AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್​ ವೀರಾವೇಶದ ಹೋರಾಟ: ಇಂದು ಬೃಹತ್ ಜಾಥಾ

ಸರ್ಕಾರಗಳನ್ನು ಕೆಡವುವ, ಶಾಸಕರನ್ನು ಖರೀದಿಸುವ ಕೆಲಸ ಮಾಡುತ್ತಿರುವ ಬಿಜೆಪಿ ಜನರ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್​ ವೀರಾವೇಶದ ಹೋರಾಟ: ಇಂದು ಬೃಹತ್ ಜಾಥಾ
ದೆಹಲಿಯಲ್ಲಿ ಕಾಂಗ್ರೆಸ್​ ಪಕ್ಷವು ಬೃಹತ್ ಸಮಾವೇಶ ಆಯೋಜಿಸಿದೆ
TV9 Web
| Edited By: |

Updated on: Sep 04, 2022 | 11:32 AM

Share

ದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ‘ಮೆಹಂಗಾಯ್ ಪರ್ ಹಲ್ಲಾ ಬೋಲ್ ರ್‍ಯಾಲಿ’ಯನ್ನು (ಬೆಲೆಏರಿಕೆ ವಿರುದ್ಧ ಯುದ್ಧ) ಭಾನುವಾರ ಆಯೋಜಿಸಿದೆ. ದೆಹಲಿಯ ರಾಮಲೀಲ ಮೈದಾನದಲ್ಲಿ ಬೃಹತ್ ಸಮಾವೇಶವೂ ನಡೆಯಲಿದೆ.

ಕಾಂಗ್ರೆಸ್ ಪಕ್ಷದ ಹಲವು ಪ್ರಧಾನ ಕಾರ್ಯದರ್ಶಿಗಳು, ಉನ್ನತ ನಾಯಕರು, ವಿವಿಧ ರಾಜ್ಯಗಳ ಉಸ್ತುವಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಐಸಿಸಿ ಪ್ರಧಾನ ಕಚೇರಿಯಿಂದ ರಾಮಲೀಲ ಮೈದಾನಕ್ಕೆ ಬಸ್​ಗಳಲ್ಲಿ ತೆರಳಲಿದ್ದಾರೆ. ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಭಾಷಣ ಮಾಡುವ ಸಾಧ್ಯತೆಯಿದೆ.

ರಾಮಲೀಲ ಮೈದಾನದಲ್ಲಿ ಕಾಂಗ್ರೆಸ್ ರ್‍ಯಾಲಿ ಹಿನ್ನೆಲೆಯಲ್ಲಿ ಪಕ್ಷ ಬಿಗಿ ಭದ್ರತೆ ಒದಗಿಸಲಾಗಿದೆ. ವಿವಿಧ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಕುರಿತು ದೆಹಲಿ ಪೊಲೀಸರು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಪ್ಯಾರಾ ಮಿಲಿಟರಿ ದಳಗಳನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್​ಗಳನ್ನು ಅಳವಡಿಸಲಾಗಿದೆ.

ಬೆಲೆಏರಿಕೆ ವಿರುದ್ಧ ಯುದ್ಧ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಹಣದುಬ್ಬರ ಮತ್ತು ಬೆಲೆಏರಿಕೆ ವಿರುದ್ಧ ಪಕ್ಷವು ನಿರಂತರ ಹೋರಾಟ ನಡೆಸಲಿದೆ. ಸೆಪ್ಟೆಂಬರ್ 7ರಿಂದ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರಾ ಆರಂಭಿಸಲಿದ್ದು, ಪಕ್ಷದ ಹಲವು ಸಂಸದರು ಮತ್ತು ಸ್ಥಳೀಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಯು ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಕೆಡವುವ, ಶಾಸಕರನ್ನು ಖರೀದಿಸುವ ಕೆಲಸ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಆಗಸ್ಟ್ 5ರಂದು ಕಾಂಗ್ರೆಸ್ ಕಾರ್ಯಕರ್ತರು ಬೆಲೆಏರಿಕೆ, ನಿರುದ್ಯೋಗ, ಜಿಎಸ್​ಟಿ ಹೆಚ್ಚಳ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಪ್ಪು ಉಡುಪು ತೊಟ್ಟು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ