ಅಲ್ಪಸಂಖ್ಯಾತರ ಪತ್ರಿಕೆಗಳಿಗೂ ಜಾಹೀರಾತು ಕೊಡಬೇಕೆಂದು ಪರಿಷತ್ನಲ್ಲಿ ಕಾಂಗ್ರೆಸ್ ಆಗ್ರಹ; ಸಿಎಂ ಬೊಮ್ಮಾಯಿ ಉತ್ತರ ಇಲ್ಲಿದೆ
ಹಿಂದಿನ ಆದೇಶ ರದ್ದಾಗಿದೆ. ಹಿಂದುಳಿದ ವರ್ಗದವರು ನಡೆಸುವ ಪತ್ರಿಕೆಗಳಿಗೂ ಜಾಹಿರಾತು ನೀಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಜಾಹೀರಾತು ಕೊಡಬೇಕು ಎಂದು ಜಬ್ಬಾರ್ ಹೇಳಿದ್ದಾರೆ. ಯಾರೆಲ್ಲ ಪತ್ರಿಕೆ ನಡೆಸುತ್ತಿದ್ದಾರೋ, ಅವರಿಗೆ ತರಬೇತಿ ನೀಡಿ, ಜಾಹಿರಾತು ನೀಡುವ ವ್ಯವಸ್ಥೆ ಆಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: ಮೇಲ್ವರ್ಗದವರು ನಡೆಸುವ ಪತ್ರಿಕೆಗಳಿಗೆ ಜಾಹೀರಾತು (Advertisement) ನೀಡಬೇಕೆಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಅದೇ ರೀತಿ ಅಲ್ಪಸಂಖ್ಯಾತರು ನಡೆಸುವ ಪತ್ರಿಕೆಗಳಿಗೂ ಜಾಹಿರಾತು ಕೊಡಬೇಕು ಎಂದು ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ (Congress) ಅಬ್ದುಲ್ ಜಬ್ಬಾರ್ ಪ್ರಸ್ತಾಪಿಸಿದರು. ಹಿಂದುಳಿದ ವರ್ಗದವರು 20 ವರ್ಷಗಳಿಂದ ಪತ್ರಿಕೆಗಳಿನ್ನು ನಡೆಸುತ್ತಿದ್ದಾರೆ. ಅವರು ನಡೆಸುವ ಪತ್ರಿಕೆಗಳಿಗೆ ಸರ್ಕಾರ ಜಾಹೀರಾತು ನೀಡುತ್ತಿಲ್ಲ ಮೇಲ್ವರ್ಗದವರು ನಡೆಸುವ ಪತ್ರಿಕೆಗಳಿಗೆ ಜಾಹಿರಾತು ನೀಡಬೇಕೆಂಬ ಆದೇಶವನ್ನು ಇತ್ತೀಚೆಗಷ್ಟೇ ನೋಡಿದೆ ಎಂದು ಅವರು ಹೇಳಿದರು. ಅಬ್ದುಲ್ ಜಬ್ಬಾರ್ ಮಾತಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಧ್ವನಿಗೂಡಿಸಿದರು. ಮೇಲ್ವರ್ಗದವರು ನಡೆಸುವ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗುತ್ತಿದೆ. ಅದೇ ರೀತಿ ಹಿಂದುಳಿದ ವರ್ಗದವರ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಹಿಂದಿನ ಆದೇಶ ತಿದ್ದುಪಡಿ ಮಾಡಿದ್ದೇವೆ; ಬೊಮ್ಮಾಯಿ
ಜಾಹೀರಾತು ನೀಡುವ ವಿಚಾರವಾಗಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಮೂರು ವರ್ಷದಲ್ಲಿ ಖಾಸಗೀ ಮಾಧ್ಯಮಗಳಿಗೆ ಜಾಹಿರಾತು ನೀಡುವ ಬಗ್ಗೆ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಆದೇಶ ರದ್ದಾಗಿದೆ. ಹಿಂದುಳಿದ ವರ್ಗದವರು ನಡೆಸುವ ಪತ್ರಿಕೆಗಳಿಗೂ ಜಾಹಿರಾತು ನೀಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಜಾಹೀರಾತು ಕೊಡಬೇಕು ಎಂದು ಜಬ್ಬಾರ್ ಹೇಳಿದ್ದಾರೆ. ಯಾರೆಲ್ಲ ಪತ್ರಿಕೆ ನಡೆಸುತ್ತಿದ್ದಾರೋ, ಅವರಿಗೆ ತರಬೇತಿ ನೀಡಿ, ಜಾಹಿರಾತು ನೀಡುವ ವ್ಯವಸ್ಥೆ ಆಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಸುತ್ತೋಲೆ ತಿಳಿಸಿತ್ತು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಈಗಾಗಲೇ ಪ್ರೋತ್ಸಾಹ ರೂಪದ ಜಾಹೀರಾತು ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ