ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ: ಕಾಂಗ್ರೆಸ್​ ಶಾಸಕ ರಾಜು ಕಾಗೆ

| Updated By: ವಿವೇಕ ಬಿರಾದಾರ

Updated on: May 01, 2024 | 10:59 AM

ಕಾಂಗ್ರೆಸ್​ನ ಹಿರಿಯ ಮುಖಂಡ, ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳವಾರ ಬೆಳಗಾವಿ ಜಿಲ್ಲೆಯ ಮಮದಾಪುಊರ ಗ್ರಮಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ? ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಬೆಳಗಾವಿ, ಮೇ 10: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್​ (Congress) ಶಾಸಕ ರಾಜು ಕಾಗೆ (Raju Kage) ವಿವಾದ ಹುಟ್ಟು ಹಾಕಿದ್ದಾರೆ. ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ? ಎಂದು ಹೇಳಿದ್ದಾರೆ. ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಂಗಳವಾರ (ಏ.30) ರಂದು ನಡೆದಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತೀರಿಕೊಂಡರೆ ಪ್ರಧಾನಿ ಅಭ್ಯರ್ಥಿ ಇಲ್ಲವೇ? 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೇ? ಎಂದು ಹೇಳಿದರು.

ಈಗಿನ ಯುವಕರು ಮೋದಿ ಮೋದಿ ಎಂದು ಹೇಳುತ್ತಾರೆ. ನೀವೇನು ಪ್ರಧಾನಿ ಮೋದಿಯವರನ್ನು ತೆಗೆದುಕೊಂಡು ನೆಕ್ಕುತ್ತೀರಾ? ಇಲ್ಲಿ ಯಾವುದೇ ಸಮಸ್ಯೆ ಆದರೂ ಪ್ರಧಾನಿ ಮೋದಿ ಬರಲ್ಲ, ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿಗೆ 3 ಸಾವಿರ ಕೋಟಿ ರೂ. ವಿಮಾನ ಇದೆ. ನರೇಂದ್ರ ಮೋದಿ 4 ಲಕ್ಷ ರೂ. ಸೂಟ್ ಹಾಕಿಕೊಳ್ಳುತ್ತಾರೆ ಎಂದರು.

ರಾಜು ಕಾಗೆ

ಇದನ್ನೂ ಓದಿ: ಮೋದಿ ಗೆಲ್ಲಿಸುವಂತೆ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ: ವರನ ವಿರುದ್ಧ ದೂರು ದಾಖಲು

ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುವುದಿಲ್ಲ: ಜಾಧವ್​

ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಉಮೇಶ್​ ಜಾಧವ್, ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುವುದಿಲ್ಲ. ನಮ್ಮಲ್ಲಿ ಬಹಳ ಜನ ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಸಮಯ ಬಂದಾಗ ವರಿಷ್ಠರು ನಿರ್ಧಾರ ತೆಗೆದುಕೊಳ್ಳತ್ತಾರೆ. ಅವರಲ್ಲಿ ಪ್ರಧಾನಿ ಅಭ್ಯರ್ಥಿ ಇದ್ದಾರಲ್ವಾ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Wed, 1 May 24