AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ: ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ದಂಧೆ ಬಗ್ಗೆ ಸರಣಿ ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇಂಧನ ಇಲಾಖೆಯ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ: ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Sunil MH
| Updated By: ರಮೇಶ್ ಬಿ. ಜವಳಗೇರಾ|

Updated on:Jul 05, 2023 | 12:30 PM

Share

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಇದೇ ವಿಚಾರಕ್ಕೆ ಸಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್​ ನಡುವೆ ಟ್ವೀಟ್ ವಾರ್​ ನಡೆದಿದ್ದು, ದಳಪತಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರವೂ ತಾರಕಕ್ಕೇರಿದೆ. ವೈಎಸ್​ಟಿ ಆರೋಪಕ್ಕೆ ದಾಖಲೆ ಇಟ್ಟು ಮಾತನಾಡಲಿ, ಸುಮ್ನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಕಾಂಗ್ರೆಸ್​ ನಾಯಕರು ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ, ಇಂದು ಮತ್ತೆ ಸರ್ಕಾರದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್​ ಟ್ವೀಟ್ ವಾರ್: ಕುಮಾರಸ್ವಾಮಿ YST ಆರೋಪಕ್ಕೆ KST ಬಾಣ ಬಿಟ್ಟ ಕೈ ಪಡೆ

ಇಂಧನ ಇಲಾಖೆಯಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆ. ನಿನ್ನೆ(ಜುಲೈ 04) ಇಂಧನ ಇಲಾಖೆಯಲ್ಲಿ ಎರಡು ಟ್ರಾನ್ಸ್ ಫರ್ ಆಗಿದೆ.  ಇಂಧನ ಇಲಾಖೆಯಲ್ಲಿ 10 ಕೋಟಿ ರೂ,ಗೆ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಆ ಅಧಿಕಾರಿ ದಿನಕ್ಕೆ 50 ಲಕ್ಷ ರೂ. ಕಮಿಷನ್ ಹೊಡೆಯುತ್ತಾನೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೇ ಪರೋಕ್ಷವಾಗಿ ಉಪಮುಖ್ಯಮಂತ್ರಿ, ಇಂಧನ ಸಚಿವ ಡಿಕೆ ಶಿವಕುಮಾರ್​ ಅವರನ್ನು ಟಾರ್ಗೆಟ್ ಮಾಡಿದರು. ಇನ್ನು ಕುಮಾರಸ್ವಾಮಿ ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಅಧಿಕಾರಿಗಳ ವರ್ಗಾವಣೆ ಪತ್ರ ಟಿವಿ9ಗೆ ಲಭ್ಯವಾಗಿದೆ.

ವೈಎಸ್​ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್​) ಆರೋಪಕ್ಕೆ ಕಾಂಗ್ರೆಸ್​, ಕುಮಾರಸ್ವಾಮಿ ವಿರುದ್ಧ ಕೆಎಸ್​ಟಿ ಬಾಣ ಬಿಟ್ಟಿದೆ. ತಾಜ್ ವೆಸ್ಟೆಂಡ್​ನ ರೂಮಿನ ಬಾಡಿಗೆಗೆ ಹಣ ಎಲ್ಲಿಂದ ಕಟ್ಟಿದ್ದೀರಿ? ಉಳುಮೆ ಮಾಡಿ ಕಟ್ಟಿದ್ದಾ ಎಂದು ಪ್ರಶ್ನಿಸಿದೆ. ಇದಕ್ಕೆ ಇದೀಗ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, KST ಟ್ಯಾಕ್ಸ್ ನಾನ್ ಇಟ್ಟುಕೊಂಡಿಲ್ಲ. ತಾಜ್ ವೆಸ್ಟೆಂಡ್ ದ್ದು ಬಾಕಿ ಬಿಲ್ ಕಾಂಗ್ರೆಸ್​ಗೆ ಕಳಿಸಿದ್ರಾ? ನಾನೇನು ಬೀದಿಲಿ ಹೋಗುವವರಾ? ಎರಡು ಮೂರು ಲಕ್ಷ ರೂ. ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದರು.

ತಾಜ್ ವೆಸ್ಟ್ ಎಂಡ್‌ನಲ್ಲಿ ಈಗಲೂ ರೂಂ ಇದೆ. ಇವರನ್ನು ಕೇಳಿ ನಾನು ರೂಂ ಮಾಡಬೇಕಾ? ಎಷ್ಟು ಗಂಟೆಗೆ ವಾಶ್‌ರೂಂಗೆ ಹೋಗಬೇಕು ಎಂದು ಕಾಂಗ್ರೆಸ್‌ನವರನ್ನ ಕೇಳಬೇಕಾ? ನಾನು ರೌಡಿಗಳಿಗೆ ಬಾಟಲ್ ತಂದುಕೊಟ್ಟವನಲ್ಲ. ನಾನು ಬ್ಲೂಫಿಲ್ಮ್ ತೋರಿಸಿದವನಲ್ಲ. ನನ್ನ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಎಚ್ಚರಿಕೆ ನೀಡಿದರು.

ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ. ಮೈ ಪರಚಿಕೊಳ್ಳಬೇಡಿ ಅಂತಾ ಗುಂಡೂರಾವ್ ಹೇಳಿದ್ದಾರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ. ಸೋತಾಗಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಬ್ಲೂಪಿಲ್ಮಂ ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆಯಿದೆ ಎಂದು ಯಾರೋ ಹೇಳಿದ್ರು. ಆ ನಗದು ಅಭಿವೃದ್ಧಿ ಇಲಾಖೆ ಯಾವುದು ಅಂತಾ ಅರ್ಥವಾಗಲಿಲ್ಲ. ಯಾಕೆ ಹೀಗೆ ಕರೆತಿದ್ದಾರೆಂದು ಆಮೇಲೆ ಗೊತ್ತಾಯಿತು . ನಗರಾಭಿವೃದ್ಧಿ ಇಲಾಖೆ ಅಲ್ಲ ನಗದು ಅಭಿವೃದ್ಧಿ ಇಲಾಖೆ ಅಂತ ಎಂದು ಹೆಸರು ಹೇಳಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಸರೇಳದೇ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಇನ್ನಷ್ಟು  ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:29 pm, Wed, 5 July 23