ಕೊಪ್ಪಳ, (ನವೆಂಬರ್ 21): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ವಿಚಾರ ಚರ್ಚೆಯಲ್ಲಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar)ನಡುವೆ ಒಳಗೊಳಗೆ ಮೇಲಾಟ ನಡೆಯುತ್ತಲೇ ಇದೆ. ನಿಗಮ ಮಂಡಳಿ ನೇಮಕಾತಿಗಾಗಿ ಇಂದು(ನವೆಂಬರ್ 21) ಸುರ್ಜೇವಾಲ, ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೂ ಮುನ್ನವೇ ಸಿದ್ದರಾಮಯ್ಯ ಕೊಪ್ಪಳದಲ್ಲಿ ನಿನ್ನೆ(ನವೆಂಬರ್ 20) ಆಪ್ತ ಸಚಿವರ ಜತೆಗೌಪ್ಯ ಮೀಟಿಂಗ್ ಮಾಡಿರುವುದು ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ವಿಜಯಪುರಕ್ಕೆ ಹೋಗಲು ಸಚಿವ ಎಂ.ಬಿ. ಪಾಟೀಲ್, ಕೆ.ಎನ್. ರಾಜಣ್ಣ ಜೊತೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬಸ್ಸಾಪುರ್ ಏರಸ್ಟ್ರಿಪ್‌ಗೆ ಆಗಮಿಸಿದ್ದರು. ನಂತರ ಕೊಪ್ಪಳದಿಂದ ವಿಜಯಪುರಕ್ಕೆ ಹೋಗಿ, ಅಲ್ಲಿ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮತ್ತೆ ಸಂಜೆ 5 ಗಂಟೆಗೆ ವಿಜಯಪುರದ ಕಾರ್ಯಕ್ರಮ ಮುಗಿಸಿಕೊಂಡು ಕೊಪ್ಪಳದ ಬಸ್ಸಾಪುರ ಏರಸ್ಟ್ರಿಪ್‌ಗೆ ವಾಪಸ್ ಆಗಿದ್ದು, ಈ ಸಮಯದಲ್ಲಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್, ಕೆ.ಎನ್.ರಾಜಣ್ಣ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಂಭೀರ ಚರ್ಚೆ ನಡೆಸಿದ್ದಾರೆ. ಅಲ್ಲದೇ ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪೋನ್ ಕರೆಯೊಂದು ಬಂದಿದ್ದು. ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ಕುರಿತು ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಎಂ.ಬಿ. ಪಾಟೀಲರನ್ನು ಪ್ರಶ್ನಿಸಿದಾಗ ಯಾವುದೇ ಸಭೆ, ಚರ್ಚೆ ಆಗಿಲ್ಲ. ಸುಮ್ಮನೆ ಕೂತಿದ್ದೆವು ಎಂದು ಉತ್ತರಿಸಿದರು.
ದೆಹಲಿಯಿಂದ ಕಾಲ್ ಬಂದಿತ್ತು ಎಂಬ ವಿಚಾರವೂ ತೇಲಿ ಬಂತು, ಈ ಬಗ್ಗೆ ಪಾಟೀಲರ ಬಳಿ ಪ್ರಶ್ನೆ ಎತ್ತಿದಾಗ, ನಿಮಗೇನಾದರೂ ಹೇಳಿದ್ರಾ? ಯಾವುದೇ ಕಾಲ್ ಇಲ್ಲ, ಏನಿಲ್ಲ ಎನ್ನುತ್ತ ತೆರಳಿದರು.
ಒಟ್ಟಿನಲ್ಲಿ ನಿಗಮ ಮಂಡಳಿ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ನಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಚಿವರೊಂದಿಗೆ ಗುಪ್ತ್ ಗುಪ್ತ್ ಮಾತುಕತೆ ನಡೆಸಿರುವುದು ಭಾರೀ ಚರ್ಚೆಗೆ ಜೊತೆ ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 am, Tue, 21 November 23