ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ H.D.ದೇವೇಗೌಡ ಪುನರಾಯ್ಕೆ, ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ನಿರ್ಧಾರ
ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಅವರು ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಬೆಂಗಳೂರು: ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ (HD Devegowda) ಪುನರಾಯ್ಕೆಯಾಗಿದ್ದಾರೆ. ಇಂದು(ಅಕ್ಟೋಬರ್ 27) ಬೆಂಗಳೂರಿನಲ್ಲಿ ನಡೆದ ಜೆಡಿಎಸ್ (JDS) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದ್ದು, ಕೆಲವೇ ಹೊತ್ತಿನಲ್ಲಿ ದೇವೇಗೌಡರ ಹೆಸರು ಅಧಿಕೃತ ಘೋಷಣೆಯಾಗಲಿದೆ.
ಬರೋಬ್ಬರಿ ಮೂರುವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಕಾಲಿಟ್ಟ ಜಿಟಿ ದೇವೇಗೌಡ
ಕೇರಳದ ಮಾಜಿ ಸಚಿವರು, ಹಾಲಿ ಶಾಸಕರು ಸೇರಿ ವಿವಿಧ 13 ರಾಜ್ಯಗಳ ಪ್ರತಿನಿಧಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದು, ದೇವೇಗೌಡ್ರೆ ಆಗಬೇಕು ಎಂದು ಎಲ್ಲ ರಾಜ್ಯ ಪ್ರತಿನಿಧಿಗಳ ಒಮ್ಮತ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ದೇವೇಗೌಡರನ್ನು ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲು ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ.
ದೇವೇಗೌಡ್ರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದ್ರೆ, ಮತ್ತೊಂದು ಅವಧಿಗೆ ಹೆಚ್ ಡಿ ದೇವೆಗೌಡ ಅವರನ್ನೇ ಮುಂದುವರಿಸಲು ಜೆಡಿಎಸ್ ಕಾರ್ಯಕರಣಿ ಸಭೆ ನಿರ್ಧರಿಸಿದೆ.