ಯಾರಿಂದಲೂ ಛೀ… ಥೂ… ಎನಿಸಿಕೊಂಡು ಅಧಿಕಾರ ಮಾಡಲಿಲ್ಲ: ಎದೆ ತಟ್ಟಿಕೊಂಡು ಹೇಳಿದ ಸಿದ್ದು
5 ವರ್ಷ ಯಾರಿಂದಲೂ ಛೀ... ಥೂ... ಎನಿಸಿಕೊಂಡು ಅಧಿಕಾರ ಮಾಡಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎದೆ ತಟ್ಟಿಕೊಂಡು ಹೇಳಿದ್ದಾರೆ.
ಮಂಡ್ಯ: ನೀವು ಆಶೀರ್ವಾದ ಮಾಡಿದ್ದರಿಂದಲೇ 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ… ಥೂ… ಎನಿಸಿಕೊಂಡು ಅಧಿಕಾರ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddarmaiah) ಹೇಳಿದ್ದಾರೆ.
ಮಂಡ್ಯ(Mandya) ತಾಲೂಕಿನ ತಿರುಮಲಾಪುರದಲ್ಲಿ ಇಂದು(ಅ.29) ಹುಲಿಯೂರಮ್ಮ ದೇಗುಲ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನಾವು ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದನ್ನೂ ಮೀರಿ 30ಕ್ಕೂ ಹೆಚ್ಚು ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಎಲ್ಲಾ ಜಾತಿಯ ಬಡವರಿಗೂ ಯೋಜನೆಗಳನ್ನು ಜಾರಿ ಮಾಡಿದ್ದೆ. ಕೆಲ ಜಾತಿಗಳಿಗೆ ಸೀಮಿತವಾಗಿ ಅಧಿಕಾರ ಮಾಡಲಿಲ್ಲ.ಆದರೆ ಈಗ ಬಿಜೆಪಿಯವರು ಎಲ್ಲವನ್ನೂ ಹಾಳು ಮಾಡುತ್ತಿದ್ದಾರೆ.ಇಂತವರು ಮತ್ತೆ ಅಧಿಕಾರಕ್ಕೆ ಬರಬೇಕೆ? ಎಂದು ಕಿಡಿಕಾರಿದರು.
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಣ ಬಡಿದಾಟ: ದಿಲ್ಲಿಯಲ್ಲಿ ರಾಜೀ ಸಂಧಾನ, 50:50 ಫಾರ್ಮುಲಾ
ರಾಜ್ಯದಲ್ಲಿ 2 ವರ್ಷದಿಂದ ಮಕ್ಕಳಿಗೆ ಸ್ಕಾಲರ್ಶಿಪ್ ಕೊಟ್ಟಿಲ್ಲ. ವಿದ್ಯಾಸಿರಿ ಯೋಜನೆಯ್ನೂ ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಆದರೂ SC, STಗಳ ಬಗ್ಗೆ ಮಾತನಾಡಲಿಕ್ಕೆ ಇವರಿಗೆ ಯಾವ ನೈತಿಕತೆ ಇದೆ. ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದಿರೋದು ಹಿಂಬಾಗಿಲಿನಿಂದ. ಮುಂಬಾಗಿಲಿನಿಂದ ಓಡಿಸೋಣ ಎಂದು ಕರೆ ಕೊಟ್ಟರು.
ನಾವು ಅಧಿಕಾರಕ್ಕೆ ಬಂದರೆ ಜನಪರವಾದ ಕೆಲಸ ಮಾಡುತ್ತೇವೆ. ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಮೈಶುಗರ್ ಕಾರ್ಖಾನೆ ಓಪನ್ ಮಾಡುತ್ತೇವ. ಜನರಿಗೆ ಉಪಯೋಗ ಆಗೋ ಯೋಜನೆ ತರುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
Published On - 3:33 pm, Fri, 28 October 22