AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನಾನ್​ವೆಜ್​ ತಿಂದಿದ್ದು ನಿಜ, ಆದ್ರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ: ಸಿ.ಟಿ.ರವಿ ಸ್ಪಷ್ಟನೆ

ನಾನು ನಾನ್​ವೆಜ್​ ತಿಂದಿದ್ದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on:Feb 23, 2023 | 3:25 PM

Share

ಬೆಂಗಳೂರು: ನಾನು ನಾನ್​ವೆಜ್​ ತಿಂದಿದ್ದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ (CT Ravi) ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಅದರ ವೀಕ್ಷಣೆಗೆ ಹೋಗಿದ್ದು, ಅಲ್ಲಿಯ ಸ್ಥಳೀಯರೇ ಕರೆದುಕೊಂಡು ಹೋಗಿದ್ದರು. ಎಲ್ಲವನ್ನೂ ಎದೆ ಬಗೆದು ತೊರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್​ವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ಹೇಳಲ್ಲ. ಕೆಲವು ವೆಜ್ ಮತ್ತು ನಾನ್​ವೆಜ್ ದೇವಸ್ಥಾನಗಳಿಗೆ ಅಲ್ಲಿಗೆ ಮಾಂಸಹಾರಿ ನೈವೇದ್ಯ ಮಾಡಲಾಗುತ್ತೆ. ಅಂಥ ದೇವಸ್ಥಾನಗಳಿಗೆ ಹೋಗಬಹುದು. ಆದ್ರೆ ನಾನು ನಾನ್​ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅದು ನನ್ನ ಭೇಟಿಯ ಉದ್ದೇಶವಾಗಿರಲಿಲ್ಲ. ಅಲ್ಲಿನ ಸ್ಥಳೀಯರ ಅಪೇಕ್ಷೆ‌ ಮೇರಿಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಸಿಟಿ ರವಿ ಸ್ಪಷ್ಟ ಪಡಿಸಿದರು.

ಮಾಂಸಾಹಾರಿ, ಸಸ್ಯಾಹಾರಿ ದೇವಸ್ಥಾನಗಳು ಇವೆ: ಯತ್ನಾಳ್

ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಪ್ರತಿಕ್ರಿಯಿಸಿದ್ದು, ಸಿ.ಟಿ.ರವಿ ದೇವಸ್ಥಾನದ ಒಳಗೆ ಹೋಗಿಲ್ಲ, ಹೊರಗಡೆ ನಿಂತಿದ್ದಾರೆ. ದೇವಾಲಯಗಳಲ್ಲೂ ಹಲವು ವ್ಯತ್ಯಾಸಗಳು ಇವೆ. ಮಾಂಸಾಹಾರಿ, ಸಸ್ಯಾಹಾರಿ ದೇವಸ್ಥಾನಗಳು ಇವೆ. ಹೊರಗೆ ನಿಂತು ನಮಸ್ಕರಿಸಿದ್ದೇನೆಂದು ಸಿ.ಟಿ.ರವಿ ಹೇಳಿದ್ದಾರೆ. ಹೊರಗಿರುವುದು ಬೇರೆ, ದೇಗುಲದೊಳಗೆ ಹೋಗುವುದು ಬೇರೆ ಎಂದು ಹೇಳಿದರು.

ಇದನ್ನೂ ಓದಿ: ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದವರೆಲ್ಲ ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ; ಸಿದ್ದರಾಮಯ್ಯ

ಸಿ.ಟಿ.ರವಿಗೆ ಟ್ವೀಟ್ ಮೂಲಕ ಟಾಂಗ್​ ಕೊಟ್ಟ ಸಿದ್ದರಾಮಯ್ಯ  

ಇನ್ನು ಸಿ.ಟಿ.ರವಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಮಾಂಸ ಸೇವನೆ, ದೇವಸ್ಥಾನ ಭೇಟಿ ವಿಚಾರ ವೈಯಕ್ತಿಕ ಆಯ್ಕೆಗಳು. ಇಂಥಹ ವಿಚಾರಗಳು ರಾಜಕೀಯ ಚರ್ಚೆಯ ವಸ್ತು ಆಗಬಾರದು. ನಾಯಕರು ಜನ ಕಲ್ಯಾಣ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು. ಪರರನ್ನು ಟೀಕಿಸುವ ಸಿ.ಟಿ.ರವಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಸಿ.ಟಿ.ರವಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: Siddaramaiah: ಯಡಿಯೂರಪ್ಪಗೆ ನನ್ನ ಮೇಲೆ ಬಹಳ ಪ್ರೀತಿಯಿದೆ; ಸಿದ್ದರಾಮಯ್ಯ ವ್ಯಂಗ್ಯ

ಸುಳ್ಳು ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಅಂದ್ರು

ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಸತ್ಯ ಸಾರುತ್ತಿದೆ. ಹೀಗಿರುವಾಗ ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈಮುಗಿದಿದ್ದೆ ಎಂಬ ಸಿ.ಟಿ.ರವಿ ವಾದ ಹಸಿ ಸುಳ್ಳು. ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆ ಇದೆ. ಈ ಹಿಂದೆ ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು BJP ನಾಯಕರು ಸುಳ್ಳು ಸುದ್ದಿ ಪ್ರಚಾರ ಮಾಡಿದ್ದರು. ಸುಳ್ಳು ಸುದ್ದಿ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಅಂದ್ರು.

ಹೀಗೆ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ.ರವಿ ಕೃತ್ಯದಿಂದ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ. ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ. ರಾಜ್ಯದ ಕೆಲವು ಮಠಾಧೀಶರು ಈ ಬಗ್ಗೆ ಮೌನವಾಗಿದ್ದಾರೆ. ಇದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ​​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Thu, 23 February 23