AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮುಲು ಸಹೋದರಿ ಜೆ ಶಾಂತಾ YSR ಕಾಂಗ್ರೆಸ್‌ ಪಕ್ಷ ಸೇರ್ಪಡೆ, ಕರ್ನಾಟಕ ಬಿಟ್ಟು ಆಂಧ್ರ ರಾಜಕಾರಣಕ್ಕೆ ಎಂಟ್ರಿ?

ಮಾಜಿ ಸಚಿವ ಶ್ರೀರಾಮುಲು ಸಹೋದರಿ, ಮಾಜಿ‌ ಸಂಸದೆ ಜೆ.ಶಾಂತಾ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಸಮ್ಮುಖದಲ್ಲಿ ವಿಜಯವಾಡದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಮುಂಬರುವ ಲೋಕಸಭಾ‌ ಚುನಾವಣೆಯಲ್ಲಿ ಹಿಂದೂಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಶ್ರೀರಾಮುಲು ಸಹೋದರಿ ಜೆ ಶಾಂತಾ YSR ಕಾಂಗ್ರೆಸ್‌ ಪಕ್ಷ ಸೇರ್ಪಡೆ, ಕರ್ನಾಟಕ ಬಿಟ್ಟು ಆಂಧ್ರ ರಾಜಕಾರಣಕ್ಕೆ ಎಂಟ್ರಿ?
ಶ್ರೀರಾಮುಲು ಸಹೋದರಿ ಜೆ ಶಾಂತಾ YSR ಕಾಂಗ್ರೆಸ್‌ ಪಕ್ಷ ಸೇರ್ಪಡೆ
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Edited By: |

Updated on: Jan 02, 2024 | 9:47 PM

Share

ಬಳ್ಳಾರಿ, ಜ.2: ಮಾಜಿ ಸಚಿವ ಶ್ರೀರಾಮುಲು (Sriramulu) ಸಹೋದರಿ, ಮಾಜಿ‌ ಸಂಸದೆ ಜೆ.ಶಾಂತಾ (J Shantha) ಅವರು ವಿಜಯವಾಡದಲ್ಲಿ ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ (Jagan Mohan Reddy) ಸಮ್ಮುಖದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. ವಿಜಯವಾಡದ ತಾಡಿಪಲ್ಲಿ ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ಪಕ್ಷ ಸೇರ್ಪಡೆಯಾದರು.

ಬಳ್ಳಾರಿ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಂತಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂಪುರ ಲೋಕಸಭಾ ಕ್ಷೇತ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಶಾಂತಾ ಅವರು ವಾಲ್ಮೀಕಿ ಸಮುದಾಯದವರಾಗಿದ್ದಾರೆ. ಹಿಂದೂಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ 4.5 ಲಕ್ಷ ಮತದಾರರಿದ್ದಾರೆ.

ಇದನ್ನೂ ಓದಿ: ಕೇರಳ: ಆರ್ಥೊಡಾಕ್ಸ್ ಚರ್ಚ್ ಪಾದ್ರಿ, 50 ಕ್ರೈಸ್ತ ಕುಟುಂಬಗಳು ಬಿಜೆಪಿಗೆ ಸೇರ್ಪಡೆ

ಅನಂತಪುರಂ ಜಿಲ್ಲೆಯ ಗುಂತಕಲ್ ಪಟ್ಟಣದ ನಿವಾಸಿಯಾಗಿರುವ ಜೆ.ಶಾಂತಾ ಅವರು 2009 ರಲ್ಲಿ ಶ್ರೀರಾಮುಲು ಸಹಕಾರದಿಂದ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಜಗನ್‌ಮೋಹನ್‌ರೆಡ್ಡಿ ಸಂಸದರಾಗಿದ್ದಾಗ ಲೋಕಸಭೆಯಲ್ಲಿ ಶಾಂತಾ ಪರಿಚಯವಾಗಿದ್ದು, ಇದು ಶಾಂತಾ ಅವರ ಆಂಧ್ರಪ್ರದೇಶದ ರಾಜಕೀಯ ಎಂಟ್ರಿಗೆ‌ ಕಾರಣವಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ