ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ, ಯಾರೂ ಮುಖ್ಯಮಂತ್ರಿಯಾಗುವ ಕನಸು ಕಾಣಬೇಡಿ; ಸಚಿವ ಆರ್ ಅಶೋಕ್

ಅಮಿತ್ ಶಾ ಬಂದಿದ್ದಾರೆ ಎಂದರೆ ಗೆಲುವು ನಮ್ಮದೆ. ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ. ಹೊರಟ್ಟಿ ಬಿಜೆಪಿ ಸೇರಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ, ಯಾರೂ ಮುಖ್ಯಮಂತ್ರಿಯಾಗುವ ಕನಸು ಕಾಣಬೇಡಿ; ಸಚಿವ ಆರ್ ಅಶೋಕ್
ಸಚಿವ ಆರ್.ಅಶೋಕ್ (ಸಂಗ್ರಹ ಚಿತ್ರ)
Edited By:

Updated on: May 03, 2022 | 11:57 AM

ಬೆಂಗಳೂರು: ಕರ್ನಾಟಕದಲ್ಲಿ ಸಿಎಂ (Karnataka CM) ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಾರೂ ಮುಖ್ಯಮಂತ್ರಿಯಾಗುವ ಕನಸು ಕಾಣಬೇಡಿ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಚಿವ ಆರ್. ಅಶೋಕ್ (R Ashok) ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಅಮಿತ್ ಶಾ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಮಿತ್ ಶಾ ಬಂದಿದ್ದಾರೆ ಎಂದರೆ ಗೆಲುವು ನಮ್ಮದೆ. ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ. ಹೊರಟ್ಟಿ ಬಿಜೆಪಿ ಸೇರಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಸಿಎಂ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಿಎಂ ಬೊಮ್ಮಾಯಿಗೆ ಕೇಂದ್ರದ ಸಂಪೂರ್ಣ ಸಹಕಾರ ಇದೆ. ಸಿಎಂ ಬದಲಾವಣೆ ಬಗ್ಗೆ ಯಾರೂ ಹಗಲುಗನಸು ಕಾಣಬೇಡಿ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸ್ತೇವೆ ಎಂದು ಹೇಳಿಕ ನೀಡಿದ ಅಶೋಕ್, ಸಿಎಂ ಬದಲಾವಣೆ ಎನ್ನುವವರಿಗೆ ಟಾಂಗ್ ಕೊಟ್ಟಿದ್ದಾರೆ.

ಇವತ್ತು ಬಸವ ಜಯಂತಿ ದಿನ ಬಸವರಾಜ ಹೊರಟ್ಟಿಯವರು ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ. 7 ಬಾರಿ ಎಂಎಲ್ಎ ಆಗಿ ಹಲವು ಹುದ್ದೆಗಳನ್ನ ನಿಭಾಯಿಸಿದ್ದಾರೆ. ಹೊರಟ್ಟಿ ಸರಳ ಸಜ್ಜನ ರಾಜಕಾರಣಿ ಇವರಿಂದ ಬಿಜೆಪಿಗೆ ಒಂದು ವರ್ಚಸ್ಸು ಬರುತ್ತದೆ. ಎಸ್ಎಂ ಕೃಷ್ಣಾರಂತವರು ಬಂದಿದ್ದಾರೆ. ಇವತ್ತು ಮತ್ತೊಬ್ಬ ಮುತ್ಸದ್ದಿ ಸೇರಿದ್ದಾರೆ. ಮುಂದಿನ ಚುನಾವಣೆಗೆ ಇದು ದಿಕ್ಸೂಚಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು ಅಂತಾ ಜನ ಪರ್ವ ಶುರುಮಾಡಿದ್ದಾರೆ. ಹೊರಟ್ಟಿಯವರು ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಬೊಮ್ಮಾಯಿಯವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಇದೊಂದು ಸಂದೇಶ ರಾಜ್ಯದ ಜನತೆಗೆ ಬಿಜೆಪಿ ದಿಕ್ಕನ್ನ ತೋರಿಸುತ್ತದೆ. ಅವರ ಸ್ಥಾನಮಾನದ ಬಗ್ಗೆ ಇನ್ನು ಚರ್ಚೆ ಇಲ್ಲ. ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಕಟೀಲು ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಬಿ.ಎಲ್​.ಸಂತೋಷ್​ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಅಂತ ಸಚಿವರು ಹೇಳಿದರು.

ಇದನ್ನೂ ಓದಿ

ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಹುಬ್ಬಳ್ಳಿ ವೈದ್ಯೆಗೆ 50 ಲಕ್ಷ ರೂ. ವಂಚನೆ!

Jodhpur Clash: ಈದ್ ವೇಳೆ ಜೋಧ್​ಪುರದಲ್ಲಿ 2 ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ; ಇಂಟರ್ನೆಟ್​ ಸೇವೆ ಸ್ಥಗಿತ

Published On - 11:42 am, Tue, 3 May 22