ಸಾವಯವ ಬೆಲ್ಲದಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ತುಲಾಭಾರ: ವಿಜಯಪುರ ರೈತರಿಂದ ವಿಶೇಷ ಗೌರವ

ಇಲ್ಲಿನ ಸ್ಥಳೀಯ ರೈತರು ಸಾವಯವ ಬೆಲ್ಲದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತುಲಾಭಾರ ಮಾಡುವ ಮೂಲಕ ವಿಶೇಷ ಗೌರವ ನೀಡಿದ್ದಾರೆ.

ಸಾವಯವ ಬೆಲ್ಲದಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ತುಲಾಭಾರ: ವಿಜಯಪುರ ರೈತರಿಂದ ವಿಶೇಷ ಗೌರವ
ಸಿದ್ಧರಾಮಯ್ಯಗೆ ತುಲಾಭಾರ ಮಾಡಿದ ರೈತರು

Updated on: Feb 23, 2023 | 5:39 PM

ವಿಜಯಪುರ: ಇಲ್ಲಿನ ಸ್ಥಳೀಯ ರೈತರು ಸಾವಯವ ಬೆಲ್ಲದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತುಲಾಭಾರ (tulabhara) ಮಾಡುವ ಮೂಲಕ ವಿಶೇಷ ಗೌರವ ನೀಡಿದ್ದಾರೆ. ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ಈ ವಿಶೇಷ ಗೌರವಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸ್ಥಳಿಯ ಶಾಸಕ ಎಂ.ಬಿ ಪಾಟೀಲರಿಗೆ ಸ್ಥಳಿಯ ರೈತರು ಹಾಗೂ ಯುವಕರಿಂದ ಸಾವಯವ ಬೆಲ್ಲದಿಂದ ತುಲಾಭಾರ ಮಾಡಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರಿಗೆ ಕಾಂಗ್ರೆಸ್​ ನಾಯಕರು ಸಾಂಕೇತಿಕವಾಗಿ ಕೆಲ ಮಹಿಳೆಯರಿಗೆ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು.

ಸಣ್ಣ ಕಪ್ಪು ಚುಕ್ಕೆ, ಹಗರಣ ಇಲ್ಲದೆ 165 ಭರವಸೆಗಳನ್ನು ಇಡೇರಿಸಿದ್ದೇವೆ: ಹೆಚ್​ಸಿ ಮಹಾದೇವಪ್ಪ

ಹೆಚ್​ಸಿ ಮಹಾದೇವಪ್ಪ ಮಾತನಾಡಿ, 2013 ರಿಂದ 2018 ರ ತನಕ‌ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಎಂ.ಬಿ ಪಾಟೀಲ್‌ ನೀರಾವರಿ ಮಂತ್ರಿ ಆಗಿದ್ದರು. ಆಗ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಪರದಾಟ ಇತ್ತು. ಆದರೆ ಎಂಬಿಪಿ ನೀರಾವರಿಗೆ ಒತ್ತುಕೊಟ್ಟು 200 ಕಿಲೋ ಮೀಟರ್ ನೀರಾವರಿ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್​ಗೆ ಹೆಸರು ತಂದು ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: Karnataka News Live: ನನ್ನ ಸರ್ಕಾರದ ಅವಧಿಯಲ್ಲಿ ಹೆಚ್ಚು ಸಾಲ ಪಡೆದ ಆರೋಪ ಸುಳ್ಳು ಎಂದ ಸಿಎಂ ಬೊಮ್ಮಾಯಿ

ಒಂದು ಸಣ್ಣ ಕಪ್ಪು ಚುಕ್ಕೆ, ಹಗರಣ ಇಲ್ಲದೆ 165 ಭರವಸೆಗಳನ್ನು ಇಡೇರಿಸಿದ್ದೇವೆ. ಎಜುಕೇಷನ್ ಮಿನಿಸ್ಟರ್ ಅಶ್ವಥನಾರಾಯಣ್ ಸಿದ್ಧರಾಮಯ್ಯ ಅವರನ್ನು ಹೊಡೆದಾಕಿ ಎಂದರು. ಆದರೆ ಸಿದ್ದರಾಮಯ್ಯನವರು ಉದ್ರೇಕವಾಗದೆ, ನನ್ನ ಜೀವ ಇರುವವರೆಗೂ ಬಡವರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇನೆ. ನಾನು ಯಾರಿಗೂ ಹೆದರೋದಿಲ್ಲ ಎಂದಿದ್ದಾರೆ ಎಂದು ಹೇಳಿದರು.

ಇಂತಹ ನಾಯಕ ಸಿದ್ದರಾಮಯ್ಯ ಅವರನ್ನು ಪಡೆದುರುವುದು ನಮ್ಮ ಸೌಭಾಗ್ಯ. ಬಸವ ಅನುಯಾಯಿ ಆಗಿ ಕಂಕಣಬದ್ದವಾಗಿ ದುಡಿಯುತ್ತಿರುವ ಎಂಬಿ ಪಾಟೀಲ್​ಗೆ ಬೆಂಬಲ ಕೊಡಿ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮತ್ತೆ ಬರುವಂತೆ ಮಾಡಿ ಎಂದು ಜನರಲ್ಲಿ ಹೆಚ್​ಸಿ ಮಹಾದೇವಪ್ಪ ಮನವಿ ಮಾಡಿದರು.

ಇದನ್ನೂ ಓದಿ: Siddaramaiah: ಯಡಿಯೂರಪ್ಪಗೆ ನನ್ನ ಮೇಲೆ ಬಹಳ ಪ್ರೀತಿಯಿದೆ; ಸಿದ್ದರಾಮಯ್ಯ ವ್ಯಂಗ್ಯ

ಪ್ರಜಾಧ್ವನಿ ಯಾತ್ರೆ ಮೂಲಕ ಕಾಂಗ್ರೆಸ್​ಗೆ ಬೆಂಬಲ: ಯಶವಂತರಾಯಗೌಡ ಪಾಟೀಲ್

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಮಾತನಾಡಿ, ಪ್ರಜಾಧ್ವನಿ, ಪ್ರಜೆಗಳ ಧ್ವನಿಯನ್ನು ಹೆಳುವ ಕೆಲಸ ಮಾಡುತ್ತಿದೆ. ಈಗಿನ ಸರ್ಕಾರದ ಭಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಶುರುವಾಗಿದೆ. ಸಿದ್ದರಾಮಯ್ಯ ನೇತ್ರತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಎಲ್ಲೆಲ್ಲಿ ಹೋಗಿದೆ ಅಲ್ಲೆಲ್ಲಾ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ಭದ್ದತೆ, ಸಿದ್ದಾಂತವನ್ನು ನಾವೆಲ್ಲರೂ ಬಲ್ಲವರಾಗಿದ್ದೇವೆ. ಸ್ವಾತಂತ್ರ್ಯಪೂರ್ವದಲ್ಲಿ, ನಂತರದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಸ್ಮರಿಸಬೇಕಾಗುತ್ತದೆ. ರಾಷ್ಟ್ರದ ಪ್ರಧಾನಿಗಳನ್ನು ನೆನೆಸಬೇಕಾಗುತ್ತದೆ. ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆ ಮೂಲಕ ಅತಿದೊಡ್ಡ ಜನಾಂದಲೋನ ನಡೆಸುತ್ತಿದ್ದಾರೆ. ಈ ದೇಶಕ್ಕೆ ಇದರ ಅವಶ್ಯಕತೆ ಇದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:28 pm, Thu, 23 February 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us