ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಹುಬ್ಬಳ್ಳಿ ವೈದ್ಯೆಗೆ 50 ಲಕ್ಷ ರೂ. ವಂಚನೆ!
ಮಚ್ಚಿನಿಂದ ಕೊಚ್ಚಿ ಬೈಕ್ ಸವಾರನನ್ನು ಕೊಲೆ ಮಾರಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಚಿಂತಾಮಣಿ ಬಂಡಗರ(26) ಬರ್ಬರ ಹತ್ಯೆಗೊಳಗಾದ ಯುವಕ.
ಹುಬ್ಬಳ್ಳಿ: ಹಣ (Money) ದುಪ್ಪಟ್ಟು ಮಾಡುವುದಾಗಿ ಹೇಳಿ ವೈದ್ಯೆಗೆ (Doctor) ಬರೋಬ್ಬರಿ 50 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕಂಪನಿ ಪ್ರಾಂಚೈಸಿ ಹೆಸರಲ್ಲಿ ಮಣಿಕಂಠನ್ ಕುಟ್ಟತ್ ಹೆಸರಿನ ವ್ಯಕ್ತಿ ಹುಬ್ಬಳ್ಳಿಯ ರುದ್ರಗಂಗಾ ಲೇಔಟ್ ವೈದ್ಯೆಗೆ ವಂಚನೆ ಮಾಡಿದ್ದಾನೆ. ಡಾ.ಶೈಲಾ ಪಾಟೀಲ್, ವಂಚನೆಗೊಳಗಾದ ವೈದ್ಯೆ. ಡಾ. ಶೈಲಾ ರಿಗೆ ನಿವೃತ್ತಿ ನಂತರ 38 ಲಕ್ಷ ಹಣ ಬಂದಿತ್ತು. ತಮ್ಮ ಕಂಪನಿಯಲ್ಲಿ 50 ಲಕ್ಷ ರೂ. ಹೂಡಿಕೆ ಮಾಡಿ ಅಂತ ಆರೋಪಿ ಹೇಳಿದ್ದನಂತೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಮಹಿಳೆಗೆ ಯಾಮಾರಿಸಿರುವ ಆರೋಪ ಕೇಳಿಬಂದಿದೆ. ಕಾಗದ ಪತ್ರಗಳು ನಕಲಿ ಎಂದು ತಿಳಿದಾಗ ಮೋಸ ಹೋಗಿದ್ದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣವನ್ನು ವೈದ್ಯೆ ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ: ಮಚ್ಚಿನಿಂದ ಕೊಚ್ಚಿ ಬೈಕ್ ಸವಾರನನ್ನು ಕೊಲೆ ಮಾರಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಚಿಂತಾಮಣಿ ಬಂಡಗರ(26) ಬರ್ಬರ ಹತ್ಯೆಗೊಳಗಾದ ಯುವಕ. ಹತ್ಯೆಯಾದ ಬಂಡಗರಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು. ಮೆಡಿಕಲ್ ಶಾಪ್ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳು ಅರೆಸ್ಟ್! ದಾವಣಗೆರೆ: ಮರಳು ವ್ಯಾಪಾರಗಾರರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 75 ಲಕ್ಷದ 70 ಸಾವಿರ ರೂಪಾಯಿ ಹಣ, 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮೈಸೂರು ಮೂಲದ ಇಮ್ರಾನ್ ಸಿದ್ದಿಕ್, ಚಿತ್ರ ದುರ್ಗದ ಅಶೋಕ ಅಲಿಯಾಸ್ ಜಿಮ್ಮಿ ಬಂಧಿತ ಆರೋಪಿಗಳು ದಾವಣಗೆರೆ ಮೂಲದ ಮರಳು ವ್ಯಾಪಾರಿ ಮುಬಾರಕ್ ರನ್ನ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಬಾರಕ್ ಪರ್ಮಿಟ್ ಪಡೆದು ಮರಳು ವ್ಯಾಪಾರ ಮಾಡುತಿದ್ದರು. ಈ ವೇಳೆ ನೀನು ಅಕ್ರಮ ಮರಳು ವ್ಯಾಪಾರ ಮಾಡುತಿದ್ದೀಯಾ ತಿಂಗಳಿಗೆ 4 ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿ ಆರೋಪಿಗಳು ಮುಬಾರಕ್ ಬಳಿ ಹಣ ವಸೂಲಿ ಮಾಡಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ಮುಬಾರಕ್ ದೂರು ನೀಡಿದ್ದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ
ಮೋದಿ ವಿದೇಶದಿಂದ ಹಿಂದಿರುಗಿದ ನಂತರ ಕರ್ನಾಟಕದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ: ಬಸನಗೌಡ ಯತ್ನಾಳ
ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು; ಕನ್ನಡದಲ್ಲೇ ಟ್ವೀಟ್ ಮಾಡಿ ಬಸವಣ್ಣನನ್ನು ಸ್ಮರಿಸಿದ ಪ್ರಧಾನಿ ಮೋದಿ