ಬೆಂಗಳೂರು: ಅನಿತಾ ಕುಮಾರಸ್ವಾಮಿ ಅವರನ್ನು ಮುಂದಿನ ಚುನಾವಣೆಗೆ ನಿಲ್ಲಿಸಲ್ಲ. ಅನಿತಾರನ್ನು ಮುಂದಿನ ಚುನಾವಣೆಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂದು (ಫೆಬ್ರವರಿ 9) ಹೇಳಿಕೆ ನೀಡಿದ್ದಾರೆ. ಪಕ್ಷ ಉಳಿಸಿಕೊಳ್ಳಲು ನನ್ನ ಪತ್ನಿಯನ್ನ ಕಣಕ್ಕಿಳಿಸಬೇಕಾಯಿತು. ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಅನಿತಾ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಲ್ಲ ಎಂಬ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ಕುಮಾರಸ್ವಾಮಿ ಈಗಲೇ ಈ ರೀತಿ ಹೇಳಿಕೆ ನೀಡಬಾರದು. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತು ಏನೂ ಹೇಳಿಲ್ಲ. ನಾವು ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧೆ ಮಾಡ್ತಿದ್ದೇವೆ ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಪಕ್ಷ ತೊರೆಯುವ ವಿಚಾರವಾಗಿ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ. ಒಂದೆರಡು ವಿಚಾರದಲ್ಲಿ ಹೆಚ್ಡಿಕೆ ಮೇಲೆ ಬೇಸರ ಇರಬಹುದು. ಕುಮಾರಸ್ವಾಮಿಯೇ ಹಿಂದೆ ದತ್ತಾರನ್ನ ಎಂಎಲ್‌ಸಿ ಮಾಡಿದ್ದರು. ನನ್ನ ಜೊತೆ ಇರುವಂತೆ ವೈಎಸ್‌ವಿ ದತ್ತಾಗೆ ಹೇಳಿದ್ದೇನೆ. ಪುಟ್ಟರಾಜು ವಿಚಾರದಲ್ಲೂ ಇಂತಹ ಊಹಾಪೋಹಗಳಿದ್ದವು. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಸ್ಪಷ್ಟನೆ ನೀಡಿದ್ದರು ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: Opinion: ಹೆಚ್ ಡಿ ದೇವೇಗೌಡರ ಕೈಯಲ್ಲಿ ಸಿಎಂ ಇಬ್ರಾಹಿಂ ಒಂದು ರಾಜಕೀಯ ಅಸ್ತ್ರವಾಗಬಹುದೇ? ಒಂದು ವಿಶ್ಲೇಷಣೆ
ಇದನ್ನೂ ಓದಿ: Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್ಡಿ ಕುಮಾರಸ್ವಾಮಿ ಕಿಡಿ