಚಿವ ಸಭೆಯಲ್ಲಿ ಚರ್ಚೆ ಆಗಿಲ್ಲ. ಅಜೆಂಡಾ ಹೊರತುಪಡಿಸಿ ಬೇರೇನೂ ಚರ್ಚೆ ಆಗಿಲ್ಲ. ಸಿಎಂ ಏಕೆ ಆ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ರಾಜೀನಾಮೆ ಬಗ್ಗೆ ಸಿಎಂ ಅವರನ್ನೇ ಕೇಳುವುದು ಉತ್ತಮ ಎಂದು ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಸಂಪುಟ ಸಭೆಯಲ್ಲಿ ಮೌನವಾಗಿದ್ದ ಸಿಎಂ ನಡೆ ಬಗ್ಗೆ ಕುತೂಹಲ ಹುಟ್ಟುತ್ತಿದೆ. ರಾಜಕೀಯ ಅಭಿಪ್ರಾಯ ಹಂಚಿಕೊಳ್ಳುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಕೊನೆಯ ತನಕವೂ ಕಾದು ಕುಳಿತಿದ್ದ ಸಚಿವರಿಗೆ ನಿರಾಸೆಯಾಗಿದೆ. ಕೊನೇ ವಿಷಯ ಮುಗಿಯುತ್ತಿದ್ದಂತೆ ಸಚಿವ ಜಗದೀಶ್ ಶೆಟ್ಟರ್​ರನ್ನು ಕರೆದ ಸಿಎಂ ಯಡಿಯೂರಪ್ಪ,​ಮೊನ್ನೆ ಗುಜರಾತ್ ಗೆ ಹೋಗಿದ್ದ ಭೇಟಿ ಯಶಸ್ವಿಯಾಗಿ ಆಯ್ತಾ ಎಂದು ಕೇಳಿದರು.

ಇದನ್ನೂ ಓದಿ: 

(CM BS Yediyurappa cabinet meet end Cabinet decision to build 5 lakh houses in 2 years with 8 thousand crore rupees )

Click on your DTH Provider to Add TV9 Kannada