ಬೆಳಗಾವಿ: ಬಿಜೆಪಿ ಚುನಾವಣೆ ಚಾಣಕ್ಯ ಅಮಿತ್ ಶಾ ಇಂದು(ಜನವರಿ 28) ಹುಬ್ಬಳ್ಳಿ-ಧಾರವಾಡ ಹಾಗೂ ಬಳಗಾವಿ ಜಿಲ್ಲೆಯಲ್ಲಿ ಸಂಚರಿಸಿ ರಾಜ್ಯ ಕೇಸರಿ ಪಡೆಗೆ ಮತ್ತಷ್ಟು ಜೋಶ್ ತುಂಬಿದ್ದಾರೆ. ಬಳಿಕ ಬೆಳಗಾವಿಯಲ್ಲಿ ಅಮಿತ್ ಶಾ ಸೀಕ್ರೆಟ್ ಸಭೆ ನಡೆಸಿದ್ದು, ಸಭೆಯಲ್ಲಿ ರಾಜ್ಯ ನಾಯಕರಿಗೆ ಕೆಲ ಟಾಸ್ಕ್ ಕೊಟ್ಟಿದ್ದಾರೆ. ಇನ್ನು ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತೆ ಎಂದು ಹೇಳಿದ್ದಾರೆ, ಆದ್ರೆ, ಆ ಒಳ್ಳೆಯ ಬೆಳವಣಿಗೆ ಏನು ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಅಮಿತ್ ಶಾ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದು ಸಭೆ ಮಾಡಿದ್ದಕ್ಕೆ ಬಹಳ ಒಳ್ಳೆಯದಾಗಿದೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಅರುಣ್ ಸಿಂಗ್ ಅವರು ಬೆಳಗಾವಿ ಒಳ್ಳೆ ವಾತಾವರಣ ಇದ್ದು ಎಲ್ಲರೂ ಕೂಡಿ ಹೆಚ್ಚಿನ ಸೀಟ್ ಗೆಲ್ಲುವ ಪ್ರಯತ್ನ ಮಾಡಬೇಕೆಂದು ಆದೇಶ ಮಾಡಿದ್ದಾರೆ. ಆ ಪ್ರಕಾರ ನಾಳೆಯಿಂದ ಎಲ್ಲರೂ ಎನೇ ವ್ಯತ್ಯಾಸ ಇದ್ರೂ ಮರೆತು ಪಕ್ಷದ ಕೆಲಸ ಮಾಡುತ್ತೇವೆ. ಲೀಡರ್ ಶಿಪ್ ಭಾರತೀಯ ಜನತಾ ಪಾರ್ಟಿ, ಮೋದಿಯವರು, ಅಮಿತ್ ಶಾ ಅವರು ಮಾಡಲಿದ್ದಾರೆ. ಎಲ್ಲರೂ ಕೂಡಿ ಭಾರತೀಯ ಜನತಾ ಪಾರ್ಟಿ ಲೀಡರ್‌ಶೀಪ್ ನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಎಲ್ಲರೊಳಗೆ ಭಿನ್ನಾಭಿಪ್ರಾಯ ಇಲ್ಲ. ಕೆಲವೊಂದು ಕಡೆ ಇರಬಹುದು. ಇಂದು ಅಮಿತ್ ಶಾ ಮೀಟಿಂಗ್ ಮಾಡಿದ್ದರಿಂದ ಬೆಳಗಾವಿ ಬಿಜೆಪಿಗೆ ಒಳ್ಳೆ ಬೆಳವಣಿಗೆ. ಮೀಟಿಂಗ್ ನಲ್ಲಿ ಬಹಳಷ್ಟು ವಿಚಾರ ಚರ್ಚೆಯಾಗಿದ್ದು, ಎಲ್ಲರ ಅಭಿಪ್ರಾಯ ಕೇಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಗೆ ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು,
ಎಲ್ಲರೂ ಕೂಡಿ ಗಟ್ಟಿಯಾಗಿ ನಿಂತು ಕನಿಷ್ಠ ಹದಿನೈದು ಸೀಟ್ ಗೆಲ್ಲಬೇಕು ಅಂತ ಹೇಳಿದ್ದಾರೆ. ಆ ಪ್ರಕಾರ ನಾವೆಲ್ಲರೂ ಕೂಡಿ ಕೆಲಸ ಮಾಡುತ್ತೇವೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಅವರು ಹೇಳಿದ್ದು ಒಳ್ಳೆಯದಕ್ಕೆ ಎಂದು ನಾವೆಲ್ಲರೂ ಕೂಡಿ ಕೆಲಸ ಮಾಡಬೇಕು. ಫೆ.1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತೆ. ಹದಿನೈದು ಸೀಟ್ ಗೆಲ್ಲಬೇಕೆಂದು ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲಾ ಲೀಡರ್‌ಗಳು ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಆದ್ರೆ, ಫೆ.1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತೆ ಎಂದು ಹೇಳಿರುವ ಜಾರಕಿಹೊಳಿ, ಆ ಒಳ್ಳೆಯ ಬೆಳವಣಿಗೆ ಏನು ಎನ್ನುವುದು ಮಾತ್ರ ಹೇಳದೇ ಕುತೂಹಲ ಹುಟ್ಟುಹಾಕಿದ್ದಾರೆ.
Published On - 12:13 am, Sun, 29 January 23