Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ-ಸಿಎಂ ಸಿದ್ದರಾಮಯ್ಯ

ಮುಸ್ಲಿಂ ಸಮುದಾಯದಿಂದ ಅಭಿವೃದ್ಧಿಗೆ ಹಣ ಬೇಡಿಕೆ ವಿಚಾರ ‘ಮೊದಲು 400 ಕೋಟಿ ಇತ್ತು, ನಂತರ ಅದನ್ನು ನಾನು 2 ಸಾವಿರ ಕೋಟಿಗೆ ಮಾಡಿದೆ. ಆವಾಗ ಕೂಡ ನನ್ನ ಯಾರು ಕೇಳಿರಲಿಲ್ಲ, ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡ್ತೀನಿ. ಮುಂದೆ ನನ್ನ ಅವಧಿ ಮುಗಿವ ಅಷ್ಟರಲ್ಲಿ 10 ಸಾವಿರ ಕೋಟಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ-ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
Malatesh Jaggin
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 30, 2023 | 2:40 PM

ಬೆಂಗಳೂರು, ಸೆ.30: ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಬೆಂಗಳೂರಿ(Bengaluru) ನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಎಂತಹ ರಾಜಕೀಯ ಪಕ್ಷದ ಶಕ್ತಿ ಇದ್ದರೂ ಕ್ರಮಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಹಿಂದೂ, ಮುಸ್ಲಿಂ ಅಥವಾ ಮೈನಾರಿಟಿ ಇರಬಹುದು. ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತದೆ ಎಂದರು.

ನಾವು ಕೊಟ್ಟ ಭಾಗ್ಯಗಳಲ್ಲಿ ಜಾತಿ ಧರ್ಮ ಇದೆಯಾ?

ಹೌದು, ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಇನ್ನು ಶಕ್ತಿ ಯೋಜನೆ ಸೇರಿದಂತೆ ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿಯಲ್ಲಿ ಯಾವ ಜಾತಿ, ಧರ್ಮ ಇದೆಯಾ? ಎಲ್ಲಾ ಧರ್ಮ, ಜಾತಿಯವರಿಗೂ ಅನುಕೂಲ ಆಗಲಿ ಎಂದು ಈ ಯೋಜನೆ ಜಾರಿಗೊಳಿಸಿದ್ದೇವೆ. ನಾವು ಜಾತ್ಯತೀತವಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು: ತಜ್ಞರು ಕೊಟ್ಟ ಸಲಹೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ, ಇಲ್ಲಿದೆ ವಿವರ

ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು

ಮುಸ್ಲಿಂ ಸಮುದಾಯದಿಂದ ಅಭಿವೃದ್ಧಿಗೆ ಹಣ ಬೇಡಿಕೆ ವಿಚಾರ ‘ಮೊದಲು 400 ಕೋಟಿ ಇತ್ತು, ನಂತರ ಅದನ್ನು ನಾನು 2 ಸಾವಿರ ಕೋಟಿಗೆ ಮಾಡಿದೆ. ಆವಾಗ ಕೂಡ ನನ್ನ ಯಾರು ಕೇಳಿರಲಿಲ್ಲ, ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡ್ತೀನಿ. ಮುಂದೆ ನನ್ನ ಅವಧಿ ಮುಗಿವ ಅಷ್ಟರಲ್ಲಿ 10 ಸಾವಿರ ಕೋಟಿ ಮಾಡುತ್ತೇನೆ, ಅದು ನನ್ನ ಕೆಲಸ. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಸಂಪತ್ತು ಪ್ರತಿಯೊಬ್ಬರಿಗೂ ಸಿಗಬೇಕು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ ಸಿಎಂ ತಿರುಗೇಟು

ಹೌದು, ಶಾಸಕ ಶಾಮನೂರು ಶಿವಶಂಕರಪ್ಪನವರು, ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ  ಆರೋಪಕ್ಕೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ‘ಲಿಂಗಾಯತ ಸಮುದಾಯದವರೇ  7 ಮಂದಿ ಸಚಿವರಿಲ್ವಾ?. ನನ್ನ ಬಳಿ ಅಂಕಿ-ಅಂಶಗಳಿವೆ. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ ಎನ್ನುವುದರ ಮೂಲಕ ಶಾಮನೂರು ಆರೋಪಕ್ಕೆ ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ