ಕಾಂಗ್ರೆಸ್ ಕ್ರೌಡ್ ಫಂಡ್ಗೆ ಕರ್ನಾಟಕದ ಕೊಡುಗೆ ಅತಿ ಕಡಿಮೆ! ಎಷ್ಟು ಗೊತ್ತೇ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿರುವುದರಿಂದ ಪಕ್ಷದ ಹೈಕಮಾಂಡ್ ಆರಂಭಿಸಿರುವ ಕ್ರೌಡ್ ಫಂಡಿಂಗ್ಗೆ ಇಲ್ಲಿಂದ ಉತ್ತಮ ಸ್ಪಂದನೆ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆಗಿದ್ದೇನು? ಕರ್ನಾಟಕದಿಂದ ಎಷ್ಟು ಮಂದಿ 1 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಜನವರಿ 24: ದೇಣಿಗೆ ಸಂಗ್ರಹಕ್ಕಾಗಿ ಕಾಂಗ್ರೆಸ್ (Congress) ಪಕ್ಷವು ಆರಂಭಿಸಿದ್ದ ಕ್ರೌಡ್ ಫಂಡಿಂಗ್ (Crowdfunding) ಇನ್ನೂ ವೇಗವನ್ನು ಪಡೆದುಕೊಂಡಿಲ್ಲ. ಈವರೆಗೆ ಸುಮಾರು ಮೂರು ಲಕ್ಷ ದಾನಿಗಳಿಂದ ಪಕ್ಷವು ಕೇವಲ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದು ಪಕ್ಷದ ಹೈಕಮಾಂಡ್ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿರುವುದರಿಂದ ಸಹಜವಾಗಿಯೇ ರಾಜ್ಯದಿಂದ ಕಾಂಗ್ರೆಸ್ಗೆ ಕ್ರೌಡ್ ಫಂಡ್ಗೆ ಹೆಚ್ಚು ಮೊತ್ತ ಜಮೆಯಾಗಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇತ್ತು. ಆದರೆ, ಕರ್ನಾಟಕದಿಂದ ಅತಿ ಕಡಿಮೆ ಮಂದಿ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ದೇಣಿಗೆ ನೀಡಿದವರ ಪಟ್ಟಿಯನ್ನು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ರಾಜಸ್ಥಾನ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ, ಕರ್ನಾಟಕ 11ನೇ ಸ್ಥಾನದಲ್ಲಿದೆ.
ರಾಜಸ್ಥಾನದಲ್ಲಿ 181 ಮಂದಿ ದಾನಿಗಳು 1 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಹರಿಯಾಣದಲ್ಲಿ 73 ಮಂದಿ ದಾನಿಗಳು 1 ಲಕ್ಷ ರೂಪಾಯಿಗೂ ಹೆಚ್ಚು ನೀಡಿದ್ದಾರೆ. ಕರ್ನಾಟಕದಲ್ಲಿ ಕೇವಲ 11 ಮಂದಿ ಮಾತ್ರ 1 ಲಕ್ಷ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.
“Donate For Desh”https://t.co/kdXpsYx6II एक नया अनुभव कई नए प्रयोग!
इस अभियान के तहत, हम 16 करोड़ रुपए पार कर चुके हैं।
इस अभियान में अभी तक, लगभग ३ लाख लोगों ने हिस्सा लिया है।
पहली बार शुरू ऐसे अभियान ने हमें नई बातें भी सिखाई हैं। हमने कई नए experiment भी करे हैं, ताकि… pic.twitter.com/lU8dI46wL9
— Ajay Maken (@ajaymaken) January 23, 2024
ಇದನ್ನೂ ಓದಿ: Lok Sabha Election: ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು 40 ಸಾವಿರ ಕಾರ್ಯಕರ್ತರನ್ನು ನಿಯೋಜಿಸಲಿದೆ ಬಿಜೆಪಿ
‘ಹೊಸ ಅನುಭವ, ಹಲವು ಹೊಸ ಪ್ರಯೋಗಗಳು! ಈ ಅಭಿಯಾನದಡಿ ನಾವು 16 ಕೋಟಿ ರೂ. ಸಂಗ್ರಹ ದಾಟಿದ್ದೇವೆ. ಇದುವರೆಗೆ ಸುಮಾರು 3 ಲಕ್ಷ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಬಾರಿಗೆ ಆರಂಭವಾದ ಇಂತಹ ಅಭಿಯಾನ ನಮಗೆ ಹೊಸ ವಿಷಯಗಳನ್ನು ಕಲಿಸಿದೆ. ನಾವೂ ಕೂಡ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ಇದರಿಂದ ರಾಜಕೀಯವನ್ನು ಸ್ವಚ್ಛವಾಗಿ ಮಾಡಬಹುದು. ಅಂತಹ ಹೊಸ ಯಶಸ್ವಿ ಪ್ರಯೋಗವನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ಜನವರಿ 12 ರಂದು ಸಚಿನ್ ಪೈಲಟ್ ಅವರು 138 ಕಾಂಗ್ರೆಸ್ ನಾಯಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದರು ಮತ್ತು ಈ ಅಭಿಯಾನಕ್ಕೆ 1 ಲಕ್ಷದ 38 ಸಾವಿರ ರೂಪಾಯಿಗಳ ಮೊತ್ತವನ್ನು ದೇಣಿಗೆ ನೀಡಲು ಅವರೆಲ್ಲರಿಗೂ ಸ್ಫೂರ್ತಿ ನೀಡಿದರು. ಆದ್ದರಿಂದ, 1 ಲಕ್ಷಕ್ಕಿಂತ ಹೆಚ್ಚಿನ ದಾನಿಗಳಲ್ಲಿ ಮತ್ತು ಒಟ್ಟು ಮೊತ್ತದಲ್ಲಿ ರಾಜಸ್ಥಾನ ಉನ್ನತ ಸ್ಥಾನ ತಲುಪಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




