Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ದೇವೇಗೌಡರು ಪಕ್ಷದಿಂದ ಯಾರನ್ನ ಉಚ್ಛಾಟನೆ ಮಾಡ್ತಾರೆ ನೋಡೋಣ: ರೇವಣ್ಣ ಗುಡುಗು

ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಹೋಗಲಿ. ಸಂತೋಷ, ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಹೇಳಿದರು.

ಹೆಚ್​ಡಿ ದೇವೇಗೌಡರು ಪಕ್ಷದಿಂದ ಯಾರನ್ನ ಉಚ್ಛಾಟನೆ ಮಾಡ್ತಾರೆ ನೋಡೋಣ: ರೇವಣ್ಣ ಗುಡುಗು
ಜೆಡಿಎಸ್ ನಾಯಕ ಹೆಚ್​​ ಡಿ ರೇವಣ್ಣ
Follow us
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ

Updated on:Oct 17, 2023 | 2:34 PM

ಹಾಸನ ಅ.17: ಬಿಜೆಪಿ (BJP) ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ, ಮುನಿಸಿಕೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಸೋಮವಾರ ತಮ್ಮ ಬೆಂಬಲಿಗರ ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ನಮ್ಮದೆ “ಓರಿಜಿನಲ್​ ಜೆಡಿಎಸ್​​, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಪಕ್ಷವಾಗಿಲ್ಲ” ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಮಾತನಾಡಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು (HD Devegowda) ಯಾರನ್ನು ಉಚ್ಛಾಟನೆ ಮಾಡ್ತಾರೆ ನೋಡೋಣ, ತೀರ್ಮಾನ ಮಾಡುತ್ತಾರೆ ಎಂದು ಗುಡುಗಿದ್ದಾರೆ.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಸಂತೋಷ, ನಮ್ಮದೇನು ಅಭ್ಯಂತರವಿಲ್ಲ. ಜೆಡಿಎಸ್ ಇಬ್ಭಾಗ ಆಗಲ್ಲ, 19 ಜನ ಎಂಎಲ್‌ಎಗಳು ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಈ ಪಾರ್ಟಿಗಾಗಿ ಏನೇನು ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ ಎಂದರು.

ಅವರ ಮಾತಿಗೆಲ್ಲ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ಆ ಸಭೆಯಲ್ಲಿ ಯಾರು ಕುಳಿತಿದ್ದಾರೆ ನೋಡಿದ್ರಾ? ಜೆ.ಹೆಚ್.ಪಟೇಲ್ ಮಗನನ್ನು ಕೂರಿಸಿಕೊಂಡು ಸಭೆ ಮಾಡಿದ್ದಾರೆ. ದೇವೇಗೌಡರನ್ನು ಅರವತ್ತು ವರ್ಷ ಕಾಂಗ್ರೆಸ್ ಹೇಗೆ ನೆಡೆಸಿಕೊಂಡಿದೆ ಎಂಬುವುದು ಗೊತ್ತಿದೆ. ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಹೆಚ್​ಡಿಕೆ ಉಚ್ಚಾಟಿಸುವ ಅಧಿಕಾರ ಪಕ್ಷದ ಅಧ್ಯಕ್ಷರಿಗಿರುತ್ತೆ: ಇಬ್ರಾಹಿಂ ಹೇಳಿಕೆಗೆ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ

ಅಂತಹ ಕಾಂಗ್ರೆಸ್‌ಗೆ ಹೋಗಿ ಬೀಳ್ಳುತ್ತೀರಿ ಅಂದರೆ ನಮಗೇನು ಅಭ್ಯಂತರ ಇಲ್ಲ. ಕಾಂಗ್ರೆಸ್​ ಅನ್ನು ಇಬ್ರಾಹಿಂ ಮುಗಿಸಿ ಆಯ್ತು. ಈಗ ನಮ್ಮ ಹತ್ತಿರ ಬಂದಿದ್ದಾರೆ. ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲ. ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗ ಇಲ್ಲ. ಇಂತಹ ಕಾಂಗ್ರೆಸ್‌ಗೆ ಹೆದರುವುದಾದರೆ ಮನೆ ಸೇರಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌ನ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತೆ ಎಂದು ವಾಗ್ದಾಳಿ ಮಾಡಿದರು.

ನಾನು‌ ರಾಜ್ಯಾಧ್ಯಕ್ಷನಾಗಿದ್ದರೇ ಕುಮಾರಸ್ವಾಮಿಯನ್ನ 6 ವರ್ಷ ಅಮಾನತು ಮಾಡುತ್ತಿದ್ದೆ

ಸಿ.ಎಂ.ಇಬ್ರಾಹಿಂ ನಿಲುವು ಸರಿಯಾಗಿದೆ. ನಾನು‌ ರಾಜ್ಯಾಧ್ಯಕ್ಷನಾಗಿದ್ದರೇ ಹೆಚ್​.ಡಿ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ. ರಾಷ್ಟ್ರೀಯ ಅಧ್ಯಕ್ಷರಿಗೆ ವಿಧಯನಾಗಿರುತ್ತೇನೆ. ಕುಮಾರಸ್ವಾಮಿಗೆ ನನಗು ಸಂಬಂಧ ಇಲ್ಲ ಅನ್ನೋದು ನಿಜ. ಕುಮಾರಸ್ವಾಮಿ ವಯಕ್ತಿಯವಾಗಿ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ. ಜ್ಯಾತ್ಯಾತೀತ ಅನ್ನೋ ಅರ್ಥವನ್ನೇ ತೆಗೆದು‌ ಹಾಕಿದ್ದಾರೆ. ಸಿ.ಎಂ.ಇಬ್ರಾಹಿಂ ತೆಗೆದುಕೊಂಡ ನಿಲುವು ರಾಜಕೀಯ ಹಿನ್ನಲೆಗೆ ಸರಿಯಾಗಿದೆ ಎಂದು ಮೈಸೂರಿನಲ್ಲಿ ಸಿಎಂ ಇಬ್ರಾಹಿಂ ಪರ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಬ್ಯಾಟ್ ಬೀಸಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರವನ್ನು ಅಮಾನತು ಮಾಡುವ ಅಧಿಕಾರವಿದೆ. ಜ್ಯಾತ್ಯಾತೀತ ಶಕ್ತಿ ಕೊಲೆ ಮಾಡಿ, ಜಾತಿವಾದಿ ಮತ್ತು ಕೋಮುವಾದಿ ಬಿಜೆಪಿ ಜೊತೆ ಮದುವೆ ಆಗುತ್ತೇನೆ ಅಂತಿದ್ದಾರೆ ಕುಮಾರಸ್ವಾಮಿ. ಅಂತಹವರನ್ನ ಅಮಾನತು ಮಾಡುವ ಅಧಿಕಾರ ಇಬ್ರಾಹಿಂಗೆ ಇದ್ದೆ ಇದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:34 pm, Tue, 17 October 23

ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ