ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್​ಗೆ ಇದೆ- ಸದಾನಂದ ಗೌಡ

ಸಿದ್ದರಾಮಯ್ಯ ಎದುರು ಸಮಬಲದಲ್ಲಿ ಕುಸ್ತಿ ಆಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಅಶೋಕ್​ಗೆ(Ashoka) ಇದೆ ಎಂದು ಸಂಸದ ಡಿ.ವಿ ಸದಾನಂದ ಗೌಡ(DV Sadananda Gowda)  ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಬೆಂಗಳೂರಿನ ಹುಲಿ ಅಶೋಕ್​ ಎಂದು ಹೊಗಳಿದ್ದಾರೆ.

ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್​ಗೆ ಇದೆ- ಸದಾನಂದ ಗೌಡ
ಡಿವಿ ಸದಾನಂದ ಗೌಡ
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 02, 2024 | 8:27 PM

ಬೆಂಗಳೂರು, ಜ.02: ‘ಸಿದ್ದರಾಮಯ್ಯ ಎದುರು ಸಮಬಲದಲ್ಲಿ ಕುಸ್ತಿ ಆಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಅಶೋಕ್​ಗೆ(Ashoka) ಇದೆ ಎಂದು ಸಂಸದ ಡಿ.ವಿ ಸದಾನಂದ ಗೌಡ(DV Sadananda Gowda)  ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಬೆಂಗಳೂರಿನ ಹುಲಿ ಅಶೋಕ್​ ಎಂದು ಹೊಗಳಿದ್ದು, ಆತ ಆರ್ಥಿಕವಾಗಿ ನಮ್ಮನ್ನೆಲ್ಲಾ‌ ನೋಡಿಕೊಳ್ಳಬೇಕು ಎಂದು  ಹಾಸ್ಯ ಮಾಡಿದರು. ಇನ್ನು ವಿಧಾನಸಭೆ ಸೋಲು ನಮಗೆಲ್ಲಾ‌ ಅಚ್ಚರಿ ಹುಟ್ಟಿಸಿದೆ. ನಮ್ಮ ಕಾರ್ಯಕರ್ತರಿಗೆ ಈ ಸೋಲು ಯಾಕಾಯ್ತು ಎಂದು ಇನ್ನೂ ಅರ್ಥ ಆಗಿಲ್ಲ ಎಂದರು.

ಇನ್ನು ಇದೇ ವೇಳೆ ‘ವಿಜಯೇಂದ್ರ ಇವತ್ತು ಹೊಸ ವರ್ಷದ ಶುಭಾಶಯ ಕೋರಲು ನಮ್ಮ‌‌ ಮನೆಗೆ ಬಂದಿದ್ದರು, ಬಳಿಕ ಒಂದು ಮಾತು ಹೇಳಿದ ಅವರು ‘
ಈ ಮಧ್ಯೆ ಸ್ವಲ್ಪ ವ್ಯತ್ಯಾಸಗಳಾಗಿ ಸಂಬಂಧಗಳ‌ ಮೇಲೆ ಪರಿಣಾಮ ಆದವು, ಇನ್ನು ಮುಂದೆ ಹೀಗಾಗದಂತೆ‌ ನೋಡಿ ಕೊಳ್ಳುತ್ತೇನೆ ಎಂದು ವಿಜಯೇಂದ್ರ ಹೇಳಿದರು. ಇದು ಒಬ್ಬ ಯಶಸ್ವಿ ನಾಯಕನಿಗೆ ಇರಬೇಕಾದ ಲಕ್ಷಣ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಕನ್ನಡಿಗರ ತಲೆಮೇಲೆ ಕಲ್ಲು ಹಾಕ್ತಿದೆ ಎಂದ ಅಶೋಕ್‌, ಅಂಕಿ-ಅಂಶ ಮೂಲಕ ಸಿದ್ದು ಗುದ್ದು

ವಿಜಯೇಂದ್ರ ಅವರೇ ನಮ್ಮ ಬೆಂಗಳೂರು ಉತ್ತರ ಜಿಲ್ಲೆಯತ್ತ ಸ್ವಲ್ಪ ನೋಡಿಕೊಳ್ಳಿ, ಪಕ್ಷ‌ ಸಂಘಟನೆಗೆ ಸಮರ್ಥ ತಂಡ ನಮ್ಮ ಬೆಂಗಳೂರು ಉತ್ತರ ಜಿಲ್ಲೆಯಲ್ಲಿದೆ. ವಿಜಯೇಂದ್ರ‌ ಮತ್ತು ಅಶೋಕ್​ಗೆ ನಾನು ಜೋಡೆತ್ತು ಎಂದು ಕರೆಯಲ್ಲ, ಯಾಕೆಂದರೆ ಆ ಪದ ಈಗಾಗಲೇ ಬಳಸಿ ಬಳಸಿ ಸವಕಲಾಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Tue, 2 January 24

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us