ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ: ಶ್ರೀಕಾಂತ್ ಪ್ರಕರಣ ಉಲ್ಲೇಖಿಸಿ ದೇವೇಗೌಡ ವಾಗ್ದಾಳಿ

| Updated By: Ganapathi Sharma

Updated on: Jan 05, 2024 | 2:01 PM

ನಾವು ಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿಯನ್ನು ‌ಸೋಲಿಸಿ 20 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಎಲ್ಲರ ನಿರೀಕ್ಷೆ ಮೀರಿ ಜನ ತೀರ್ಪು ಕೊಡುತ್ತಾರೆ. ಆಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ ಹವಾ ಮುಗಿಯುತ್ತದೆ ಎಂದು ದೇವೇಗೌಡ ಹೇಳಿದರು.

ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ: ಶ್ರೀಕಾಂತ್ ಪ್ರಕರಣ ಉಲ್ಲೇಖಿಸಿ ದೇವೇಗೌಡ ವಾಗ್ದಾಳಿ
ಹೆಚ್​ಡಿ ದೇವೇಗೌಡ
Follow us on

ಬೆಂಗಳೂರು, ಜನವರಿ 5: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಪೂಜಾರಿ ವಿರುದ್ಧದ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತರುವ ಮೂಲಕ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ (HD Deve Gowda) ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜತೆ ಚುನಾವಣೆ ಎದುರಿಸುತ್ತೇವೆ, ಇದರಲ್ಲಿ ಸಂಶಯ ಬೇಡ. ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದಾಗ ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ನಮಗೆ ಇದೆ. ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ. 4 ರಾಜ್ಯಗಳ ಚುನಾವಣೆಗೆ‌ ಅವರು ಎಷ್ಟು ಹಣ ತೆಗೆದುಕೊಂಡು ಹೋಗಿದ್ದಾರೆ? ಡಿಸಿಎಂ ಡಿಕೆ ಶಿವಕುಮಾರ್ ಎಷ್ಟು ಹಣ ಸಾಗಿಸಿದ್ದಾರೆ, ಎಷ್ಟು ಹಣ ಸೀಜ್ ಆಗಿದೆ ಎಂದು ಪ್ರಶ್ನಿಸಿದ ದೇವೇಗೌಡರು, ಈ ಬಗ್ಗೆ ಚುನಾವಣೆ ಆಯೋಗ ಗಮನ ಹರಿಸಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶಕ್ಕೆ ಬುದ್ಧಿ ಹೇಳುತ್ತಾರೆ. ಅವರಿಗೆ ಅಕ್ರಮ ತಡೆಯಲು ಶಕ್ತಿ ಇದೆಯಾ? ಟಿಪ್ಪು ಸುಲ್ತಾನ್​ ವಿಚಾರ ಬಿಟ್ಟರೆ ಈ ದೇಶದಲ್ಲಿ ಬೇರೆ ಬೇರೇನೂ ಇಲ್ವಾ ಎಂದು ಅವರು ಪ್ರಶ್ನಿಸಿದರು.

ನಾವೂ ರಾಮನ ಪೂಜೆ ಮಾಡುತ್ತೇವೆ. ಅಜ್ಮೀರ್ ದರ್ಗಾ, ಗೋಲ್ಡನ್ ಟೆಂಪಲ್, ತಿರುಪತಿಗೂ ಹೋಗಿದ್ದೇನೆ ಎಂದು ಅವರು ಹೇಳಿದರು.

ನಾವು ಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿಯನ್ನು ‌ಸೋಲಿಸಿ 20 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಎಲ್ಲರ ನಿರೀಕ್ಷೆ ಮೀರಿ ಜನ ತೀರ್ಪು ಕೊಡುತ್ತಾರೆ. ಆಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ ಹವಾ ಮುಗಿಯುತ್ತದೆ ಎಂದು ದೇವೇಗೌಡ ಹೇಳಿದರು.

ಇದನ್ನೂ ಓದಿ: ಬಡವರ ಜಮೀನು ಉಳಿಸಿಕೊಟ್ಟರೆ ಸಿದ್ದರಾಮಯ್ಯಗೆ ಆಭಾರಿ: ನೈಸ್ ಯೋಜನಯಿಂದ ಬಡವರಿಗೆ ಅನ್ಯಾಯವೆಂದ ದೇವೇಗೌಡ

ಇಷ್ಟೇ ಅಲ್ಲದೆ, ನೈಸ್ ಅಕ್ರಮ ವಿಚಾರವಾಗಿಯೂ ಮಾತನಾಡಿದ ದೇವೇಗೌಡರು, ಸಿದ್ದರಾಮಯ್ಯ ಬಡವರನ್ನು ಉಳಿಸುವ ಕೆಲಸ ಮಾಡಲಿ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ರೆ ಅವರಿಗೆ ಅಭಾರಿಯಾಗಿರುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ