ಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ

4 ವರ್ಷದ ಗುತ್ತಿಗೆ ನಂತರ ನಿವೃತ್ತಿಹೊಂದುವ ಸಾವಿರದಷ್ಟು ಅಗ್ನಿವೀರರ ಭವಿಷ್ಯವೇನು? ಪ್ರಧಾನಿ ಮೋದಿಯವರ ಪ್ರಯೋಗಾಲಯದಲ್ಲಿನ ಪರೀಕ್ಷೆಗಳಿಂದಾಗಿ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ...

ಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
TV9kannada Web Team

| Edited By: Rashmi Kallakatta

Jul 24, 2022 | 2:57 PM

ದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ (Agnipath scheme) ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರನ್ನು(PM Narendra Modi) ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಿಯವರ ಪ್ರಯೋಗಾಲಯದಲ್ಲಿನ ನೂತನ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವ ಜನಾಂಗದ ಭವಿಷ್ಯ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಪ್ರತಿವರ್ಷ 60,000 ಯೋಧರು ನಿವೃತ್ತರಾಗುತ್ತಾರೆ. ಇವರ ಪೈಕಿ ಕೇವಲ 3,000 ಯೋಧರಿಗೆ ಸರ್ಕಾರಿ ಕೆಲಸ ಸಿಗುತ್ತದೆ. 4 ವರ್ಷದ ಗುತ್ತಿಗೆ ನಂತರ ನಿವೃತ್ತಿಹೊಂದುವ ಸಾವಿರದಷ್ಟು ಅಗ್ನಿವೀರರ ಭವಿಷ್ಯವೇನು? ಪ್ರಧಾನಿ ಮೋದಿಯವರ ಪ್ರಯೋಗಾಲಯದಲ್ಲಿನ ಪರೀಕ್ಷೆಗಳಿಂದಾಗಿ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ಅಗ್ನಿಪಥ್ ಯೋಜನೆಯಡಿಯಲ್ಲಿ ಹದಿನೇಳೂವರೆ ಮತ್ತು 21 ವರ್ಷಗಳ ನಡುವಿನ ಯುವಕನ್ನು ನಾಲ್ಕು ವರ್ಷಗಳ ಗುತ್ತಿಗೆ ಆಧಾರದಲ್ಲಿ ಸೇನೆಗೆ ನಿಯೋಜನೆ ಮಾಡಲಾಗುತ್ತದೆ. ಈ ಪೈಕಿ ಶೇ 25 ಮಂದಿಯನ್ನು ಆಮೇಲೆ ಸೇನೆಗೆ ನಿಯೋಜನೆ ಮಾಡಲಾಗುತ್ತದೆ.

ಜೂನ್ 14ರಂದು ಈ ಯೋಜನೆಯನ್ನು ಸರ್ಕಾರ ಘೋಷಿಸಿದ್ದು, ಪ್ರಸ್ತುತ ಯೋಜನೆ ಖಂಡಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಆನಂತರ ಜೂನ್ 16ರಂದು ಸರ್ಕಾರ ಅಗ್ನವೀರರ ಗರಿಷ್ಠ ವಯೋಮಿತಿ 21ರಿಂದ 23ಕ್ಕೆ ಏರಿಸಿತು.

ಕಾಂಗ್ರೆಸ್ ಅಗ್ನಿಪಥ್ ಯೋಜನೆ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಲೇ ಬಂದಿದೆ, ಶುಕ್ರವಾರ ವಿಪಕ್ಷ ಸದಸ್ಯರಾದ ವಿಕೆ ವೇಣುಗೋಪಾಲ್ ಮತ್ತು ಉತ್ತಮ್ ಕುಮಾರ್ ರೆಡ್ಡಿ ಶುಕ್ರವಾರ ನಡೆದ ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿ ಸಭೆಯಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ಚರ್ಚೆ ನಡೆಯದೇ ಇರುವುದನ್ನು ವಿರೋಧಿಸಿ ಸಭೆ ಬಹಿಷ್ಕರಿಸಿದ್ದಾರೆ.

ಕಾಂಗ್ರೆಸ್ ಸದಸ್ಯರು ಮತ್ತು ಬಿಎಸ್ ಪಿ ಸದಸ್ಯರು ಸಮಿತಿ ಅಧ್ಯಕ್ಷ ಜಾವುಲ್ ಓರಂ ಅವರಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ಚರ್ಚಿಸುವಂತೆ ಹೇಳಿದ್ದರೂ ಅವರು ಒಪ್ಪಲಿಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada