ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ರಾಮ ಜಪ ಮಾಡಿದ ಸಿಎಂ ಸಿದ್ದರಾಮಯ್ಯ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ಕೊಡಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ರಾಮ ಜಪ ಮಾಡಲು ಆರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟಿಸಿದ್ದ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಅಲ್ಲಿಂದ ಆರಂಭವಾದ ರಾಮ ಜಪ ಇದೀಗ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಮುಂದುವರಿದಿದೆ.

ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ರಾಮ ಜಪ ಮಾಡಿದ ಸಿಎಂ ಸಿದ್ದರಾಮಯ್ಯ
ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ರಾಮ ಜಪ ಮಾಡಿದ ಸಿಎಂ ಸಿದ್ದರಾಮಯ್ಯ
Follow us
Anil Kalkere
| Updated By: Rakesh Nayak Manchi

Updated on:Jan 30, 2024 | 12:52 PM

ಬೆಂಗಳೂರು, ಜ.30: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ಕೊಡಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ಜಪ ಮಾಡಲು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟಿಸಿದ್ದ ಸಿದ್ದರಾಮಯ್ಯ (Siddaramaiah) ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇಲ್ಲಿಂದ ಆರಂಭವಾದ ಸಿದ್ದರಾಮಯ್ಯ ಅವರ ಶ್ರೀರಾಮ (Sri Ram) ಜಪ ಇಂದು ನಡೆದ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಮುಂದುವರಿದಿದೆ.

ಗಾಂಧಿ ಪುಣ್ಯಸ್ಮರಣೆ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶ್ರೀರಾಮ ಚಂದ್ರರ ಆದರ್ಶವನ್ನು ಸ್ಮರಿಸಿದರು. ಮಹಾತ್ಮ ಗಾಂಧೀಜಿ ಸಾಯುವಾಗ ಹೇ ರಾಮ್ ಅಂತ ಉಚ್ಚಾರ ಮಾಡಿ ಪ್ರಾಣ ತ್ಯಾಗ ಮಾಡಿದ್ದರು. ಶ್ರೀ ರಾಮ‌ಚಂದ್ರನ ಬಗ್ಗೆ ಅಪಾರವಾದ ಭಕ್ತಿ, ನಂಬಿಕೆ ಇಟ್ಟಿದ್ದರು. ಅದಕ್ಕೆ ಅವರು ಯಾವತ್ತೂ ರಘು ಪತಿ ರಾಘವ ರಾಜಾ ರಾಂ ಪತೀತ ಪಾವನ ಸೀತಾ ರಾಂ ಅಂತಿದ್ದರು. ನಾವೂ ಅದನ್ನು ಪ್ರತಿ ಕಾರ್ಯಕ್ರಮಗಲ್ಲೂ ಹೇಳುತ್ತೇವೆ ಎಂದರು.

ಶ್ರೀರಾಮ ಚಂದ್ರ ದಶರಥರಾಜ ಹಾಗೂ ಕೌಶಲ್ಯ ದೇವಿಯ ಮಗ ಆಗಿದ್ದಾರೆ. ದಶರಥ ಮಹಾರಾಜರಿಗೆ ಮೂರು ಜನ ಹೆಂಡತಿಯರು. ಮೂವರ ಪೈಕಿ ಕೌಶಲ್ಯ ದೇವಿಯ ಮಗ ಶ್ರೀರಾಮಚಂದ್ರ. ಶ್ರೀರಾಮಚಂದ್ರ ಪಿತೃ ವಾಕ್ಯ ಪರಿಪಾಲನೆಗಾಗಿ ರಾಜ್ಯಭಸರ ತ್ಯಾಗ ಮಾಡಿ ಸಹೋದರ ಭರತನಿಗೆ ಪಟ್ಟ ಕಟ್ಟಿ ಕಾಡಿಗೆ ಹೋಗುತ್ತಾರೆ. ಪತ್ನಿ ಸೀತೆ, ಸಹೋದರ ಲಕ್ಷ್ಮಣ ಜೊತೆ ಕಾಡಿಗೆ ಹೋಗುತ್ತಾರೆ. 14 ವರ್ಷ ವನವಾಸ ಮಾಡುತ್ತಾರೆ ಎಂದರು.

ಇದನ್ನೂ ಓದಿ: ನಾನು ಸರ್ವಧರ್ಮಗಳ ಜನರನ್ನು ಪ್ರೀತಿಸುವ ಹಿಂದೂ, ಸೆಕ್ಯುಲರಿಸಂನಲ್ಲಿ ನಂಬಿಕೆ ಉಳ್ಳವನು: ಸಿದ್ದರಾಮಯ್ಯ

ಶ್ರೀರಾಮ ಅಂದರೆ ಸತ್ಯ ಪರಿಪಾಲನೆ ಮಾಡುವವರು. ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಾಮಾನವಾಗಿ ಕಾಣುತ್ತಿದ್ದರು. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾವು ದೇಶ, ಕರ್ನಾಟಕ ರಾಮ ರಾಜ್ಯ ಆಗಬೇಕು ಅಂತೇವೆ. ಅಷ್ಟರಮಟ್ಟಿಗೆ ಆದರ್ಶ ರಾಜ್ಯವನ್ನು ಶ್ರೀರಾಮಚಂದ್ರ ಕೊಡುತ್ತಿದ್ದರು ಎಂದರು.

ಅಂತ ವ್ಯಕ್ತಿಯ ಆದರ್ಶವನ್ನು ಪ್ರತಿಪಾದಿಸುತ್ತಿದ್ದ ಗಾಂಧಿಯನ್ನು ಒಬ್ಬ ಮತಾಂಧ ಕೊಂದು ಹಾಕುತ್ತಾನೆ. ನಾನು ರಾಜಕೀಯ ಮಾತನಾಡಲ್ಲ, ಅದರ ಅಗತ್ಯ ಇಲ್ಲ. ಗಾಂಧಿ ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನೂ ಮನುಷ್ಯರಾಗಿ ಕಾಣುತ್ತಿದ್ದರು. ಮನುಷ್ಯ ಮನುಷ್ಯ ನಡುವೆ ಪ್ರೀತಿ ಇರಬೇಕೇ ಹೊರತು ದ್ವೇಷ ಇರಬಾರದು ಎಂದರು.

ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.

ಜೈ ಶ್ರೀರಾಮ್ ಅಂತ ನಾವೂ ಹೇಳೋಲ್ವಾ? ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ, ನಾನೂ ಹೇಳುತ್ತೇನೆ. ಕೆಲವರು ಜೈ ಶ್ರೀರಾಮ್ ಸ್ಲೋಗನ್ ತಮ್ಮ‌ ಸ್ವತ್ತು ಅಂದುಕೊಂಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಹೇಳಿ ಎಂದಿದ್ದರು. ಬಳಿಕ ಮೈಸೂರು ಪ್ರವಾಸದಲ್ಲಿರುವ ವೇಳೆಯಲ್ಲೂ ರಾಮ ಜಪ ಮಾಡಿದ್ದರು. ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್​ ಬಿಜೆಪಿ ಆಸ್ತಿಯಲ್ಲ ಎಂದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಹೇಳಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Tue, 30 January 24

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ